ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸಹಕಾರ ಹಾಲು ಉತ್ಪಾದಕರ ವಾರ್ಷಿಕ ಸಾಮಾನ್ಯ ಸಭೆ, ನಮಗೆ ಸರಕಾರದ ಪ್ರೋತ್ಸಾಹ ಧನ ಬೇಡ ಕನಿಷ್ಟ ದಿನಗೂಲಿ ನೀಡಿ-ಹೈನುಗಾರರ ಬೇಡಿಕೆ

ಕೋಟ: ಹೈನುಗಾರರಿಗೆ ಸರಕಾರದ ಪ್ರೋತ್ಸಾಹಧನ ಬೇಡ ಬದಲಾಗಿ ಉದ್ಯೋಗ ಖಾತ್ರಿ ಯೋಜನೆಯಂತೆ ಕನಿಷ್ಟ ದಿನಗೂಲಿ ನೀಡಿ ಎಂದು ಕೋಟ ಹಾಲು ಉತ್ಪಾದಕರ ವಾರ್ಷಿಕ ಸಭೆಯಲ್ಲಿ ಹೈನುಗಾರರೊಬ್ಬರು ಆಗ್ರಹಿಸಿದರು. ಬುಧವಾರ ಕೋಟ ಹಾಲು ಉತ್ಪಾದಕರ ವಠಾರದಲ್ಲಿ ಕೋಟ ಸಹಕಾರ ಹಾಲು ಉತ್ಪಾದಕರ ವಾರ್ಷಿಕ ಸಭೆಯಲ್ಲಿ ಈ ವಿಚಾರದ ಬಗ್ಗೆ ಹೈನುಗಾರರಿಂದ ವಿಸ್ಕೃತ ಚರ್ಚೆ ನಡೆಯಿತು.

ಈ ಬಗ್ಗೆ ಮಾತನಾಡಿದ ಕೆ.ಎಂ.ಎಫ್ ವಿಸ್ತೀರ್ಣಾಧಿಕಾರಿ ಉಮೇಶ್ ಕುಂದರ್ ಯೋಜನೆಗಳನ್ನು ಸರಕಾರ ನಿಗದಿಪಡುಸುವುದು ಹಾಲಿನ ಗುಣಮಟ್ಟ ನೋಡಿ ಸಕರಾರದ ಸಹಾಧನ ನೀಡಲಾಗುತ್ತದೆ. ಯೋಜನೆ ಬದಲಿಸುವ ಹಕ್ಕು ಸರಕಾರದ್ದಾಗಿದೆ ಎಂದರಲ್ಲದೆ ರಾಜ್ಯದ ಹಾಲು ಉದ್ಯಮ ನಂ.1 ಸ್ಥಾನದಲ್ಲಿದೆ, ವಿವಿಧ ಹೊಸ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದೆ ಹಾಲು ಉತ್ಪಾದನೆಯಲ್ಲಿ ಕೆ.ಎಂ ಎಫ್ ಹೊಸ ಭಾಷ್ಯ ಬರೆದಿದೆ ಎಂದರಲ್ಲದೆ ಹಾಲಿನ ಗುಣಮಟ್ಟದ ವಿಚಾರದಲ್ಲಿ ಒಕ್ಕೂಟ ನಿರ್ಲಕ್ಷಿ÷್ಯಯ ದೋರಣೆ ಅನುಸರಿಸಿಲ್ಲ ಆದ್ದರಿಂದ ರಾಷ್ಟçದಲ್ಲೆ ನಂದಿನಿ ಹಾಲಿಗೆ ಬಾರಿ ಬೇಡಿಕೆಯೂ ಇದೆ, ಹೈನುಗಾರರು ಹಾಲಿನ ಗುಣಮಟ್ಟದಲ್ಲಿ ಲೋಪ ಎಸೆಗಬೇಡಿ, ಸಾಮಾನ್ಯವಾಗಿ ಸಾಕಾಣಿಕೆ ವ್ಯತ್ಯಾಸದಿಂದ ಲೋಪ ಬೆಳಕಿಗೆ ಬಂದಿದೆ ಇದನ್ನು ಸಮರ್ಪಕಗೊಳಿಸಲು ಸಮತೋಲನ ಪಶು ಪೌಷ್ಠಿಕ ಆಹಾರ ನೀಡಬೇಕು, ಒಳ್ಳೆಯ ತಳಿಗಳನ್ನು ರಾಸುಗಳಿಗೆ ಹೆಚ್ಚಿನ ಆದ್ಯತೆ ನೀಡಿ,ಹೈನುಗಾರಿಕೆ ಕ್ಷೇತ್ರದಲ್ಲಿ ಯುವ ಸಮುದಾಯವನ್ನು ಕರೆ ತರುವ ಕಾರ್ಯ ಹೈನುಗಾರ ಕುಟುಂಬದಿoದ್ದಾಗಬೇಕು, ಒಕ್ಕೂಟದಲ್ಲಿ ಹಲವಾರು ಸೌಲಭ್ಯಗಳಿವೆ ಅದನ್ನು ಸದ್ವಿನಿಯೋಗಿಸಿ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯಿರಿ ಎಂದರು.

