ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ತವ್ಯ ಪ್ರಜ್ಞೆಯೇ ದೇಶಸೇವೆ: ವೆಟರನ್ ಶ್ರೀ ರವಿಚಂದ್ರ ಎಚ್.ಎಸ್.

ಕರ್ತವ್ಯ ಪ್ರಜ್ಞೆಯೇ ದೇಶಸೇವೆ – ವೆಟರನ್ ಶ್ರೀ ರವಿಚಂದ್ರ ಎಚ್. ಎಸ್. ಸ್ವಾತಂತ್ರವು ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ ಮತ್ತು ಬಲಿದಾನಗಳ ಫಲವಾಗಿದೆ. ಭಾರತವು ಅಭಿವೃದ್ದಿ ಹೊಂದಿದ ವಿಕಸಿತ ಭಾರತವಾಗಲು ಸ್ವಾತಂತ್ರ್ಯದ ಮಹತ್ವ ಯುವ ಜನತೆ ತಿಳಿದುಕೊಳ್ಳಬೇಕು. ನಮ್ಮ ಕರ್ತವ್ಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ದಕ್ಷತೆಯಿಂದ ಅವುಗಳನ್ನು ನಿರ್ವಹಿಸುವುದು ನಿಜವಾದ ದೇಶ ಸೇವೆ ಎಂದು ನಿವೃತ್ತ ಸೇನಾಧಿಕಾರಿ ಮತ್ತು ಕೋಟೇಶ್ವರದ ನಿವೃತ್ತ ಗ್ರಂಥಪಾಲಕ ವೆಟರನ್ ಶ್ರೀ ರವಿಚಂದ್ರ ಎಚ್ ಎಸ್ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಂಕರನಾರಾಯಣದಲ್ಲಿ ಐಕ್ಯೂಎಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ನಡೆದ ಸ್ವಾತಂತ್ರö್ಯ ದಿನಾಚರಣೆ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಸಿ.ಸಿ ಕ್ಯಾಡೆಟ್ ಗಳಿಗೆ ಶ್ರೇಣಿ ಪ್ರಧಾನ ಹಾಗೂ ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ದೇಶಭಕ್ತಿ ಗೀತೆ ಮತ್ತು ಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ ಭಟ್, ವಿದ್ಯಾರ್ಥಿಗಳಿಗೆ ಸ್ವಾತಂತ್ರ‍್ಯ ಮತ್ತು ಸ್ವೇಚ್ಛಾಚಾರದ ನಡುವಿನ ವ್ಯತ್ಯಾಸವನ್ನು ತಿಳಿಸಿದರು.

ತೃತೀಯ ಬಿಬಿಎ ವಿದ್ಯಾರ್ಥಿನಿ ಕು.ಸಿಂಚನ ನಿರೂಪಿಸಿ, ಎನ್.ಎಸ್.ಎಸ್ ಘಟಕ 2ರ ಯೋಜನಾಧಿಕಾರಿ ಕು.ಪ್ರಜ್ಞಾ ಸ್ವಾಗತಿಸಿದರು. ಎನ್ ಎಸ್ ಎಸ್ ಘಟಕ 1ರ ಯೋಜನಾಧಿಕಾರಿ ಶ್ರೀ ರಾಮಚಂದ್ರ ಜಿ ಎಸ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದಿವ್ಯಾ ಎಂ ಎಸ್, ಎನ್.ಸಿ.ಸಿ ಸಂಚಾಲಕ ಲೆಫ್ಟಿನೆಂಟ್ ಡಾ. ವಸಂತ ಜಿ, ಹಾಗೂ ಐಕ್ಯೂಎಸಿ ಸಂಚಾಲಕಿ ಡಾ. ನಳಿನಶ್ರೀ ಆರ್ ಎನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *