ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾರ್ತಟ್ಟು ಚಿತ್ರಪಾಡಿ-ಶಿವರಾತ್ರಿ ಟ್ರೋಫಿ 2026 ಕ್ರಿಕೆಟ್ ಪಂದ್ಯಾಟ

ಕೋಟ: ಶರಧಿ ಪ್ರೆಂಡ್ಸ್ ಕ್ರಿಕೆಟರ್ಸ್ ಎಚ್.ಬಿ ಪ್ರೆಂಡ್ಸ್ ಕ್ರಿಕೆಟರ್ಸ್ ಇವರ ಸಂಯೋಜನೆಯಲ್ಲಿ ಕಾರ್ತಟ್ಟು ಚಿತ್ರಪಾಡಿಯ ಹುಣ್ಸೆಬೆಟ್ಟು ಗಿರಿಯಮ್ಮ ಕ್ರಿಕೆಟ್ ಮೈದಾನದಲ್ಲಿ ಶರಧಿ ಪ್ರೆಂಡ್ಸ್ ಹಾಗೂ ಎಚ್.ಬಿ ಪ್ರೆಂಡ್ಸ್ ಸದಸ್ಯರಿಗಾಗಿ ಶಿವರಾತ್ರಿ ಟ್ರೋಫಿ 2026 ಕ್ರಿಕೆಟ್ ಪಂದ್ಯಾಟ ಇತ್ತೀಚಿಗೆ ಜರಗಿತು.

ನಿವೃತ್ತ ಪಶುವೈದ್ಯಾಧಿಕಾರಿ ಡಾ. ಮೋಹನ್.ಎಸ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಂ.ಕಾಒ. ಪದವಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ತೃತಿಯ ರ‍್ಯಾಂಕ್‌ನೊoದಿಗೆ ತೇರ್ಗಡೆಯಾದ ರಶ್ಮಿತಾ ಸಿ.ಆರ್ ಇವರಿಗೆ ಗೌರವ ಅಭಿನಂದನೆಯನ್ನು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸ್ಥಳೀಯ  ವಿದ್ಯಾರ್ಥಿಗಳಾದ ಸೌಮ್ಯ, ಕಿಶನ್, ಅಮೂಲ್ಯ, ಚಿರಂತನ್ ಭಟ್, ಅನ್ವಿತ್ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

1980-1990 ದಶಕದಲ್ಲಿ ಶರಧಿ ಹಾಗೂ ಎಚ್.ಬಿ ಪ್ರೆಂಡ್ಸ್ ತಂಡಗಳ ಪರವಾಗಿ ಆಡಿದ ಕರಾವಳಿ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಸಾಧನೆತೋರಿದ ಹಿರಿಯ ಕ್ರಿಕೆಟಿಗರಾದ ಕೃಷ್ಣದೇವಾಡಿಗ, ಗಿರೀಶ್ ಕುಂದರ್ , ಸೂರ್ಯ ಆಚಾರ್ , ನರಸಿಂಹ ಆಚಾರ್, ಗಣೇಶ್ ಆಚಾರ್, ಮುರುಳಿಧರ್ ಆಚಾರ್, ರಘು ಮಡಿವಾಳ, ನಾಗೇಶ್ ಪೂಜಾರಿ ಹಾಗೂ ಸ್ಥಳೀಯ ಕ್ರಿಕೆಟ್  ಪ್ರೋತ್ಸಾಹಕ ರಾಮಕೃಷ್ಣ ಆಚಾರ್, ಮಹಾಬಲ ಮಡಿವಾಳ, ಶರತ್ ಶೆಟ್ಟಿ, ಗೋಪಾಲ ಮಡಿವಾಳ ಅವರನ್ನು ಗೌರವಿಸಲಾಯಿತು.

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಸದಸ್ಯರಾದ ಶ್ಯಾಮಸುಂದರ ನಾಯರಿ ಪಂದ್ಯಾಟದಲ್ಲಿ ಅಳವಡಿಸಿದ  ವಿಶೇಷ ಕಾರ್ಯಗಳನ್ನು ಗುರುತಿಸಿ ಮೆಚ್ಚುಗೆಯ  ನುಡಿಗಳೊಂದಿಗೆ ಶುಭಹಾರೈಸಿದರು. ಸಾಲಿಗ್ರಾಮ ಪಟ್ಟಣಪಂಚಾಯತ್‌ನ ಮಾಜಿ ಸದಸ್ಯ ಬೋಜ ಪೂಜಾರಿ, ಮಹಾಬಲ ಮಡಿವಾಳ, ಇಲೆವೆನ್ ಅಪ್ ಕ್ರಿಕೆಟರ್ಸ್ನ ಹಿರಿಯ ಸದಸ್ಯರಾದ ಸೀತಾರಾಮ ಆಚಾರ್, ಶಶಿಧರ ಆಚಾರ್, ಶ್ರೀರಾಮ್ ಟ್ರಾನ್ಸ್ಪೋರ್ಟ್ ಪೈನಾನ್ಸ್ ಕಂಪನಿ ಕುಂದಾಪುರ ಇದರ ವ್ಯವಸ್ಥಾಪಕ ರಘು ಮಡಿವಾಳ, ನರಸಿಂಹ ಆಚಾರ್ ಕಾರ್ತಟ್ಟು , ರಾಮಕೃಷ್ಣ ಆಚಾರ್ ಕಾರ್ತಟ್ಟು  ಉಪಸ್ಥಿತರಿದ್ದರು. ಸಂಘಟಕ ಮಂಜುನಾಥ್ ಆಚಾರ್ ಕಾರ್ತಟ್ಟು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

ಶರಧಿ ಪ್ರೆಂಡ್ಸ್ ಕ್ರಿಕೆಟರ್ಸ್ ಎಚ್.ಬಿ ಪ್ರೆಂಡ್ಸ್ ಕ್ರಿಕೆಟರ್ಸ್ ಇವರ ಸಂಯೋಜನೆಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ಸಮಾರಂಭದಲ್ಲಿ ಎಚ್.ಬಿ ಪ್ರೆಂಡ್ಸ್ ತಂಡಗಳ ಪರವಾಗಿ ಆಡಿದ ಕರಾವಳಿ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಸಾಧನೆ ತೋರಿದ ಹಿರಿಯ ಕ್ರಿಕೆಟಿಗರಾದ ಕೃಷ್ಣದೇವಾಡಿಗ, ಗಿರೀಶ್ ಕುಂದರ್ , ಸೂರ್ಯ ಆಚಾರ್ , ನರಸಿಂಹ ಆಚಾರ್, ಗಣೇಶ್ ಆಚಾರ್, ಮುರುಳಿಧರ್ ಆಚಾರ್, ರಘು ಮಡಿವಾಳ ಇವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *