ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡ ಗಾಣಿಗರ ಗಮ್ಮತ್ತು ಕೆಸರುಗದ್ದೆ ಕ್ರೀಡೆ

ಕೋಟ: ಗಾಣಿಗ ಯುವ ಸಂಘಟನೆ ಕೋಟ ಆಶ್ರಯದಲ್ಲಿ, ಸಹಸಂಸ್ಥೆ ಗಾಣಿಗ ಮಹಿಳಾ ಸಂಘಟನೆ ಸಹಕಾರದಲ್ಲಿ, ಯುವ ಸಂಘಟನೆಯ 15ನೇ ವರ್ಷದ ಸಂಭ್ರಮದ ಚಾಲನೆಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ “ಗಾಣಿಗರ ಗಮ್ಮತ್ತು” ಕಾರ್ಯಕ್ರಮ ಕೋಟದ ಬೆಟ್ಲಕ್ಕಿಯಲ್ಲಿ,ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಜಿ ಅಧ್ಯಕ್ಷ ದಿ.ಕೆ.ಗೋಪಾಲ್ ಸಂಸ್ಮರಣೆಯೊoದಿಗೆ ನೆರವೇರಿತು.

ಬೆಂಗಳೂರಿನ ಉದ್ಯಮಿ ಗಣೇಶ್ ಕೃಷ್ಣಮೂರ್ತಿ ಹಾಗೂ ಪ್ರತಿಮ ಕೃಷ್ಣಮೂರ್ತಿ ಭತ್ತದ ನೇಜಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಣಿಗ ಮಹಿಳಾ ಸಂಘಟನೆ ಅಧ್ಯಕ್ಷೆ ರೇಖಾ ಗಣೇಶ ಚಿತ್ರಪಾಡಿ ಹಾಗೂ ಗಣೇಶ್ ಗಾಣಿಗ ಗೋ ಪೂಜೆ ನೆರವೇರಿಸಿದರು. ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಉದಯ ಕೆ. ಹಾಗೂ ಶ್ವೇತಾ ಉದಯ ಕುಮಾರ್ ಆಷಾಢದ ಆಹಾರ ಮೇಳಕ್ಕೆ ಚಾಲನೆ ನೀಡಿದರು.

ಗಾಣಿಗ ಯುವ ಸಂಘಟನೆ ಕೋಟ ಘಟಕ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ವ್ಯಾಪ್ತಿಯ ಗಾಣಿಗ ಸಮಾಜದ ಯುವಕ- ಯುವತಿಯರು, ಹಿರಿಯರು, ಮಕ್ಕಳಿಗೆ ಕೆಸರುಗದ್ದೆಯ ವಿವಿಧ ಕ್ರೀಡೆ ನಡೆಯಿತು. ಜತೆಯಲ್ಲಿ ಗಾಣಿಗ ಮಹಿಳಾಸಂಘಟನೆ ವತಿಯಿಂದ ಸುಮಾರು 50ಕ್ಕೂ ಹೆಚ್ಚು ಬಗೆಯ ಆಟಿಯ ವಿಶೇಷ ತಿನಿಸುಗಳ ಪ್ರದರ್ಶನ ಹಾಗೂ ವಿತರಣೆ ಇದೇ ಸಂದರ್ಭದಲ್ಲಿ ನಡೆಯಿತು.

ಕಾರ್ಕಡ ಪ್ರಕಾಶ್ ಗಾಣಿಗರ ನೇತೃತ್ವದಲ್ಲಿ ಕೋಣಗಳ ಓಟ ನೆರವೇರಿತು. ಸಮಾಜದ ಹಿರಿಯ ಸಂಘಟಕರಾದ ಗೋಪಾಲ ಜಿ. ಚೆಲ್ಲೆಮಕ್ಕಿ ಹೆಸರಿನಲ್ಲಿ ಕೊಡಮಾಡಿದ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಂಗೊಳ್ಳಿ ಘಟಕ ಪಡೆಯಿತು. ಕಾರ್ಕಡ ಸುಬ್ರಾಯ ಗಾಣಿಗ ಸ್ಮರಣಾರ್ಥ ದ್ವಿತೀಯ ಸಮಗ್ರ ಪ್ರಶಸ್ತಿ ಕೋಟೇಶ್ವರ ಘಟಕ ಪಡೆಯಿತು.

