ಕೋಟ: ಇಲ್ಲಿನ ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯಲ್ಲಿ ಸಂಸ್ಥಾಪನಾ ದಿನಾಚರಣೆ, ಚೇತನಾ ಶಾಲೆಯ ವಿದ್ಯಾರ್ಥಿ ಮಾರ್ಗದರ್ಶಿ ಬಿಡುಗಡೆ, ಐಡಿ ಕಾರ್ಡ್ ವಿತರಣೆ, ಯಕ್ಷಗಾನ ತರಗತಿ ಉದ್ಘಾಟನಾ ಕಾರ್ಯಕ್ರಮ ಜು.23ರಂದು ಜರಗಿತು. ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಿ ಭರತ್ ಕುಮಾರ್ ಶೆಟ್ಟಿ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ವೇಳೆ ವಿದ್ಯಾರ್ಥಿ ಮಾರ್ಗದರ್ಶಿ ಬಿಡುಗಡೆ, ಐಡಿ ಕಾರ್ಡ್ ವಿತರಣೆ, ಯಕ್ಷಗಾನ ತರಗತಿ ಉದ್ಘಾಟನೆ, ಶಾಲಾ ಸರಕಾರ ಹಾಗೂ ವಿವಿಧ ಸಂಘಗಳನ್ನು ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇದರ ಕಾರ್ಯದರ್ಶಿ ಮುರಳಿ ಕಡೆಕಾರ್ ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಈ ಪಂಚ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆಯನ್ನು ನೀಡಿದರು. ಆಡಳಿತ ಮಂಡಳಿ, ಉಪಾಧ್ಯಕ್ಷ ಎ.ಜಗದೀಶ್ ಕಾರಂತ್, ಇವರು ಶಾಲಾ ಸಂಸ್ಥಾಪನ ದಿನದ ಕುರಿತು ಮಾತನಾಡಿದರು.
ಫಾರ್ಚುನ್ ಕಾಲೇಜ್ ಚೇರ್ಮನ್ ತಾರಾನಾಥ ಶೆಟ್ಟಿ ವಿದ್ಯಾರ್ಥಿ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ. ರಾಜರಾಮ್ ಭಟ್ ಕೊಡಮಾಡಿದ ಐಡಿ ಕಾರ್ಡ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.. ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿತೆಯೊಂದಿಗೆ ಯಕ್ಷಗಾನದ ತರಗತಿಯನ್ನು ಅತಿಥಿಗಳು ಉದ್ಘಾಟಿಸಲಾಯಿತು. ಶಾಲಾ ಸರಕಾರದ ಪ್ರಮಾಣ ವಚನ ಹಾಗೂ ವಿವಿಧ ಸಂಘಗಳನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಮುಖ ಅತಿಥಿಗಳಾಗಿ ಹಂಗಾರಕಟ್ಟೆ- ಸಾಸ್ತಾನ ರೋಟರಿ ಕ್ಲಬ್ಬ್ನ ಅಧ್ಯಕ್ಷೆ ಕುಸುಮ ಮನೋಜ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಪ್ರಮುಖರಾದ ವಿಘ್ನೇಶ್ವರ ಅಡಿಗ, ಎ.ರಾಮದೇವ ಹಂದೆ, ಸುಲತಾ ಹೆಗ್ಡೆ,ಜಿ. ಗಣೇಶ್,ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ,ಶಾಲಾ ವಿದ್ಯಾರ್ಥಿಗಳಾದ ಕು.ವಷಾ, ಕು.ನಮೃತಾ ಉಪಸ್ಥಿತರಿದ್ದರು.
ಚೇತನಾ ಪ್ರೌಢಶಾಲೆಯಲ್ಲಿ ಸಂಸ್ಥಾಪನಾ ದಿನಾಚರಣೆ, ಚೇತನಾ ಶಾಲೆಯ ವಿದ್ಯಾರ್ಥಿ ಮಾರ್ಗದರ್ಶಿ ಬಿಡುಗಡೆ, ಐಡಿ ಕಾರ್ಡ್ ವಿತರಣೆ, ಯಕ್ಷಗಾನ ತರಗತಿಯನ್ನು ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇದರ ಕಾರ್ಯದರ್ಶಿ ಮುರಳಿ ಕಡೆಕಾರ್ ಉದ್ಘಾಟಿಸಿದರು. ಹಂಗಾರಕಟ್ಟೆ- ಸಾಸ್ತಾನ ರೋಟರಿ ಕ್ಲಬ್ಬ್ನ ಅಧ್ಯಕ್ಷೆ ಕುಸುಮ ಮನೋಜ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಪ್ರಮುಖರಾದ ವಿಘ್ನೇಶ್ವರ ಅಡಿಗ ಇದ್ದರು.











Leave a Reply