ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಐರೋಡಿ ಪರಿಸರದಲ್ಲಿ ಪಂಚವರ್ಣದ ಹಸಿರು ಹೆಜ್ಜೆ 311ನೇ ಅಭಿಯಾನ. ಪರಿಸರಕ್ಕಾಗಿ ಯಾವ ವೇದಿಕೆ ಬೇಕಿಲ್ಲ ಅದು ದೈವಿಕ ಕಾರ್ಯ- ಅವಿನಾಶ್ ಕಾಮತ್

ಕೋಟ: ಪ್ರಕೃತಿಗಾಗಿ ಸಮಯ ಮಿಸಲಿರಿಸಿ ಅದಕ್ಕಾಗಿ ಯಾವುದೇ ವೇದಿಕೆಗಳು ಬೇಕಿಲ್ಲ ಅದೊಂದು ದೈವಿಕ ಕಾರ್ಯ ಎಂದು ಭಾವಿಸಿ ಭಾಗಿಯಾಗಿ ಎಂದು ಪರಿಸರಪ್ರೇಮಿ ಅವಿನಾಶ್ ಕಾಮತ್ ಹೇಳಿದರು.

ಭಾನುವಾರ ಕೋಟದ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ 311ನೇ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಗೀತಾನಂದ ಫೌಂಡೇಶನ್ ಮಣೂರು ಪೇತ್ರಿ ಅನ್ನಪೂರ್ಣ ನರ್ಸರಿ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಹಯೋಗದೊಂದಿಗೆ ರೋಟರು ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಗೋಳಿಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಯೋಜನೆಯೊoದಿಗೆ ಹಸಿರು ಹೆಜ್ಜೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಭೂತನ್ ದೇಶದಂತೆ ನಮ್ಮ ದೇಶದಲ್ಲಿರುವವರು ಒಂದೊoದು ಗಿಡಗಳನ್ನು ನೆಟ್ಟರೆ ದೇಶವೇ ಹಸಿರು ಸಂಪತ್ತಿನಿoದ ಕೂಡುತ್ತದೆ ಆದರೆ ಯಾಕೀ ನಿರ್ಲಕ್ಷ್ಯ ಈ ನಿರ್ಲಕ್ಷ್ಯವೇ ಇಂದಿನ ಸ್ಥಿತಿಗೆ ಕಾರಣವಾಗಿದೆ, ಇದರ ಜೊತೆಗೆ ಅಂತರ್ಜಲವು ಕ್ಷೀಣಿಸುತ್ತಿದೆ ಇದಕ್ಕಾಗಿ ಮಳೆನೀರು ಕೊಯ್ಲು ಎಂಬ ಕಾರ್ಯಕ್ರಮವನ್ನು ನಮ್ಮ ನಮ್ಮ ಮನೆಗಳಲ್ಲಿ ಅನುಷ್ಠಾನಗೊಳಿಸಿದರೆ ಜಲವು ಸಂಪದ್ಭರಿತವಾಗುವುದರಲ್ಲಿ ಅನುಮಾನವೇ ಇಲ ಎಂದು ಪಂಚವರ್ಣ ಈ ನಿರಂತರ ಪಕೃತಿಯ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮನೆ ಮನೆಗೆ ಆರಿಜಾತ , ಲಕ್ಷ್ಮಣ ಫಲವನ್ನು ನೆಡಲಾಯಿತು ಹಾಗೂ ಭಾಗಿಯಾದ ಪರಿಸರಾಸಕ್ತರಿಗೆ ಪರಿಸರ ಜಾಗೃತಿ ಪ್ರತಿಜ್ಞಾವಿಧಿಯನ್ನು ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಭೋದಿಸಿದರು. ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಕುಸುಮಾ ಮನೋಜ್,ಕಾರ್ಯದರ್ಶಿ ಕೆ.ರಾಜಾರಾಮ್ ಐತಾಳ್, ಗೋಳಿಬೆಟ್ಟು ಶಾಲಾ ಎಸ್ ಡಿಎಂಸಿ ಮಾಜಿ ಉಪಾಧ್ಯಕ್ಷ ವಿಜಯ ಪೂಜಾರಿ, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಗೊಳಿಬೆಟ್ಟು ಬೊಬ್ಬರ್ಯ ಸಂಘಟನೆಯ ಕಾರ್ಯದರ್ಶಿ ರಾಜೇಶ್ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ನಿವೃತ್ತ ಪೋಲಿಸ್ ಅಧಿಕಾರಿ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

ಸದಸ್ಯ ಪ್ರಭಾಕರ್ ಮಣೂರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ಗೋಳಿಬೆಟ್ಟು ಶಾಲಾ ಮುಖ್ಯ ಶಿಕ್ಷಕ ಮಹೇಶ್ ಮೊಗವೀರ ವಂದಿಸಿದರು. ಕೋಟದ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ 311ನೇ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ರೋಟರು ಕ್ಲಬ್ ಹಂಗಾರಕಟ್ಟೆ ಸಾಸ್ತಾನ ,ಗೋಳಿಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಯೋಜನೆಯೊoದಿಗೆ ಹಸಿರು ಹೆಜ್ಜೆ ಅಭಿಯಾನಕ್ಕೆ ಪರಿಸರಪ್ರೇಮಿ ಅವಿನಾಶ್ ಕಾಮತ್ ಚಾಲನೆ ನೀಡಿದರು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಕುಸುಮಾ ಮನೋಜ್,ಕಾರ್ಯದರ್ಶಿ ಕೆ.ರಾಜಾರಾಮ್ ಐತಾಳ್, ಗೋಳಿಬೆಟ್ಟು ಶಾಲಾ ಎಸ್ ಡಿಎಂಸಿ ಮಾಜಿ ಉಪಾಧ್ಯಕ್ಷ ವಿಜಯ ಪೂಜಾರಿ ಇದ್ದರು.

Leave a Reply

Your email address will not be published. Required fields are marked *