ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕದ್ರಿ ಗುಡ್ಡಿ: ಶ್ರೀ ಸುವರ್ಣ ಯಕ್ಷೇಶ್ವರಿ ದೇವಸ್ಥಾನದ ವಾರ್ಷಿಕ ವರ್ಧಂತ್ಯುತ್ಸವ ಹಾಗೂ ಭಜನಾ ಕಾರ್ಯಕ್ರಮ​

ಕೆಂಚನೂರು: ಇಲ್ಲಿನ ಕದ್ರಿ ಗುಡ್ಡಿ, ಶೆಟ್ರಕಟ್ಟೆಯ ಶ್ರೀ ಸುವರ್ಣ ಯಕ್ಷೇಶ್ವರಿ ದೇವಸ್ಥಾನದ ವಾರ್ಷಿಕ ವರ್ಧಂತ್ಯುತ್ಸವ ಹಾಗೂ ಶ್ರೀ ಸುವರ್ಣ ಯಕ್ಷೇಶ್ವರಿ ಭಜನಾ ಮಂಡಳಿಯ 3ನೇ ವರ್ಷದ ವಾರ್ಷಿಕೋತ್ಸವವು ಏಪ್ರಿಲ್ 19, 2026ರ ಆದಿತ್ಯವಾರ ಸಂಜೆ 5.00 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಜರುಗಲಿದೆ.​

ಕಾರ್ಯಕ್ರಮದ ವಿವರಗಳು: ​ದಿನದ ವಿಶೇಷವಾಗಿ ಭಜನಾ ಕಾರ್ಯಕ್ರಮ, ಹಿರಿಯ ಭಜಕರಿಗೆ ಸನ್ಮಾನ ಹಾಗೂ ಭಜನಾ ಮಂಡಳಿಯ ಕ್ರೀಡಾ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ತದನಂತರ ಧಾರ್ಮಿಕ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.​

ಅಧ್ಯಕ್ಷತೆ: ಶ್ರೀ ಬಸವ ಪೂಜಾರಿ (ಗೌರವಾಧ್ಯಕ್ಷರು, ಶ್ರೀ ಸುವರ್ಣ ಯಕ್ಷೇಶ್ವರಿ ದೇವಸ್ಥಾನ).​ಉದ್ಘಾಟನೆ: ವೇದಮೂರ್ತಿ ಶ್ರೀನಿವಾಸ ಉಪಾಧ್ಯಾಯ (ಅರೆಕಲ್ಲು ಮಠ, ಗುಲ್ವಾಡಿ).​ಗೌರವ ಉಪಸ್ಥಿತಿ: ಅಶೋಕ್ ಪೂಜಾರಿ ಬೆಳ್ಳಾಡಿ, ಅಶೋಕ್ ಶೆಟ್ಟಿ ಚೈತನ್ಯ, ಸುಧೀರ್ ಕುಮಾರ್ ಶೆಟ್ಟಿ ಕೆಂಚನೂರು, ಜಯಕರ ಪೂಜಾರಿ ಗುಲ್ವಾಡಿ, ರಾಜೀವ ಶೆಟ್ಟಿ ಹಟ್ಟಿಯಂಗಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.​

ಸನ್ಮಾನಿತರ ಪಟ್ಟಿ: ​ಹಿರಿಯ ಭಜಕರು:ಶೀನ ಮಡಿವಾಳ (ಶೆಟ್ರ ಕಟ್ಟೆ), ಬಚ್ಚು ಶೆಟ್ಟಿ (ಹಟ್ಟಿಯಂಗಡಿ), ಮಂಜು ಪೂಜಾರಿ (ಗುಲ್ವಾಡಿ), ಶೇಖರ್ ಶೆಟ್ಟಿ (ಶೆಟ್ರ ಕಟ್ಟೆ), ಸೀತಾರಾಮ್ ಶೆಟ್ಟಿ (ಹೊಸೂರು), ಲಕ್ಷ್ಮಣ ಪೂಜಾರಿ (ಶೆಟ್ರ ಕಟ್ಟೆ), ರಾಮ ಉಪ್ಪಾರ್ (ಗುಲ್ವಾಡಿ), ಗೌರಿ ಶ್ರೀಯಾನ್ (ಕಂದಾವರ), ಚಂದ್ರಶೇಖರ ಶೆಟ್ಟಿ (ಹೊಸಬಾಳು), ಸಂಜೀವ ಪೂಜಾರಿ (ಮೋರ್ಟು ಬೆಳ್ಳಾಲ).

ಕ್ರೀಡಾ ಸಾಧಕರು: ಅರ್ಚನಾ: 3000 ಮೀ. ಓಟ (ರಾಜ್ಯ ಮಟ್ಟಕ್ಕೆ ಆಯ್ಕೆ)​ಮೇಘನಾ ಆರ್. ಪೂಜಾರಿ: 400 ಮೀ. ಓಟ (ಜಿಲ್ಲಾ ಮಟ್ಟಕ್ಕೆ ಆಯ್ಕೆ)​ಕಾರ್ತಿಕ್ ಬಿ. ಪೂಜಾರಿ: ಹರ್ಡಲ್ಸ್ ರೇಸ್ (ಜಿಲ್ಲಾ ಮಟ್ಟಕ್ಕೆ ಆಯ್ಕೆ)​ಈ ಪುಣ್ಯ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹಾಗೂ ಭಜನಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀ ಸುವರ್ಣ ಯಕ್ಷೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಶೋಭಾ ಅಣ್ಣಪ್ಪ ಪೂಜಾರಿ ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.

✍️ ಪುರುಷೋತ್ತಮ್ ಪೂಜಾರಿ ಕೊಡಪಾಡಿ

Leave a Reply

Your email address will not be published. Required fields are marked *