ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣೂರು ಪಡುಕರೆ: ಪ್ರೌಢ ಶಾಲೆಯಲ್ಲಿ ವಯಸ್ಕ ಮಾದರಿ ಚುನಾವಣೆ

ಕೋಟ: ಇಲ್ಲಿನ ಮಣೂರು ಸರಕಾರಿ ಪ್ರೌಢಶಾಲೆ ಇದರ ಸಾಕ್ಷರತ ಕ್ಲಬ್ ವತಿಯಿಂದ ಇತ್ತೀಚಿಗೆ ಶಾಲಾ ಸರ್ಕಾರದ ಚುನಾವಣೆಯನ್ನು ನಡೆಸಲಾಯಿತು. ಚುನಾವಣಾ ಪ್ರಕ್ರಿಯೆ ಹಂತವಾದ ಮತದಾನದ ದಿನಾಂಕದ ಘೋಷಣೆ, ನೀತಿ ಸಂಹಿತೆ ಜಾರಿ, ನಾಮಪತ್ರ ಸಲ್ಲಿಕೆ, ಠೇವಣಿ ಸ್ವೀಕಾರ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆoತ ಮತದಾನದ ದಿನಾಂಕದ ಘೋಷಣೆ, ಚುನಾವಣಾ ಪ್ರಚಾರ ಹಾಗೂ ಮುಕ್ತ ನ್ಯಾಯ ಸಮ್ಮತ ಚುನಾವಣೆ ಪ್ರಕ್ರಿಯೆ ಹಾಗೂ ಮತಪತ್ರ ಲೆಕ್ಕ ಮತ್ತು ಫಲಿತಾಂಶ ಘೋಷಣೆ, ಮುಂತಾದ ಚುನಾವಣಾ ಹಂತಗಳನ್ನು ವಿದ್ಯಾರ್ಥಿ ನಾಯಕರು ತೊಡಗಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಪರಿಚಯಿಸಲಾಯಿತು.

ಮತದಾನದ ಆರಂಭಿಕವಾಗಿ ಅಣಕು ಮತದಾನ , ಏಜೆಂಟರ ನೇಮಕ, ಸಹಿ ಸ್ವೀಕಾರ ಹಾಗೂ ವಿವಿಧ ಪ್ರಕ್ರಿಯೆಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಿದರು. ಮತದಾನದಲ್ಲಿ ಗುರುತು ಪತ್ರ ತೋರಿಸಿದ ವಿದ್ಯಾರ್ಥಿ ಮತದಾರರು ಫೋಟೋ ಸಹಿತ ಮತದಾರರ ಗುರುತುಪ್ರತಿ , 17.ಎ ರಿಜಿಸ್ಟರ್ ನಲ್ಲಿ ಸಹಿ ಹಾಕಿ ಮತದಾರ ಖಾತ್ರಿಪಡಿಸಿಕೊಂಡರು, ಬಿಎಲ್ ಓ ಮೂಲಕ ಮತದಾರರ ಸಂಖ್ಯೆ ಪಡೆದುಕೊಂಡರು. ದಿವ್ಯಾಂಗ ವಿದ್ಯಾರ್ಥಿ ಮತದಾರಿಗೆ ಸಂಗಡಿಗನೊoದಿಗೆ ಮತದಾನ ಮಾಡುವ ಕ್ರಮ ತಿಳಿಸಲಾಯಿತು.

ವಿದ್ಯಾರ್ಥಿ ಮತದಾರರು ಗುರುತುಪತ್ರ ನೀಡಿ ಮತದಾನ ಮಾಡಿ , ಅಳಿಸಲಾಗದ ಶಾಹಿ ತೋರುಬೆರಳಿಗೆ ಹಾಕುವ ಮೂಲಕ ಸಂತಸವನ್ನು ವಿದ್ಯಾರ್ಥಿಗಳು ಹಂಚಿಕೊoಡರು. ಮತದಾನದ ನಂತರ ಬಿಗಿ ಭದ್ರತೆಯಲ್ಲಿ ಮತಪಟ್ಟಿಗೆಯನ್ನು ಸ್ಟಾçಂಗ್ ರೂಮ್ ನಲ್ಲಿ ಇರಿಸಿ ನಂತರ ಭದ್ರತೆಯಲ್ಲಿ ಮತ ಲೆಕ್ಕ ಮಾಡಲಾಯಿತು .ನಾಯಕ ಸ್ಥಾನದಲ್ಲಿ ನಾಲ್ಕು ವಿದ್ಯಾರ್ಥಿಗಳು ಕಣದಲ್ಲಿದ್ದು ದೃಶ್ಯ 10ನೇತರಗತಿ ವಿದ್ಯಾರ್ಥಿ ಹೆಚ್ಚು ಮತಗಳನ್ನು ಪಡೆದು ವಿಜೇತನಾಗಿದ್ದು ಉಪನಾಯಕ ಸ್ಥಾನಕ್ಕೆ ನಿಂತ ಆರು ವಿದ್ಯಾರ್ಥಿಗಳಲ್ಲಿ ಪ್ರಥ್ವಿಕ್ 9 ನೇ ತರಗತಿ ವಿದ್ಯಾರ್ಥಿ ಆಯ್ಕೆ ಆಗಿರುತ್ತಾನೆ.

ಶಾಲಾ ಸರಕಾರದ ಚುನಾಣೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಯಸ್ಕ ಮತದಾನದಲ್ಲಿ ಪಾಲ್ಗೊಳ್ಳುವುದು ಎಷ್ಟು ಮಹತ್ವ ಎನ್ನದರ ಜೊತೆಗೆ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯ ವಿವೇಕಾನಂದ ವಿ ಗಾಂವಕಾರ ಅಭಿನಂದಿಸಿ ಮಾತನಾಡಿದರು.

ಚುನಾವಣಾ ಕಾರ್ಯದಲ್ಲಿ ಶಿಕ್ಷಕರಾದ ಸುವರ್ಣ ನಾವಡ, ಚಂದ್ರಶೇಖರ ಶೆಟ್ಟಿ ಅನುಪಮ, ಶೋಭಾ, ರೂಪಾ, ರಜಿನಿ, ಸ್ವಾತಿ ಹಾಗೂ ಇತರ ಶಿಕ್ಷಕ ವೃಂದ ಸಹಕರಿಸಿದರು.ಇಲ್ಲಿನ ಮಣೂರು ಸರಕಾರಿ ಪ್ರೌಢಶಾಲೆ ಇದರ ಸಾಕ್ಷರತ ಕ್ಲಬ್ ವತಿಯಿಂದ ಇತ್ತೀಚಿಗೆ ಶಾಲಾ ಸರ್ಕಾರದ ಚುನಾವಣೆಯನ್ನು ನಡೆಸಲಾಯಿತು. ಮುಖ್ಯೋಪಾಧ್ಯಾಯ ವಿವೇಕಾನಂದ ವಿ ಗಾಂವಕಾರ, ಶಿಕ್ಷಕರಾದ ಸುವರ್ಣ ನಾವಡ, ಚಂದ್ರಶೇಖರ ಶೆಟ್ಟಿ ಅನುಪಮ, ಶೋಭಾ ಇದ್ದರು.

Leave a Reply

Your email address will not be published. Required fields are marked *