ಕೋಟ: ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಸಾಹಿತ್ಯ ಸಂಘದ ಆಶ್ರಯದಲ್ಲಿ ವಿಶೇಷ ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮ ಜು.14ರಂದು ವಿಶಿಷ್ಟವಾಗಿ ಸಂಪನ್ನಗೊoಡಿತು. ಪಠ್ಯದಲ್ಲಿ ಅಳವಡಿಸಲಾದ ಹಳಗನ್ನಡ ಸಾಹಿತ್ಯಕ್ಕೆ ಗಮಕವಾಚನ ವ್ಯಾಖ್ಯಾನ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕೂಡುವಿಕೆಯಿಂದ ಜರುಗಿದ್ದು ವಿಶಿಷ್ಟವಾಗಿತ್ತು. ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ಶುಭ ಹಾರೈಕೆಯಿಂದ ಆರಂಭವಾದ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಎಂಟನೇ ತರಗತಿಯ ಪಠ್ಯವಾದ ರಾಮಧಾನ್ಯ ಚರಿತೆಯ ಒಂದು ಭಾಗಕ್ಕೆ ಕುಮಾರಿ ಆರಭಿ ಹೆಗಡೆ ಗಮಕಿಯಾಗಿ ಕುಮಾರಿ ಸೃಷ್ಟಿ ವ್ಯಾಖ್ಯಾನಗೈದರು.
ಅನಂತರದಲ್ಲಿ ಒಂಭತ್ತನೆಯ ತರಗತಿಯ ಪಠ್ಯದಲ್ಲಿ ಅಳವಡಿಸಲಾದ ಯಶೋಧರ ಚರಿತೆಯ ಒಂದು ಭಾಗಕ್ಕೆ ಗಮಕಿ ವಿದ್ವಾನ್ ಶಂಭು ಭಟ್ ಇವರು ಗಮಕ ಗೈದು ಕುಮಾರಿ ಪೂಜಾಶ್ರೀ ವ್ಯಾಖ್ಯಾನಿಸಿದರು. ಕೊನೆಯದಾಗಿ ಹತ್ತನೆಯ ತರಗತಿಯ ಪಠ್ಯದಲ್ಲಿ ಅಳವಡಿಸಲಾದ ಕುಮಾರವ್ಯಾಸ ಭಾರತದ ಒಂದು ಭಾಗಕ್ಕೆ ಕುಮಾರಿ ಶ್ರಾವ್ಯ ಗಮಕಿಯಾಗಿದ್ದು ಮಹಾಲಕ್ಷ್ಮೀ ಎಂಪಿ ವ್ಯಾಖ್ಯಾನಿಸಿದರು.
ಕುಮಾರಿ ಉನ್ನತಿ ಗಾಣಿಗ ನಿರೂಪಿಸಿದ ಈ ಕಾರ್ಯಕ್ರಮಕ್ಕೆ ಕುಮಾರಿ ಅನಘ ಹೊಳ್ಳ ಧನ್ಯವಾದಗೈದರು.ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಸಾಹಿತ್ಯ ಸಂಘದ ಆಶ್ರಯದಲ್ಲಿ ವಿಶೇಷ ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಗಮಕಿ ವಿದ್ವಾನ್ ಶಂಭು ಭಟ್ ಇವರು ಗಮಕ ಗೈದು ಕುಮಾರಿ ಪೂಜಾಶ್ರೀ ವ್ಯಾಖ್ಯಾನಿಸಿದರು.











Leave a Reply