ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹೊಸನಗರ: ಜಾಗೃತಿ ಸಭೆ ಮಾಸ್ತಿಕಟ್ಟೆ

ಹೊಸನಗರ ತಾಲೂಕು ವಿಧಾನ ಸಭಾ ಕ್ಷೇತ್ರ ಮರುಸ್ಥಾಪನೆ ಹೋರಾಟ ಸಮಿತಿ ವತಿಯಿಂದ ಇದೇ ಬರುವ ಏಪ್ರಿಲ್ 5 ಮತ್ತು 6 ತಾರೀಖು ನಗರದಿಂದ ಹೊಸನಗರ ರಿಪ್ಪನಪೇಟೆ ವರೆಗೂ ನಡೆಸುವ ಬೃಹತ್ ಪಾದಯಾತ್ರೆ ಪ್ರಯುಕ್ತ ಇಂದು ನಗರ ಹೋಬಳಿಯ ಪ್ರತಿ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಸಭೆ ಮಾಡುವ ಮೂಲಕ ಸಮಸ್ತ ನಾಗರಿಕರು ಪಾದಯಾತ್ರೆ ಮತ್ತು ಸಮಾವೇಶದಲ್ಲಿ ಭಾಗವಹಿಸುವಂತೆ ಮಾಜಿ ಶಾಸಕರಾದ ಬಿ ಸ್ವಾಮಿ ರಾವ್ ನೇತೃತ್ವದಲ್ಲಿ ಕರೆ ನೀಡಲಾಯಿತು.

ಮಾಸ್ತಿಕಟ್ಟೆಗೆ ಆಗಮಿಸಿದ ಅವರಿಗೆ ಸ್ವಾಗತಿಸಿ ಗೌರವ ಸಮರ್ಪಣೆ ಮಾಡಿ ಊರಿನ ಮುಖಂಡರು ಗ್ರಾಮಸ್ಥರು ಪಾದಯಾತ್ರೆಗೆ ಪಾಲ್ಗೊಂಡು ಸಹಕರಿಸುವುದಾಗಿ ಘೋಸಿಸಲಾಯಿತು.

ಈ ಸಭೆಯಲ್ಲಿ ಶ್ರೀಮತಿ ಸುಮಾ ಸುಬ್ರಮಣ್ಯ, ಎನ್ ನ್ ಆರ್ ದೇವಾನಂದ್, ಹಾಲಗದ್ದೆ ಉಮೇಶ್, ನಗರ ಕರುಣಾಕರ ಶೆಟ್ಟಿ, ಹೆಚ್ ವಾಸಪ್ಪ, ಕೆ ಬಿ ಕೃಷ್ಣಮೂರ್ತಿ, ಹೆಚ್. ಕೆ. ವಿದ್ಯಾನಂದ ರಾವ್,ಪತ್ರಕರ್ತರಾದ ರವಿ ಬಿದನೂರು, ಮಲೆನಾಡು ವಾಯ್ಸ್ ಪತ್ರಿಕೆಯ ನಗರ ರಾಘವೇಂದ್ರ, ಸುಧೀಂದ್ರ ಪಂಡಿತ್, ಹೆಚ್ ಟಿ ರಮೇಶ್, ಸತೀಶ್,ಊರಿನ ಪ್ರಮುಖರು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

✍️ ಪುರುಷೋತ್ತಮ್ ಪೂಜಾರಿ. ಕೊಡಪಾಡಿ

Leave a Reply

Your email address will not be published. Required fields are marked *