ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಂಗಳೂರಿನ ಫಿಜಾ ಬೈ ನೆಕ್ಸಸ್ ಮಾಲ್ ಈ ಬೇಸಿಗೆಯಲ್ಲಿ ಮಕ್ಕಳಿಗಾಗಿ ಸೃಜನಶೀಲತೆ ಮತ್ತು ಮೋಜಿನ ರಸದೌತಣ

ಏಪ್ರಿಲ್ 18 ರಿಂದ ಮೇ 24, 2026ರವರೆಗೆ ಇಲ್ಲಿ ‘ದ ಸಮ್ಮರ್ ಕಿಡ್ಸ್ ಫೆಸ್ಟಿವಲ್ 2026’ ಆಯೋಜಿಸಲಾಗಿದೆ. ಮಕ್ಕಳ ಉದ್ಯಮಶೀಲತೆ, ಕಲೆ ಮತ್ತು ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಹಬ್ಬವನ್ನು ರೂಪಿಸಲಾಗಿದ್ದು, ಮಾಲ್‌ನಲ್ಲಿ ಡಿಸ್ಕವರಿ, ಕ್ರಿಯೇಟಿವ್ ಸ್ಕಿಲ್ಸ್ ಹಾಗೂ ಇಕೋ-ಲರ್ನಿಂಗ್ ವಲಯಗಳನ್ನೊಳಗೊಂಡ ವಿಶೇಷ ‘ಮಲ್ಟಿ-ಜೋನ್ ಪೆವಿಲಿಯನ್’ ಇರಲಿದೆ.

1ನೇ ವಾರ (ಏಪ್ರಿಲ್ 18-19):ವಿವಿಧ ಚಟುವಟಿಕೆಗಳೊಂದಿಗೆ ಹಬ್ಬಕ್ಕೆ ಚಾಲನೆ. ಪುಟಾಣಿ ಬಾಣಸಿಗರಿಗಾಗಿ ಲಿಟಲ್ ಚೆಫ್ ಸ್ಪರ್ಧೆ ಮತ್ತು ಅದರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

2ನೇ ವಾರ (ಏಪ್ರಿಲ್ 23-26):ಮಕ್ಕಳಲ್ಲಿ ಅನ್ವೇಷಣಾ ಮನೋಭಾವ ಬೆಳೆಸಲು ಬಿಕಮ್ ಆನ್ ಆಥರ್’ ಸೆಷನ್ ಹಾಗೂ ರೋಮಾಂಚಕ
ಪ್ಲಾನೆಟೇರಿಯಂ ಶೋ ಆಯೋಜಿಸಲಾಗಿದೆ.

3ನೇ ವಾರ (ಮೇ 7-10): ಸಕ್ರಿಯ ಕಲಿಕೆಯ ಜೊತೆಗೆ, ಕುಟುಂಬದೊಂದಿಗೆ ಆಚರಿಸಲು ವಿಶೇಷ ತಾಯಂದಿರ ದಿನಾಚರಣೆ ಕಾರ್ಯಕ್ರಮಗಳಿರಲಿವೆ.

4ನೇ ವಾರ (ಮೇ 21-24): ಅಂತಿಮ ಹಂತವಾಗಿ ಮಕ್ಕಳಲ್ಲಿ ಉದ್ಯಮಶೀಲತೆ ಬೆಳೆಸಲು ‘ಕಿಡ್ಸ್ ಫ್ಲೀ ಮಾರ್ಕೆಟ್’ ಮತ್ತು ತಜ್ಞರ ಉಪನ್ಯಾಸಗಳು ನಡೆಯಲಿವೆ.

Leave a Reply

Your email address will not be published. Required fields are marked *