ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಂನಮ್ಮೊಳಗೆ ಸಾಹಿತ್ಯಾವಲೋಕನದಲ್ಲಿ ಆದರ್ಶ ಮಾನವ ಕೃತಿಯ ಮರು ಚಿಂತನೆ

ಕೋಟ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಿತ್ರ ಮಂಡಳಿಯು ಸಂಘಟಿಸುತ್ತಿರುವ ನಂನಮ್ಮೊಳಗೆ ಸಾಹಿತ್ಯಾವಲೋಕನ ಸಭೆಯಲ್ಲಿ ಸದಸ್ಯರು ಕಳೆದ ತಿಂಗಳು ಲೋಕಾರ್ಪಣೆಗೊಂಡ ಕೌನ್ಜೂರು ಚಂದ್ರಶೇಖರ ಅಡಿಗರ ಪೌರಾಣಿಕ ಕಾದಂಬರಿ ದೇವಮಾನವದ ಮರು ಚಿಂತನೆಯಾಗಿ – ಲೇಖಕರ ವೈಚಾರಿಕ ಪ್ರಜ್ಞೆ – ಪೌರಾಣಿಕ ನಂಬಿಕೆ ನಿರೂಪಣೆಯ ವೈಶಿಷ್ಟ್ಯ ಇತ್ಯಾದಿಗಳ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿ ಎಲ್ಲರ ಅಭಿಪ್ರಾಯವನ್ನು ಕ್ರೋಢಿಕರಿಸಿದರು. ಮಿತ್ರ ಮಂಡಳಿಯು ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರು ಸಮನ್ವಯಕಾರರಾಗಿದ್ದು ವಿಷಯ ಮಂಡನೆ ಮಾಡಿ ಧನ್ಯವಾದ ಸಮರ್ಪಿಸಿದರು. ಶ್ರೀದೇವಿ ಅವರಿಂದ ಪ್ರಾರ್ಥನೆ, ಮೂಕಾಂಬಿಕೆ, ಮಹಾಲಕ್ಷ್ಮಿ, ಸುಮನ, ರಾಮಚಂದ್ರ ಐತಾಳ, ಸೋಮಶೇಖರ ಶೆಟ್ಟಿ, ಸೂರ್ಯನಾರಾಯಣ, ಕ. ಸಾ. ಪ. ಮಾಧ್ಯಮ ಮಿತ್ರ ನರಸಿಂಹಮೂರ್ತಿ ಮೊದಲಾದವರ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಿತ್ರ ಮಂಡಳಿಯು ಸಂಘಟಿಸುತ್ತಿರುವ ನಂನಮ್ಮೊಳಗೆ ಸಾಹಿತ್ಯಾವಲೋಕನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮ್ಮುಖದಲ್ಲಿ ಅವಲೋಕಿಸಲಾಯಿತು. ಚಿತ್ರಪಾಡಿ ಉಪೇಂದ್ರ ಸೋಮಯಾಜಿ, ರಾಮಚಂದ್ರ ಐತಾಳ, ಸೋಮಶೇಖರ ಶೆಟ್ಟಿ, ಸೂರ್ಯನಾರಾಯಣ ಇದ್ದರು.

Leave a Reply

Your email address will not be published. Required fields are marked *