ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡುವ ಉಭಯ ಸಂಸ್ಥೆಗಳ ಕಾಯಕ ಅರ್ಥಾಂಕುರ ಜನಮನ್ನಣೆ ಗಳಿಸಿದೆ: ಕೆ. ತಾರಾನಾಥ ಹೊಳ್ಳ

ಕೋಟ: ಅರ್ಥಾಂಕುರ ಕಾರ್ಯಕ್ರಮವು ದಿನೇ ದಿನೇ ಪ್ರೇಕ್ಷಕರ ಮನ ಗೆದ್ದು ನೋಡುಗರ ಸಂಖ್ಯೆಯನ್ನು ಹೆಚ್ಚಿಸುತ್ತಾ ಕಳೆಗಟ್ಟಿದೆ. ಪುರಾಣ ಕಥೆಗಳನ್ನು ಮನನ ಮಾಡಿಕೊಳ್ಳುವ ಈ ಕಾರ್ಯಕ್ರಮ ದೇಗುಲಗಳಲ್ಲಿ ಹೆಚ್ಚು ಅಗತ್ಯ. ಕಾರ್ಯಕ್ರಮವೊಂದನ್ನು ಆಯೋಜಿಸುವುದೇ ಕಷ್ಟದ ಪರಿಸ್ಥಿತಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡುವ ಉಭಯ ಸಂಸ್ಥೆಗಳ ಕಾಯಕ ನಿಜವಾಗಿಯೂ ಸಾಧನೆಯೇ ಸರಿ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ತಾರಾನಾಥ ಹೊಳ್ಳ ಪ್ರಸಿದ್ಧ ಕಲಾವಿದರನ್ನು ಗೌರವಿಸಿ ಮಾತನ್ನಾಡಿದರು.

ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಸಂಸ್ಥೆಗಳ ಸಹಯೋಗದೊಂದಿಗೆ ‘ಅರ್ಥಾಂಕುರ-24’ ಸರಣಿ ತಾಳಮದ್ದಳೆ-3 ಕಾರ್ಯಕ್ರಮದಲ್ಲಿ ಜುಲೈ 11ರಂದು ಕಲಾವಿದರನ್ನು ಗೌರವಿಸಿ ಮಾತನ್ನಾಡಿದರು.ಪ್ರಸಿದ್ಧ ಹಿರಿಯ ಕಲಾವಿದ ಜಬ್ಬಾರ್ ಸಮೋ, ಕುಂದಾಪ್ರ ಕನ್ನಡ ರಾಯಭಾರಿ ಮನು ಹಂದಾಡಿ, ಯಕ್ಷ ಗುರು ಲಂಬೋದರ ಹೆಗಡೆ ನಿಟ್ಟೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಳಿಕ ತಾಳಮದ್ದಳೆ ‘ಸಮರ ಸೌಗಂಧಿಕಾ’ ರಂಗ ಪ್ರಸ್ತುತಿಗೊಂಡಿತು.

ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಸಂಸ್ಥೆಗಳ ಸಹಯೋಗದೊಂದಿಗೆ ‘ಅರ್ಥಾಂಕುರ-24’ ಸರಣಿ ತಾಳಮದ್ದಳೆ-3 ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ತಾರಾನಾಥ ಹೊಳ್ಳ ಕಲಾವಿದರನ್ನು ಗೌರವಿಸಿ ಮಾತನ್ನಾಡಿದರು. ಪ್ರಸಿದ್ಧ ಹಿರಿಯ ಕಲಾವಿದ ಜಬ್ಬಾರ್ ಸಮೋ, ಕುಂದಾಪ್ರ ಕನ್ನಡ ರಾಯಭಾರಿ ಮನು ಹಂದಾಡಿ, ಯಕ್ಷ ಗುರು ಲಂಬೋದರ ಹೆಗಡೆ ನಿಟ್ಟೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *