ಕೋಟ: ಇಲ್ಲಿನ ಹಿರಿಯ ನಾಗರಿಕರ ವೇದಿಕೆ ಕೋಟ ಗಿಳಿಯರು ಇದರ ಮಾಸಿಕ ಸಭೆ ಗಿಳಿಯಾರಿನ ಅಲ್ಸೆಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಡಿ. 28 ರಂದು ಜರುಗಿತು.
ವೇದಿಕೆಯ ಸದಸ್ಯತ್ವ ಸ್ವೀಕರಿಸಿದ ಸ್ಥಳೀಯರಾದ ಬಸವ ಕುಲಾಲ್,ಸುರೇಶ ದೇವಾಡಿಗ., ವಾಸುದೇವ ಹೇರ್ಳೆಯವರನ್ನು ಅಧ್ಯಕ್ಷರು ಶಾಲು ಹೊದಿಸಿ ಪುಷ್ಪ ನೀಡಿ ಗೌರವಿಸಿದರು. ವೇದಿಕೆಯ ಅಧ್ಯಕ್ಷ ಹಂದಕುoದ ಸೋಮಶೇಖರ ಶೆಟ್ಟಿ ಗಿಳಿಯಾರು ಅಧ್ಯಕ್ಷತೆ ವಹಿಸಿದ್ದರು.
ತಿಂಗಳಲ್ಲಿ ಜನ್ಮದಿನ ಆಚರಿಸಿಕೊಂಡ ವೇದಿಕೆ ಕಾರ್ಯದರ್ಶಿ ಶಂಕರ ಆಚಾರ್, ವಿಜಯ್ ಬ್ಯಾಂಕ್ ನಿವೃತ್ತ ಉದ್ಯೋಗಿ ವಿಶ್ವನಾಥ ಜೋಗಿಯವರನ್ನು ಉಪಾಧ್ಯಕ್ಷ ಮಹಾಬಲ ಹೆರ್ಳೇಯವರು ಗೌರವಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಹಿರಿಯ ಸಾಹಿತಿ ನಿವತ್ತ ಕನ್ನಡ ಪ್ರಾದ್ಯಪಕ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ನಮ್ಮ ಸಂಸ್ಕಾರ, ಸಂಸ್ಕೃತಿ ಬಗ್ಗೆ ಸಭೆಯಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸೋಮಯಾಜಿಯವರನ್ನು ಅಭಿನಂದಿಸಲಾಯಿತು.
ಗೌರವಾಧ್ಯಕ್ಷ ಕೆ.ರಾಜಾರಾಮ್ ಶೆಟ್ಟಿ ಸದಸ್ಯರಾದ ಕೃಷ್ಣಯ್ಯ ಆಚಾರ್, ಗಂಗಾಧರ ಐತಾಳ್ ಸಲಹೆ ಸೂಚನೆ ನೀಡಿದರು. ಅಧ್ಯಕ್ಷರದ ಸೋಮಶೇಖರ್ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಶಂಕರ ಆಚಾರ್ ವಂದಿಸಿದರು.
ಗಿಳಿಯಾರಿನ ಅಲ್ಸೆಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಿರಿಯ ನಾಗರಿಕರ ವೇದಿಕೆ ಕೋಟ ಗಿಳಿಯರು ಇದರ ಮಾಸಿಕ ಸಭೆಯಲ್ಲಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರನ್ನು ಅಭಿನಂದಿಸಲಾಯಿತು. ವೇದಿಕೆಯ ಅಧ್ಯಕ್ಷ ಹಂದಕುAದ ಸೋಮಶೇಖರ ಶೆಟ್ಟಿ ಗಿಳಿಯಾರು ,ಗೌರವಾಧ್ಯಕ್ಷ ಕೆ.ರಾಜಾರಾಮ್ ಶೆಟ್ಟಿ ಸದಸ್ಯರಾದ ಕೃಷ್ಣಯ್ಯ ಆಚಾರ್, ಗಂಗಾಧರ ಐತಾಳ್ ಇದ್ದರು.













Leave a Reply