ರೋಟರಿ ಸಮುದಾಯ ದಳ ಕೋಟೇಶ್ವರವು ಪ್ರಥಮ ಮಹಿಳಾ ಸಮುದಾಯ ದಳವಾಗಿದೆ,ಹೆಂಗಸರು ಸೇವಾ ಮನೋಭಾವದಿಂದ ಈ ರೀತಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿದ್ದು ಸಮಾಜಕ್ಕೊಂದು ಮಾದರಿ,ಸಂಸ್ಥೆಯು ಉತ್ತರೋತ್ತರ ಯಶಸ್ಸು ಗಳಿಸಲಿ ಎಂದು ದಿನಾಂಕ 14/08/2026, ಶುಕ್ರವಾರದಂದು ರೋಟರಿ ಭವನ ಕೋಟೇಶ್ವರದಲ್ಲಿ ಉದ್ಘಾಟನೆಗೊಂಡ ರೋಟರಿ ಸಮುದಾಯ ದಳ,ಕೋಟೇಶ್ವರ ಇದರ ಉದ್ಘಾಟನಾ ಮತ್ತು ಪದಪ್ರಧಾನ ಸಮಾರಂಭವನ್ನು ಉದ್ಘಾಟನೆಗೈದ ರೊ.ಚಂದ್ರಶೇಖರ ಶೆಟ್ಟಿ, ಜಿಲ್ಲಾ ಉಪಸಭಾಪತಿ ರೋಟರಿ ಸಮುದಾಯ ದಳ ರೋಟರಿ ಜಿಲ್ಲೆ 3182 ಯವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟೇಶ್ವರದ ಪ್ರಥಮ ಮಹಿಳಾ ಅಧ್ಯಕ್ಷರಾದ ರೊ.ಅಕ್ಷತಾ ಗಿರೀಶ್ ಐತಾಳ್ ಅವರು ವಹಿಸಿ ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಮುಖ್ಯ ಅಭ್ಯಾಗತರಾಗಿ ರೊ.ಸುಧಾಕರ ಶೆಟ್ಟಿ, ಅಸಿಸ್ಟೆಂಟ್ ಗವರ್ನರ್, ರೊ.ಮಾಧವ ಪೂಜಾರಿ ವಲಯ ಸಮನ್ವಯಾಧಿಕಾರಿ, ರೋಟರಿ ಸಮುದಾಯ ದಳ, ರೊ.ಪ್ರಭಾಕರ್ ಕುಂಭಾಶಿ,ರೋಟರಿ ಸಮುದಾಯ ದಳ, ಕೋಟೇಶ್ವರದ ಸಭಾಪತಿಗಳು ಹಾಗು ರೊ.ಅರುಣ ದೇವಾಡಿಗ, ಕಾರ್ಯದರ್ಶಿ, ರೋಟರಿ ಕ್ಲಬ್ ಕೋಟೇಶ್ವರ ಅಲ್ಲದೇ ಆನ್ಸ್ ಕ್ಲಬ್ ಕೋಟೇಶ್ವರದ ಅಧ್ಯಕ್ಷರಾದ ಸುಜಾತ ಶೆಟ್ಟಿ, ಕಾರ್ಯದರ್ಶಿಗಳಾದ ಸುಪ್ರಿಯಾ ಕುಂಭಾಶಿಯವರು ಉಪಸ್ಥಿತರಿದ್ದರು.
ರೋಟರಿ ಸಮುದಾಯ ದಳ,ಕೋಟೇಶ್ವರದ ಅಧ್ಯಕ್ಷರಾಗಿ ಸುಪ್ರೀತಾ ಪುರಾಣಿಕರು, ಕಾರ್ಯದರ್ಶಿಯಾಗಿ ಸುಷ್ಮಾ ಉಪಾಧ್ಯರು ಅಧಿಕಾರವನ್ನು ಸ್ವೀಕರಿಸಿದರು.ಉಪಾಧ್ಯಕ್ಷರರಾಗಿ ರೋಹಿಣಿ ಭಟ್,ಜೊತೆ ಕಾರ್ಯದರ್ಶಿಯಾಗಿ ವೀಣಾ ತೆಕ್ಕಟ್ಟೆ,ಖಜಾಂಜಿಯಾಗಿ ಉಷಾ ಶೆಟ್ಟಿಗಾರ್,ಕ್ಲಬ್ ಸೇವಾ ನಿರ್ದೇಶಕರಾಗಿ ಶಾರದ ಗೋಪಾಡಿ,ಯುವಜನ ಸೇವಾ ನಿರ್ದೇಶಕರಾಗಿ ರೂಪ ದೇವಾಡಿಗ, ಸಮುದಾಯ ಸೇವಾ ನಿರ್ದೇಶಕರಾಗಿ ಮಾಲತಿ ಬಂಗೇರ, ಜೌದ್ಯೋಗಿಕ ಸೇವಾ ನಿರ್ದೇಶಕರಾಗಿ ಶೋಭಾ ಭಾಸ್ಕರ್, ಕ್ರೀಡಾ ಅಧ್ಯಕ್ಷರಾಗಿ ವಾಣಿಶ್ರೀ ಹೆಬ್ಬಾರ್, ಸಾಂಸ್ಕೃತಿಕ ಅಧ್ಯಕ್ಷರಾಗಿ ಸುಜಾತಾ ಕುಂದರ್ ಆಯ್ಕೆಯಾದರು.
ಮಾಲತಿ ಬಂಗೇರ,ರೋಹಿಣಿ ಭಟ್ ಮತ್ತು ರೋಹಿಣಿ ಹತ್ವಾರ್ ಪ್ರಾರ್ಥಿಸಿದರೆ ನಾಗರತ್ನ ಉಡುಪ,ಪ್ರತಿಮಾ ಚಂದ್ರಶೇಖರ್,ನಿರ್ಮಲಾ ಕಿಣಿ,ಪ್ರೇಮ ಕುಂಭಾಶಿ ದೀಪ ಪ್ರಜ್ವಲನ ಶ್ಲೋಕ ಹೇಳಿದರು. ಪದಪ್ರಧಾನಾಧಿಕಾರಿಯಾದ ಅಕ್ಷತಾ ಗಿರೀಶ್ ಅವರ ಪರಿಚಯವನ್ನು ಸುನೀತಾ ಗಣೇಶ್ ವಾಚಿಸಿದರು. ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪರಿಚಯವನ್ನು ಉಷಾ ಬಂಗೇರ ಮತ್ತು ರೂಪಾರವರು ಮಾಡಿದರು. ಸುಜಾತ ಕುಂದರ್ ಸ್ವಾಗತಿಸಿ, ಸುಶೀಲಾ ಹೊಳ್ಳ ವಂದಿಸಿದರು. ದೀಪಾ ಕಿಣಿ ನಿರೂಪಿಸಿದರು.












Leave a Reply