ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರೋಟರಿ ಕೋಟ ಸಿಟಿ ವತಿಯಿಂದ ಉಚಿತ ಹೊಲಿಗೆ ಯಂತ್ರ ವಿತರಣೆ

ರೋಟರಿ ಕೋಟ ಸಿಟಿ ವತಿಯಿಂದ ಮಹಿಳಾ ಸಬಲೀಕರಣ ಯೋಜನೆ ಯ ಅಂಗವಾಗಿ ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇವರು ಕೊಡಮಾಡಿದ ಹೊಲಿಗೆ ಯಂತ್ರ ವನ್ನು ಪಲಾನುಭವಿಗಳಿಗೆ ಉಚಿತವಾಗಿ ನೀಡಲಾಯಿತು. ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಿ ಎಸ್ ಆರ್ ಇನಿಷೇಯಿಟಿವ್ ಚಯರ್ ಮೆನ್ ಪ್ರಭಾಕರ್ ಕುಂಭಾಶಿ, ಮಾಜಿ ಅಸಿಸ್ಟೆಂಟ್ ಗವರ್ನರ್ ಗಳಾದ ಸತೀಶ್ ಶೆಟ್ಟಿ, ಶ್ಯಾಮ್ ಸುಂದರ ನಾಯರಿ, ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಧಾಕೃಷ್ಣ ಬ್ರಹ್ಮಾವರ್ ವಹಿಸಿ ಸಭೆಗೆ ಬಂದ ಸದಸ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿ ಗಳು ಹೊಲಿಗೆ ಯಂತ್ರಗಳನ್ನು ಪಲಾನುಭವಿ ಗಳಿಗೆ ಹಸ್ತಾಂತರಿಸಿ ಶುಭ ಹಾರೈಸಿದರು. ಆನ್ಸ್ ಕ್ಲಬ್ ಕೋಟ ಸಿಟಿ ಅಧ್ಯಕ್ಷೆ ದೀಪರಾಣಿ ಶರತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಜ್ಯೋತಿ ನಿತ್ಯಾನಂದ, ಆನ್ಸ್ ಕ್ಲಬ್ ಸದಸ್ಯೆ ಸವಿತ ಸತೀಶ್ ಕುಮಾರ್, ರೂಪಶ್ರೀ ಶಿವಾನಂದ, ರೋಟರಿ ಸದಸ್ಯರಾದ ಕೃಷ್ಣ ಪೂಜಾರಿ, ಶರತ್ ಕುಮಾರ್ ಶೆಟ್ಟಿ, ಗಿರೀಶ್ ಕುಂದರ್, ನಾಗರಾಜ್ ಐತಾಳ್, ಸುಬ್ರಮಣ್ಯ ಪೂಜಾರಿ,ಕಾರ್ಯಕ್ರಮ ದ ಸಭಾಪತಿ ಸತೀಶ್ ಕುಮಾರ್ ಕಾರ್ಕಡ ಶುಭ ಹಾರೈಸಿ, ಆನ್ಸ್ ಕ್ಲಬ್ ಚಯರ್ ಮೆನ್ ಶಿವಾನಂದ ನಾಯರಿ ಪ್ರಸ್ತಾವಿಕ ಮಾತನಾಡಿದರು ಕಾರ್ಯದರ್ಶಿ ಉಮೇಶ್ ನಾಯರಿ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *