ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿ ಗ್ರಾಮ ಪಂಚಾಯತ್ ಮಹಿಳಾ ವಿಶೇಷ ಗ್ರಾಮಸಭೆ

ಕೋಟ:ಮಹಿಳೆಯರು ಪ್ರಸ್ತುತ ದಿನಗಳಲ್ಲಿ ಕಾನೂನಿನ ಬಗ್ಗೆ ಸಮಗ್ರ ಅಧ್ಯಯನ ಮಾಡಬೇಕು ಆ ಮೂಲಕ ಈ ಸಮಾಜದಲ್ಲಿ ಮಂಚೂಣಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕೌನ್ಸಿಲರ್ ಬಾನುಮತಿ ಹೇಳಿದರು. ಗುರುವಾರ ಕೋಡಿ ಶಾಲೆಯ ಸಭಾಂಗಣದಲ್ಲಿ ಕೋಡಿ ಗ್ರಾಮ ಪಂಚಾಯತ್‌ನ ವಿಶೇಷ “ಮಹಿಳಾ ಗ್ರಾಮ ಸಭೆಯಲ್ಲಿ ಮಹಿಳಾ ಹಕ್ಕುಗಳು ಮತ್ತು ರಕ್ಷಣೆ, ಕಾನೂನು ಅರಿವು ಇದರ ಬಗ್ಗೆ ಮಾತನಾಡಿ ಪ್ರಸ್ತುತ ಹೆಚ್ಚಿನ ಪ್ರಕರಣಗಳಲ್ಲಿ ಮಹಿಳೆಯರೆ ಮೊಸಹೋಗುತ್ತಿರುವುದನ್ನು ಕಾಣುತ್ತಿದ್ದೇವೆ ಇದಕ್ಕೆ ಕಾರಣ ಅವರಿಗೆ ಕಾನೂನಿನ ಬಗ್ಗೆ ಅರಿವು ಇಲ್ಲದಿರುವುದೇ ಮುಖ್ಯವಾಗಿದೆ. ವರದಕ್ಷಿಣೆ ಪಿಡುಗು,ಲೈಂಗಿಕ ಕಿರುಕುಳ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ, ಸ್ವಾವಲಂಬಿಯಾಗಿ ಬದುಕು ಕಾಣುವಂತ್ತಾಗಲು ಅವಳು ಹೊರ ಜಗತ್ತಿನ ಅರಿವು ಅಗತ್ಯ,ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮಹಿಳೆ ಮಕ್ಕಳ ಬಗ್ಗೆ ಜಾಗೃತಿ ಅಗತ್ಯವಾಗಿ ಮನಗಾಣಬೇಕು ಎಂದರು.

ಸಭೆಯಲ್ಲಿ ಸಿಸಿ ಕ್ಯಾಮರ ಸದ್ದು ಮಹಿಳಾ ಗ್ರಾಮಸಭೆಯಲ್ಲಿ ಸಾಸ್ತಾನದ ಮೂಲಕ ಕೋಡಿ ಸೇತುವೆಯಲ್ಲಿ ತ್ಯಾಜ್ಯ ಎಸೆಯುವವರ ಕಣ್ಗಾವಲಿಗೆ ಪಂಚಾಯತ್ ಸಿಸಿ ಕ್ಯಾಮರ ಅಳವಡಿಸಿದ್ದು ಅದು ತ್ಯಾಜ್ಯ ಎಸೆಯುವವರಿಗೆ ಮಾತ್ರವಲ್ಲದೆ ಪಂಚಾಯತ್ ವ್ಯಾಪ್ತಿಯ ಮಹಿಳೆಯರು ಅದೇ ರಸ್ತೆ ಮೂಲಕ ಸಂಚರಿಸುವಾಗ ರಕ್ಷಣೆಗೂ ಪೂರಕವಾಗಿದೆ ಇದರಿಂದ ಧೈರ್ಯದಿಂದ ಆ ರಸ್ತೆಯಲ್ಲಿ ಸಂಚರಿಸುವoತ್ತಾಗಿದೆ ಎಂದು ಪಂಚಾಯತ್ ಕಾರ್ಯವೈಕರಿಗೆ ಶಹಬಾಷ್ ನೀಡಿದರು.

ಆರೋಗ್ಯದ ಕುರಿತು ಕೋಡಿ ಬೇಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಮಾ ಶುಕುರ್ ಸಮಗ್ರ ಮಾಹಿತಿ ನೀಡಿದರು. ಮಹಿಳಾ ಹಕ್ಕುಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ತಿಲೋತ್ತಮೆ ನಾಯಕ್ ಮಾಹಿತಿ ನೀಡಿದರು. ಗ್ರಾಮಸಭೆಯ ನೋಡೆಲ್ ಅಧಿಕಾರಿಯಾಗಿ ಪಂಚಾಯತ್ ಆಡಳಿತಾಧಿಕಾರಿ ಅನುಷಾ ಭಟ್ ಭಾಗವಹಿಸಿದ್ದರು. ಸಭೆಯ ಮೊದಲ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸಭೆಯಲ್ಲಿ ಬಹುಮಾನ ವಿತರಿಸಲಾಯಿತು.

ಸರ್ಕಾರದ ವಿವಿಧ ಸವಲತ್ತುಗಳು. ಮಹಿಳೆಯರ ಸುರಕ್ಷತೆ, ಸಬಲೀಕರಣ ಹಾಗೂ ಶಾಸನಬದ್ಧ ಹಕ್ಕುಗಳ ಜಾಗೃತಿ, ಉದ್ಯೋಗ ಮತ್ತು ಆರ್ಥಿಕ ಯೋಜನೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಹಿಳೆಯರಿಗಾಗಿ ಇರುವ ಉದ್ಯೋಗ ಮತ್ತು ಆರ್ಥಿಕ ಯೋಜನೆಗಳ ಮಾಹಿತಿ, ಆರೋಗ್ಯ ಮತ್ತು ಕಲ್ಯಾಣ ಆರೋಗ್ಯ, ಸ್ವಚ್ಛತೆ ಹಾಗೂ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡರು.

ಸಭೆಯಲ್ಲಿ ಕೋಡಿ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ಖಾರ್ವಿ, ಸಂಜೀವಿ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಪ್ರಾಥಮಿಕ ಶಾಲಾಮುಖ್ಯ ಶಿಕ್ಷಕಿ ಸಂಪಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ನಿರ್ವಹಿಸಿದರು. ಸಂಜೀವಿನಿ ಒಕ್ಕೂಟದ ಎಂಬಿಕೆ ಅನಿತಾ ವಂದಿಸಿದರು. ಕೋಡಿ ಶಾಲೆಯ ಸಭಾಂಗಣದಲ್ಲಿ ಕೋಡಿ ಗ್ರಾಮ ಪಂಚಾಯತ್‌ನ ವಿಶೇಷ “ಮಹಿಳಾ ಗ್ರಾಮ ಸಭೆಯಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ತಿಲೋತ್ತಮೆ ನಾಯಕ್ ಮಾಹಿತಿ ನೀಡಿದರು.

ನೋಡೆಲ್ ಅಧಿಕಾರಿಯಾಗಿ ಪಂಚಾಯತ್ ಆಡಳಿತಾಧಿಕಾರಿ ಅನುಷಾ ಭಟ್,ಕೋಡಿ ಬೇಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಮಾ ಶುಕುರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಇದ್ದರು.

Leave a Reply

Your email address will not be published. Required fields are marked *