ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಕ್ರಮ ಒತ್ತುವರಿ ಪ್ರಕರಣ: ಶ್ರೀಧರ್ ಶೆಟ್ಟಿಯ ಬೆನ್ನಿಗೆ ನಿಂತ ‘ತ್ರಿಮೂರ್ತಿಗಳು’! ಲೋಕಾಯುಕ್ತ ಆದೇಶಕ್ಕೂ ಕಿಮ್ಮತ್ತು ಇಲ್ಲ??

ಕುಂದಾಪುರ ತಾಲ್ಲೂಕಿನಲ್ಲಿ ಅಕ್ರಮ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಒತ್ತುವರಿದಾರ ಶ್ರೀಧರ್ ಶೆಟ್ಟಿಯ ಬೆನ್ನಿಗೆ ನಿಂತಂತೆ ಕಾಣುತ್ತಿರುವ ತ್ರಿಮೂರ್ತಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಲೋಕಾಯುಕ್ತ ಆದೇಶ ಹೊರಬಂದ ಬಳಿಕವೂ, ಪದೇ ಪದೇ ಗಡವು ನೀಡಿ ಪ್ರಕರಣವನ್ನು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

ಮಾಧ್ಯಮಗಳು ವರದಿ ಮಾಡಿದಂತೆ, ತೆರವು ಕಾರ್ಯಾಚರಣೆ ನಾಟಕೀಯವಾಗಿ ನಡೆದಿದ್ದು, ಕಾರ್ಯಾಚರಣೆ ದಿನವೇ ತಹಸೀಲ್ದಾರ್ ರಜೆ, ಗ್ರಾಮ ಆಡಳಿತಾಧಿಕಾರಿ ರಜೆ, ಮತ್ತು ಆರ್.ಐ. ಮೊಬೈಲ್ ಸ್ವಿಚ್ ಆಫ್ ಆಗಿದ್ದ ಘಟನೆ ಅನುಮಾನಕ್ಕೆ ಕಾರಣವಾಗಿದೆ.

ನಂತರ ತಹಸೀಲ್ದಾರ್ ತೆರವು ಆದೇಶ ನೀಡಿದರೂ, ಆರ್.ಐ.ರವರು ಮೆಸ್ಕಾಂ, ಪಿಡಿಒ ಮತ್ತು ಪೊಲೀಸ್ ಇಲಾಖೆಗಳಿಗೆ ಕಾಟಾಚಾರಕ್ಕಾಗಿ ನೋಟಿಸ್ ನೀಡಿದಂತೆ ನಡೆದುಕೊಂಡಿದ್ದಾರೆ. ಆದರೆ ಜೇಸಿಬಿ ಬಳಸದೆ, ಸ್ಥಳಕ್ಕೆ ತೆರಳಿ, ಒತ್ತುವರಿದಾರನೊಂದಿಗೆ ಮಾತುಕತೆ ನಡೆಸಿ, “ಒತ್ತುವರಿದಾರ ತಾನೇ ತಡೆದಂದಿದ್ದೇನೆ” ಎಂಬ ಹೇಳಿಕೆಯನ್ನು ವೈಟ್ ಪೇಪರ್‌ನಲ್ಲಿ ಬರೆಯಿಸಿಕೊಂಡು ಸ್ವೀಕರಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಇದರ ಜೊತೆಗೆ, ತಹಸೀಲ್ದಾರರಿಗೆ ವಿಷಯ ತಿಳಿಸದೇ, ಸಂಜೆ ವೇಳೆಯಲ್ಲಿ ಮತ್ತೊಂದು ಆದೇಶ ಪ್ರತಿಯನ್ನು ಸಿದ್ಧಪಡಿಸಿ, ತಹಸೀಲ್ದಾರ್ ರಿಂದ ಆರ್. ಐ ರಾಘವೇಂದ್ರ ಮಂಗಳಾರತಿ ಮಾಡಿಸಿಕೊಂಡ ವಿಚಾರ ತಾಲೂಕು ಕಚೇರಿಯ ಒಳಾಂಗಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕೊನೆಗೂ, ಒತ್ತುವರಿದಾರನಿಗೆ ಸ್ಟೇ ಸಿಗುವಂತೆ ಸಹಕರಿಸಿದ ಆರೋಪಗಳು ತ್ರಿಮೂರ್ತಿಗಳ ಮೇಲೆ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವರೇ ಎಂಬುದು ಇದೀಗ “ಮಿಲಿಯನ್ ಡಾಲರ್ ಪ್ರಶ್ನೆ” ಆಗಿದೆ. ಮುಂದಿನ ಬೆಳವಣಿಗೆಗಳಿಗಾಗಿ ಕಾದು ನೋಡಬೇಕಿದೆ…..

Leave a Reply

Your email address will not be published. Required fields are marked *