ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿಗ್ರಾಮದಲ್ಲಿ ಮೂರನೇ ವರ್ಷದ ಪಂಚವರ್ಣ ಹಸಿರು ಹೆಜ್ಜೆ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ

ಕೋಟ: ಕೋಡಿಗ್ರಾಮ ಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಹಾಗೂ ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ನೇತೃತ್ವದಲ್ಲಿ ಪಂಚವರ್ಣ ಸಂಘಟನೆ ಕೋಟ, ಗೀತಾನಂದ ಫೌಂಡೇಶನ್ ಮಣೂರು ಮಾರ್ಗದರ್ಶನದಲ್ಲಿ ಕೋಡಿಗ್ರಾಮದಲ್ಲಿ ಮೂರನೇ ವರ್ಷದ ಪಂಚವರ್ಣ ಹಸಿರು ಹೆಜ್ಜೆ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ ಹೊಸಬೆಂಗ್ರೆಯಲ್ಲಿ ಜರಗಿತು.

ಕೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ್ ಮೆಂಡನ್ ಹಸಿರು ಹೆಜ್ಜೆಗೆ ಪಂಚಾಯತ್ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಮನೆಯಿಂದ ಚಾಲನೆ ನೀಡಿದರು.ಕಾರ್ಯಕ್ರಮ ಸಂಯೋಜಕರಾಗಿ ಮಾಜಿ ಅಧ್ಯಕ್ಷೆ ಗೀತಾಖಾರ್ವಿ ,ಅಂಗನವಾಡಿ ಕಾರ್ಯಕರ್ತೆ ಯಮುನಾ ಲಕ್ಷ್ಮಣ ಕುಂದರ್ ಮನೆಗೊಂದು ಗಿಡ ನೆಟ್ಟು ಜಾಗೃತಿ ಮೂಡಿಸಿದರು.

ಸಂಜೀವಿನಿ ಒಕ್ಕೂಟದ ನೂತನ ಅಧ್ಯಕ್ಷೆ ಶಾಂತ ಮೆಂಡನ್, ಹಾಲಿ ಅಧ್ಯಕ್ಷೆ ಪೂರ್ಣಿಮಾ, ಮಾಜಿ ಅಧ್ಯಕ್ಷೆ ದೀಪಾ ಆರ್ ಖಾರ್ವಿ ಮತ್ತು ಪೂರ್ಣಿಮಾ, ಸ್ತಿçಶಕ್ತಿ ಸಂಘದ ಸದಸ್ಯರು ಸುಜಾತಾ ಖಾರ್ವಿ, ಜ್ಯೋತಿ, ಸವಿತಾ ಎಸ್, ಭಾರತಿ ಉಪಸ್ಥಿತರಿದ್ದರು. ಕೋಡಿಗ್ರಾಮದಲ್ಲಿ ಮೂರನೇ ವರ್ಷದ ಪಂಚವರ್ಣ ಹಸಿರು ಹೆಜ್ಜೆ ಮನೆಗೊಂದು ಗಿಡ ನೆಡುವ ಕಾರ್ಯಕ್ರಮವನ್ನು ಕೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ್ ಮೆಂಡನ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಲಕ್ಷ್ಮಣ ಸುವರ್ಣ ಮನೆಯಿಂದ ಚಾಲನೆ ನೀಡಿದರು. ಮಾಜಿ ಅಧ್ಯಕ್ಷೆ ಗೀತಾಖಾರ್ವಿ , ಅಂಗನವಾಡಿ ಕಾರ್ಯಕರ್ತೆ ಯಮುನಾ ಲಕ್ಷ್ಮಣ ಕುಂದರ್ ಇದ್ದರು.

Leave a Reply

Your email address will not be published. Required fields are marked *