ಕೋಟ: ಜನಸಾಮಾನ್ಯ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಜನಸಂಪರ್ಕ ಸಭೆ ಆಯೋಜಿಸಿ ಪರಿಹಾರ ಕಂಡುಕೊಳ್ಳಲು ವೇದಿಕೆ ಸೃಷ್ಟಿಸಲಾಗಿದೆ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಗುರುವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರಕ್ಕಾಗಿ ಆಯೋಜಿಸಿದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ ಜನಸಾಮಾನ್ಯರ ಭವಣೆಯನ್ನು ಅತಿ ಹತ್ತಿರದಲ್ಲಿ ಶಾಸಕನಾಗಿ ನಾನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ, ಸರಕಾರಿ ಸವಲತ್ತುಗಳಲ್ಲಿರುವ ಅಥವಾ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಈ ಜನಸಂಪರ್ಕ ಸಭೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ಪ್ರಾರಂಭದಲ್ಲಿ ಮಾಹಿತಿಯನ್ನು ನೀಡಲಾಯಿತು. ನಂತರ ಅಹವಾಲು ಸ್ವೀಕಾರ ಜರಗಿತು.ಸರ್ ಪ್ಲಿಸ್ ನಮ್ಮ ಭಾಗದ ರಸ್ತೆ ಸಮಸ್ಯೆ ಬಗೆರಿಸಿ…! ಇದೇ ಮೊದಲ ಬಾರಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಜನಸಾಮಾನ್ಯರ ಸಮಸ್ಯೆಗಳನ್ನು ಅತಿ ಹತ್ತಿರದಲ್ಲಿ ಕಾಣಲು ಜನಸಂಪರ್ಕ ಸಭೆಯನ್ನು ಕಳೆದ ತಿಂಗಳಿAದ ಶಾಸಕ ಕೊಡ್ಗಿ ಆಯೋಜಿಸಿದ್ದಾರೆ.
ಅದರಂತೆ ಗುರುವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಸಮಸ್ಯೆಗಳನಿರಿಸಿಕೊಂಡು ಸಾಕಷ್ಟು ಪ್ರಮಾಣದಲ್ಲಿ ಜನಸಾಮಾನ್ಯರು ಕೈಯಲ್ಲಿ ಮನವಿ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನಿಡಿದುಕೊಂಡು ಅಹವಾಲನ್ನು ಶಾಸಕರ ಬಳಿ ತೊಡಿಕೊಂಡರು. ಈ ಜನಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ತಹಶಿಲ್ದಾರ್ , ಕಂದಾಯ,ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖಾಧಿಕಾರಿಗಳು ಉಪಸ್ಥಿತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಮನವಿ ಇತ್ತವರ ಸಮ್ಮುಖದಲ್ಲಿ ಬಗೆಹರಿಸಿದರು.
ಪ್ರಮುಖ ಸಮಸ್ಯೆಗಳುಮೂಡುಗಿಳಿಯಾರು ಭಾಗದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹಂದಕುoದ ಸೋಮಶೇಖರ್ ಶೆಟ್ಟಿ ತಮ್ಮೂರ ಹೊಳೆ ಹೂಳು ತೆರವು,ಕೇಂದ್ರ ಸರಕಾರದ ಜಲಜೀವನ್ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಸಕರಲ್ಲಿ ಪ್ರಸ್ತಾಪಿಸಿದರು.
ರೆಸಾರ್ಟ್ ಗಳಿಂದ ಸಮಸ್ಯೆ ಜನಸಂಪರ್ಕ ಸಭೆಯಲ್ಲಿ ಮಣೂರು ಪಡುಕರೆ ಭಾಗದ ಮೀನುಗಾರರು ಆ ಭಾಗದಲ್ಲಿರುವ ಹಲವು ರೆಸಾರ್ಟ್ ಗಳಿಂದ ಮೀನುಗಾರಿಕೆಗೆ ಸಮಸ್ಯೆಯನ್ನು ತಂದೊಡ್ಡಿ ಬೀಚ್ ಸಮೀಪದ ಸರಕಾರಿ ಸ್ಥಳಗಳನ್ನು ಒತ್ತುವರಿ ಪಡಿಸಿಕೊಂಡು ಗೇಟ್ ಅಳವಡಿಸಿ ಸಾಂಪ್ರದಾಯಿಕ ಮೀನುಗಾರಿಕೆಗೆ ಸಮಸ್ಯೆಯಾಗಿಸಿದ್ದಾರೆ.
ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಮೀನುಗಾರರು ಮನವಿ ಮಾಡಿದರು.ಕಾಂಡ್ಲಾ ಗಿಡ ತೆರವು ಆಗ್ರಹಮಣೂರು ಪಡುಕರೆಯ ಉಪ್ಪು ನೀರಿನ ಹೊಳೆಯಲ್ಲಿ ಕಾಂಡ್ಲ ಗಿಡಗಳು ಹೊಳೆಯನ್ನು ಆವರಿಸಿಕೊಂಡಿದೆ ಇದರಿಂದ ನೀರು ಸರಾಗವಾಗಿ ಹರಿಯದೆ ನೂರಾರು ಎಕ್ಕರೆ ಕೃಷಿ ಭೂಮಿ ಕೃತಕ ನೆರೆಗೆ ಸಿಲುಕುತಿದೆ ಈ ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದೆ ಪರಿಹಾರ ಕಂಡಿಲ್ಲ ಎಂದು ಪಂಚಾಯತ ಮಾಜಿ ಸದಸ್ಯ ಭುಜಂಗ ಗುರಿಕಾರ ಶಾಸಕರಲ್ಲಿ ಮನವಿ ಇತ್ತರು.