ಸಾವಿರಕ್ಕೂ ಮಿಕ್ಕಿ ಸಮಾಜಬಾಂಧವರು ಕೆಸರುಗದ್ದೆಯಲ್ಲಿ ಆಡಿ- ನಲಿದು ಸಂಭ್ರಮಿಸಿದರು. ಗಾಣಿಗ ಸಂಘಟನೆ ಕೋಟ ಘಟಕದ ಸ್ಥಾಪಕಾಧ್ಯಕ್ಷ ಪ್ರಶಾಂತ್ ಗಾಣಿಗ ಕೋಟ, ಗೌರವಾಧ್ಯಕ್ಷ ವಿಶ್ವನಾಥ ಗಾಣಿಗ, ಪ್ರಧಾನ ಕಾರ್ಯದರ್ಶಿ ಚೇತನ್ ಗಾಣಿಗ ಹಂದಟ್ಟು, ಖಜಾಂಚಿ ಆನಂದ ಗಾಣಿಗ ಮಾಬುಕಳ, ಮಹಿಳಾ ಸಂಘದ ಗೌರವಾಧ್ಯಕ್ಷೆ ಅನಿತಾ ಶ್ರೀಧರ್ ಗುಂಡ್ಮಿ, ಕಾರ್ಯದರ್ಶಿ ರತ್ನಾ ನಾಗರಾಜ್ ಗಾಣಿಗ ಸಾಲಿಗ್ರಾಮ,ಖಜಾಂಚಿ ಶಾರದಾ ದಿನೇಶ್ ಗಾಣಿಗ, ಜಿಲ್ಲಾ ಸಂಘದ ಉಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಕಾರ್ಯದರ್ಶಿ ನಾಗರಾಜ್ ಗಾಣಿಗ ಸಾಲಿಗ್ರಾಮ, ಎಜ್ಯುಕೇಶನ್ ಸೊಸೈಟಿಯ ಗಣೇಶ್ ಜಿ. ಚೆಲ್ಲೆಮಕ್ಲಿ, ಪ್ರಮುಖರಾದ ಬಾಲಕೃಷ್ಣ ಉಪ್ಪೂರು, ಕೇಶವ ಗಾಣಿಗ ಮಾಬುಕಳ, ಪ್ರಣವ್ ಆಸ್ಪತ್ರೆಯ ಡಾ. ಪ್ರವೀಣ್, ಕಿರಣ್ ಚೆಲ್ಲೆಮಕ್ಕಿ, ಮಮತಾ, ವೇಣುಗೋಪಾಲಕೃಷ್ಣ ಸೊಸೈಟಿಯ ವಿಜಯ ಕೆ., ಕುಂದಾಪುರ ತಾಲೂಕು ಸಂಘದ ಅಧ್ಯಕ್ಷ ಸತೀಶ್ ಗಾಣಿಗ, ಮಂಜುನಾಥ ಮಾಸ್ಟರ್, ಬಿ.ಜಿ. ನಾಗರಾಜ್, ಪ್ರಭಾಕರ ಕುಂಭಾಶಿ, ರಾಜು ಗಾಣಿಗ ತಗ್ಗರ್ಸೆ ಮೊದಲಾದವರು ಇದ್ದರು. ಪ್ರಣೂತ್ ಆರ್. ಗಾಣಿಗ ಹಾಗೂ ವಿಶ್ವನಾಥ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.

ಗಾಣಿಗ ಯುವ ಸಂಘಟನೆ ಕೋಟ ಆಶ್ರಯದಲ್ಲಿ, ಸಹಸಂಸ್ಥೆ ಗಾಣಿಗ ಮಹಿಳಾ ಸಂಘಟನೆ ಸಹಕಾರದಲ್ಲಿ, ಯುವ ಸಂಘಟನೆಯ ಉಡುಪಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ “ಗಾಣಿಗರ ಗಮ್ಮತ್ತು” ಕಾರ್ಯಕ್ರಮವನ್ನು ಬೆಂಗಳೂರಿನ ಉದ್ಯಮಿ ಗಣೇಶ್ ಕೃಷ್ಣಮೂರ್ತಿ ಹಾಗೂ ಪ್ರತಿಮ ಕೃಷ್ಣಮೂರ್ತಿ ಭತ್ತದ ನೇಜಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *