ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆರೋಗ್ಯದತ್ತ ಹೆಚ್ಚು ಗಮನ ಹರಿಸಿ: ದುಶ್ಚಟಗಳಿಗೆ ಬಲಿಯಾಗದ್ದಿರಿ.!!
ಕನ್ನೋಳ್ಳಿ ಗ್ರಾಮದಲ್ಲಿ ಎಡಕೆ ಕ್ಲಿನಿಕ್ ಉದ್ಘಾಟನೆ

ಸಾವಳಗಿ: ಗ್ರಾಮೀಣ ಜನರಿಗೆ ತುರ್ತು ಚಿಕಿತ್ಸಾ ಸೇವೆಗಳು ದೊರೆಯುವ ನಿಟ್ಟಿನಲ್ಲಿ ಕ್ಲಿನಿಕ್ ಗಳು ವರದಾನವಾಗಿದೆ. ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಹರಿಸಿಬೇಕು, ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೋಡಬೇಕು ಎಂದು ಕಾಜಿಬೀಳಗಿ/ಜಂಬಗಿಯ ಸದಾನಂದ ಮಹಾರಾಜರರು ತಿಳಿಸಿದರು.

ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ ಕನ್ನೋಳ್ಳಿ ಗ್ರಾಮದಲ್ಲಿ ಶುಕ್ರವಾರ ಡಾ|| ಆರ್ ಜಿ ಎಡಕೆ ಅವರ ಎಡಕೆ ಕ್ಲಿನಿಕ್ ಉದ್ಘಾಟನೆಯನ್ನು ಶುಕ್ರವಾರ ಕಾಜಿಬೀಳಗಿ/ಜಂಬಗಿಯ ಸದಾನಂದ ಮಹಾರಾಜರ ಉದ್ಘಾಟಿಸಿ ಮಾತನಾಡಿದ ಅವರು ಈಗಿನ ಯುವಕರು ಮದ್ಯಪಾನ ಮಾಡಿ ಎಗ್‌ರೈಸ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯದತ್ತ ಗಮನ ನೀಡಬೇಕಿದೆ’ ಎಂದು ಹೇಳಿದರು.

ನಂತರ ಮಾತನಾಡಿದ ಸಾವಳಗಿಯ ಪಾರ್ಶ್ವನಾಥ ಉಪಾಧ್ಯೆ ಅವರು ಆರೋಗ್ಯವಂತರಾಗಿರಲು ಒತ್ತಡ ಕಡಿಮೆ ಮಾಡಿಕೊಳ್ಳುವ ಜತೆಗೆ ದುರಾಸೆಯಿಂದಲೂ ದೂರವಿರಬೇಕು’. ಜೀವನವನ್ನು ಉತ್ತಮವಾಗಿ ಇಟ್ಟುಕೊಳ್ಳಿ, ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಊರಿನ ಸಾರ್ವಜನಿಕರು, ಹಿರಿಯರು, ಯುವಕರು, ರಾಜಕೀಯ ನಾಯಕರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅಪ್ಪಾಸಾಬ ಜಿ ಎಡಕೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಲಿಂಗನೂರ

ನಮ್ಮ ಎಡಕೆ ಕ್ಲಿನಿಕವು ನೂತನವಾಗಿ ಪ್ರಾರಂಭ ಮಾಡಿದ್ದೇವೆ, ಹಳ್ಳಿಯಲ್ಲಿ ಸಹ ಆಸ್ಪತ್ರೆಗಳು ಬಹಳ ಕಡಿಮೆ, ಆರೋಗ್ಯದಲ್ಲಿ ಏನಾದರೂ ತೊಂದರೆ ಉಂಟಾದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಗುವ ಎಲ್ಲ ಸೇವೆಗಳು ಇರಲಿವೆ. ಸಮಾಜದ ಕಟ್ಟಕಡೆಯ ಜನರಿಗೆ ಆರೋಗ್ಯ ಸಿಗಬೇಕೆಂಬುದು ನಮ್ಮ ಆಶಯ.
ಅಪ್ಪಾಸಾಬ ಜಿ ಎಡಕೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಲಿಂಗನೂರ

Leave a Reply

Your email address will not be published. Required fields are marked *