ಕೋಟ: ಇಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಆ. 21 ಶುಕ್ರವಾರದಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿoದ ನೆರವೇರಲಿದೆ.
ವಿಶೇಷ ಪೂಜಾ ಕಾರ್ಯಕ್ರಮಗಳ ಭಾಗವಾಗಿ ಬೆಳಿಗ್ಗೆ 9:30ಕ್ಕೆ ವ್ರತ ಆಚರಣೆ ಮತ್ತು ಪೂಜಾ ವಿಧಿವಿಧಾನಗಳು ಆರಂಭಗೊಳ್ಳಲಿವೆ.ವಿಶೇಷ ಸೇವೆಗಳಾಗಿ ದೇವಿ ಶ್ರೀ ಅಮೃತೇಶ್ವರೀ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾಪೂಜೆಯ ಅಂಗವಾಗಿ ‘ಸಹಸ್ರ ಕುಂಕುಮಾರ್ಚನೆ ಸೇವೆ ನೆರವೇರಲಿದೆ. ಅಪರಾಹ್ನ ಮಹಾ ಅನ್ನಸಂತರ್ಪಣೆ ಮಹಾಪ್ರಸಾದ ವಿತರಣೆ ನಡೆಯಲಿದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Leave a Reply