ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನ-ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದ ಕಲರವ

ಕೋಟ: ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಸಂಚಾರ 73 ಸರಣಿ ಕಾರ್ಯಕ್ರಮ ಸೈಂಟ್ ಆಂಟನಿ ಆಂಗ್ಲ ಮಾಧ್ಯಮ ಶಾಲೆ ಸಾಸ್ತಾನ ಇಲ್ಲಿ ನೆರವೇರಿತು. ಅಧ್ಯಕ್ಷತೆಯನ್ನು ವಹಿಸಿದ ಬ್ರಹ್ಮಾವರ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ ಕೃಷಿ ಮತ್ತು ಖುಷಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ನಾವು ದಾಟಿಸಬೇಕಾಗಿದ್ದು ಕಥೆ ಕವನಗಳ ಮೂಲಕ ಪರಿಚಯಿಸಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕುಂದಗನ್ನಡ, ಮತ್ತು ಶುದ್ಧ ಕನ್ನಡ, ಸ್ಥಳೀಯ ಭಾಷೆಗಳ ಬಗ್ಗೆ ವಿವರ ನೀಡಿದರು. ಪರಿಷತ್‌ನ ಸುಪ್ರೀತಾ ಪುರಾಣಿಕ್, ಸುಜಾತ ಬಾಯರಿ ,ಅಚ್ಚುತ ಪೂಜಾರಿ ಹಾಡಿದ ಕನ್ನಡ ಗೀತೆಗಳಿಗೆ ಅಭಿನಯ ಮಾಡಿ ತೋರಿಸಿ ಪ್ರೇರಣೆಗೊಳಿಸಿ ಶಾಲಾ ಮಕ್ಕಳು ಮತ್ತು ಶಿಕ್ಷಕಿಯರು ಅಭಿನಯಿಸುವಂತೆ ಮಾಡಿದರು. ಯಕ್ಷ ಶಿಕ್ಷಕ ನರಸಿಂಹ ತುಂಗ ಯಕ್ಷಗಾನದ ಪದ್ಯಕ್ಕೆ ಕುಣಿದು ಹಾಸ್ಯದಲ್ಲಿ ಬರುವ ಪ್ರಾಸ ಪದದ ಬಗ್ಗೆ ವಿವರಿಸಿದರು.

ಸೈಂಟ್ ಆಂಟನಿ ಆಂಗ್ಲ ಮಾಧ್ಯಮ ಶಾಲೆ ಸಾಸ್ತಾನ ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಸಂಚಾರ 73 ಸರಣಿ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪರಿಷತ್‌ನ ಸುಪ್ರೀತಾ ಪುರಾಣಿಕ್, ಸುಜಾತ ಬಾಯರಿ ,ಅಚ್ಚುತ ಪೂಜಾರಿ ಇದ್ದರು.

Leave a Reply

Your email address will not be published. Required fields are marked *