ಪಾಂಡೇಶ್ವರ: ಶ್ರೀ ಕ್ಷೇತ್ರ ರಕ್ತೇಶ್ವರಿಯಲ್ಲಿ ಆ.21ರ ಶುಕ್ರವಾರದಂದು ಪ್ರತಿ ವರ್ಷದಂತೆ ಶ್ರೀ ವರಮಹಾಲಕ್ಷ್ಮಿ ವ್ರತ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.ಸಂಜೆ 6:30ಕ್ಕೆ ರಕ್ತೇಶ್ವರಿ ಮಹಿಳಾ ಬಳಗದ ಸುಮಂಗಲಿಯರ ಸಂಕಲ್ಪದೊoದಿಗೆ ಶ್ರೀ ಲಕ್ಷ್ಮೀ ಹೃದಯ ಪಾರಾಯಣ. 7:30ಕ್ಕೆ ಡಾ. ಅರ್ಪಿತಾ, ಆದರ್ಶ ಮತ್ತು ಕುಟುಂಬಿಕರು ಹೊಸಂಗಡಿ ಕೆ.ಪಿಟಿಎಲ್ ಇವರಿಂದ ವಿಶೇಷ ಸರ್ವಾಲಂಕಾರ ಪೂಜೆ ರಾತ್ರಿ 8:00ಕ್ಕೆ: ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರಗಲಿದ್ದು ಈ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಬೇಕಾಗಿ ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಕೆ.ವಿ. ರಮೇಶ್ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ












Leave a Reply