ಈ ಸಂದರ್ಭದಲ್ಲಿ ವಾರ್ಷಿಕ ಸಂಘಕ್ಕೆ ಹೆಚ್ಚು ಹಾಲು ನೀಡಿದ ಸದಸ್ಯರಾದ ಪ್ರಕಾಶ್ ಶೆಟ್ಟಿ ದ್ಯಾವಸ, ಪ್ರೇಮ ಕದ್ರಿಕಟ್ಟು, ಬಸವಿ ಪೂಜಾರಿ,ಶಾರದ ಶೆಟ್ಟಿ ಕೊಯ್ಕೂರು,ಸುಶೀಲ ಪೂಜಾರಿ ಇವರಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ವಹಿಸಿ ಸಭೆಯನ್ನು ಮುನ್ನಡೆಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಕಾಂತ್ ಮಯ್ಯ, ನಿರ್ದೇಶಕರಾದ ಸುಧಾಕರ ಶೆಟ್ಟಿ, ಪ್ರಕಾಶ್ ಶೆಟ್ಟಿ, ರಮಾನಂದ ಉರಾಳ, ಜಿ.ಶಿವಾನಂದ ಅಡಿಗ, ಚಂದ್ರಶೇಖರ ,ವಿಲ್ಸನ್ ಫುಡ್ತಾಡೋ, ಸುಶೀಲ, ಶಾಂತ ಉಪಸ್ಥಿತರಿದ್ದರು.

ಸಭೆಯಲ್ಲಿ ವಾರ್ಷಿಕ ವರದಿ, ಸಭೆಯ ಸಾಮಾನ್ಯ ನಡವಳಿ,ಲೆಕ್ಕಪರಿಶೋಧನಾ ವರದಿ ಹೀಗೆ ಹಲವು ಕಾರ್ಯಗಳ ಬಗ್ಗೆ ಸಂಘದ ಸಿಇಒ ಎಸ್.ರಾಜೇಶ್ ನಿರ್ವಹಿಸಿ ನಿರೂಪಿಸಿ ವಂದಿಸಿದರು. ಕೋಟ ಹಾಲು ಉತ್ಪಾದಕರ ವಠಾರದಲ್ಲಿ ಕೋಟ ಸಹಕಾರಿ ಹಾಲು ಉತ್ಪಾದಕರ ವಾರ್ಷಿಕ ಸಭೆಯಲ್ಲಿ ವಾರ್ಷಿಕ ಸಂಘಕ್ಕೆ ಹೆಚ್ಚು ಹಾಲು ನೀಡಿದ ಸದಸ್ಯರಾದ ಪ್ರಕಾಶ್ ಶೆಟ್ಟಿ ದ್ಯಾವಸ, ಪ್ರೇಮ ಕದ್ರಿಕಟ್ಟು, ಬಸವಿ ಪೂಜಾರಿ,ಶಾರದ ಶೆಟ್ಟಿ ಕೊಯ್ಕೂರು,ಸುಶೀಲ ಪೂಜಾರಿ ಇವರಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಶ್ರೀಕಾಂತ್ ಮಯ್ಯ,ನಿರ್ದೇಶಕರಾದ ಸುಧಾಕರ ಶೆಟ್ಟಿ,ಪ್ರಕಾಶ್ ಶೆಟ್ಟಿ, ರಮಾನಂದ ಉರಾಳ,ಜಿ.ಶಿವಾನಂದ ಅಡಿಗ, ಚಂದ್ರಶೇಖರ ಇದ್ದರು.

Leave a Reply

Your email address will not be published. Required fields are marked *