ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತದ ಖ್ಯಾತ ವಿಜ್ಞಾನಿಯಾದ ಸರ್ ಸಿ ವಿ ರಾಮನ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಇಂದು ದೇಶಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.
ಬಾದಾಮಿ ತಾಲೂಕಿನ ಆಡಗಲ್ಲ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ವಿಜ್ಞಾನ ಮಾದರಿಗಳ ತಯಾರಿಕೆ ಹಾಗೂ ಪ್ರಯೋಗಗಳನ್ನು ಪ್ರದರ್ಶಿಸುವುದರ ಮೂಲಕ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಿದರು.
ಈ ಕಾರ್ಯಕ್ರಮವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಉದ್ಘಾಟನೆ ಮಾಡಿದರು ಗ್ರಾಮ ಪಂಚಾಯತ್ ಸದಸ್ಯರಾದ ಬೆಳ್ಳಿಗುಂಡಿಯವರು ಪ್ರಾಸ್ತಾವಿಕ ನುಡಿಗಳನಾಡಿದರು ಹಾಗೂ ಶಾಲೆಯ ಮುಖ್ಯ ಗುರುಗಳಾದ ಶ್ರೀಯುತ ಕೆ ಟಿ ಕೋರಣ್ಣವರ್ ಸರ್ ವಿಜ್ಞಾನದ ಮಹತ್ವವನ್ನು ತಿಳಿಸಿಕೊಟ್ಟರು ವಿಜ್ಞಾನ ಶಿಕ್ಷಕಿಯರಾದ ಮಾಳವಾಡ ಮೇಡಂ ರವರು ಮಕ್ಕಳಿಗೆ ವಸ್ತು ಪ್ರದರ್ಶನದ ಮಾರ್ಗದರ್ಶನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರುಗಳಾದ ನಾಗನೂರು, ಬಂಡಿವಡ್ಡರ, ನರಸಾಪುರ ಸರ್ ಹಾಗೂ ಶ್ರೀಮತಿ ಅಶ್ವಿನಿ ಅಂಗಡಿ, ಪೂಜಾರ್, ಪರಡ್ಡಿ ವಂಕಲಕುಂಠಿ ಧರ್ಮಶಾಲಿ ರೋಣದ ಮನ್ನಾಪುರ ಹಾಗೂ ಕೇಸರಿ , ಕುಪ್ಪಸ್ಥ , ಗುರುಮಾತೆಯರು ಪಾಲ್ಗೊಂಡಿದ್ದರು. ಊರಿನ ಹಿರಿಯರು ಪಾಲಕರು ಹಾಗೂ ಎಸ್ ಡಿ ಎಮ್ ಸಿ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
















Leave a Reply