ಈ ಬಗ್ಗೆ ಸಂಬoಧಿಸಿದ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಪರಿಹಾರಕ್ಕೆ ಕಂಡುಕೊಳ್ಳವ ಬರವಸೆಯನ್ನು ಶಾಸಕರು ಇತ್ತರು.ಕೋಟ ಪಂಚಾಯತ್ ರಸ್ತೆಯದ್ದೆ ಸಮಸ್ಯೆಜನಸಂಪರ್ಕ ಸಭೆಯಲ್ಲಿ ಮುಕ್ಕಾಲು ಭಾಗ ಸ್ಥಳೀಯ ವ್ಯಾಪ್ತಿಯ ರಸ್ತೆಗಳ ಸಮಸ್ಯೆ ಶಾಸಕರನ್ನು ಹೈರಾಣಗೊಳಿಸಿತು.
ಮಣೂರು ಪಡುಕರೆ, ಹರ್ತಟ್ಟು ಗಿಳಿಯಾರು ಸೇತುವೆ, ಜಟ್ಟಿಗೇಶ್ವರ ಸಮೀಪ ರಸ್ತೆ, ಪಡುಕರೆ ಚೌಕೋಡಿ ಮನೆ ರಸ್ತೆ ಕಾಮಗಾರಿ ಲೋಪ, ಕಾಸನಗುಂದು ರಸ್ತೆ ಸಮಸ್ಯೆ, ಹರ್ತಟ್ಟು ಭಾಗದಲ್ಲಿ ಹಿಂದೂ ರುದ್ರಭೂಮಿ ಶೀಘ್ರದಲ್ಲಿ ನಿರ್ಮಿಸಲು ಮನವಿ, ಕಾಸನಗುಂದು ದಲಿತ ಕುಟುಂಬವೊoದಕ್ಕೆ ವಾಸ್ತವ್ಯ ಸ್ಥಳ ದಾಖಲೆ ವಿಳಂಬ ದೂರು, ಹೊನ್ನಾರಿ ಅಂಗವಾಗಿ ಆರ್ ಟಿಸಿಯಾಗಿ ಪರಿವರ್ತಿಸುವ ಕುರಿತು ಅಂಗನವಾಡಿ ಕಾರ್ಯಕರ್ತೆ ಮನವಿ ಸಲ್ಲಿಕೆ,ಕೋಟ ಪಡುಕರೆ ಕೃಷಿ ಭೂಮಿಯಲ್ಲಿ ಭೂಕನ ಕೆರೆ ಅಭಿವೃದ್ಧಿ ಕೂಗು, ಕೋಟ ರಾಷ್ಟ್ರೀಯ ಸಮೀಪ ಕಟ್ಟಡ ಕಾಮಗಾರಿಯಿಂದ ಸಂಚಾರಕ್ಕೆ ಸಮಸ್ಯೆ ಹೀಗೆ ಹಲವು ಸಮಸ್ಯೆಗಳನ್ನಿತ್ತು ಶಾಸಕರ ಬಳಿ ಆಯಾ ಭಾಗದ ಜನಸಾಮಾನ್ಯರು ತಮ್ಮ ಸಮಸ್ಯೆಯನ್ನು ಶಾಸಕರ ಬಳಿ ಅಳಲನ್ನು ತೊಡಿಕೊಂಡರು.
ಸಭೆಯಲ್ಲೆ ಹಲವು ಸಮಸ್ಯೆ ಪರಿಹಾರಸಭೆ ಆರಂಭವಾಗುತ್ತಿದ್ದoತೆ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಲು ಆಗಮಿಸಿದ್ದ ಸಾರ್ವಜನಿಕರ ಸಮಸ್ಯೆಗಳಿಗೆ ನಗುಮೊಗದಲ್ಲೆ ಶಾಸಕರು ಪರಿಹಾರವನ್ನಿತ್ತರು. ಸುಮಾರು ನಾಲ್ಕು ಗಂಟೆ ಅಧಿಕ ತಾಸು ಕುಳಿತು ಜನಸಾಮಾನ್ಯರ ಸಮಸ್ಯಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದರು.
ಸಭೆಯಲ್ಲಿ ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ,ಕೋಟ ಪಂಚಾಯತ್ ಆಡಳಿತ ಅಧಿಕಾರಿ ಪ್ರತಾಪಶ್ಚಂದ್ರ ಶೆಟ್ಟಿ, ಕೋಟ ಕ್ರೈಂ ವಿಭಾಗದ ಎಸ್ ಐ ಮಹಂತೇಶ್,ಪಿಡಿಒ ಉಮೇಶ್,ತಾಲೂಕು ಪಂಚಾಯತ್ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಗುರುವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರಕ್ಕಾಗಿ ಆಯೋಜಿಸಿದ ಜನಸಂಪರ್ಕ ಸಭೆಯಲ್ಲಿ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು. ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ, ಕೋಟ ಪಂಚಾಯತ್ ಆಡಳಿತ ಅಧಿಕಾರಿ ಪ್ರತಾಪಶ್ಚಂದ್ರ ಶೆಟ್ಟಿ,ಕೋಟ ಕ್ರೈಂ ವಿಭಾಗದ ಎಸ್ ಐ ಮಹಂತೇಶ್ ಇದ್ದರು.











Leave a Reply