ಕಿದಿಯೂರು, ಜು. 19: ಟೀಮ್ ನೇಷನ್ ಫಸ್ಟ್ ವತಿಯಿಂದ 9ನೇ ವರ್ಷದ ‘ಚಿಣ್ಣರ ನಟ್ಟಿ’ ಕಾರ್ಯಕ್ರಮವು ಜುಲೈ 19, 2026ರಂದು ಕಿದಿಯೂರಿನಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಯುವ ಪೀಳಿಗೆಯಲ್ಲಿ ಸಾವಯವ ಕೃಷಿಯ ಮಹತ್ವ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರಜ್ ಕಿದಿಯೂರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಮಂಜಪ್ಪ ಡಿ.ಆರ್., ಮಂಗಳೂರು ಸರ್ಕಲ್ ಇನ್ಸ್‌ಪೆಕ್ಟರ್, ರಾಘವೇಂದ್ರ, ಪೊಲೀಸ್ ಇನ್ಸ್‌ಪೆಕ್ಟರ್, ಉಡುಪಿ ಮಹಿಳಾ ಠಾಣೆ ಹಾಗೂ ಅಡ್ವೊಕೇಟ್ ಗಣೇಶ್ ಕುಮಾರ್ ಮಟ್ಟು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅತಿಥಿಗಳಾಗಿ ಡಾ. ಭಾಸ್ಕರ್ ಎಂ.ಎನ್. (ಇಎನ್‌ಟಿ ಸರ್ಜನ್), ಡಾ. ಯು.ಬಿ. ಶಬರಿ (ಓರಲ್ ಸರ್ಜನ್), ಭಾಸ್ಕರ್ ಕೋಟಿಯಾನ್ ಹಾಗೂ ಶ್ರೀಮತಿ ವಿಮಲಾ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನ ಪೆರ್ಣಾಜೆಯ ಸ್ವರೂಪ ಸಾಧನ ವಿದ್ಯಾ ಸಂಸ್ಥೆಯ ಸುಮಾರು 120 ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ನಾಟಿ ಕಾರ್ಯದಲ್ಲಿ ಭಾಗವಹಿಸಿದರು.
ಟೀಮ್ ನೇಷನ್ ಫಸ್ಟ್‌ನ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದ ಸಮಾರೋಪದಲ್ಲಿ ಟೀಮ್ ನೇಷನ್ ಫಸ್ಟ್‌ನ ಉಪಾಧ್ಯಕ್ಷ ಡಾ. ಅತುಲ್ ಧನ್ಯವಾದ ಸಮರ್ಪಿಸಿದರು. ಪವನ್ ಕಾರ್ಯಕ್ರಮವನ್ನು ನಿರೂಪಿಸಿದರು. ಟೀಮ್ ನೇಷನ್ ಫಸ್ಟ್‌ನ ಇತರ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.














Leave a Reply