ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶಯದೇವಿಸುತೆ ಮರವಂತೆಯವರ ಮುಡಿಗೇರಿದ ಅಂತರಾಷ್ಟ್ರೀಯ ಗೌರವ ಡಾಕ್ಟರೇಟ್ ಪದವಿ

ವಿವಿಧ ಹಲವಾರು ಕ್ಷೇತ್ರದಲ್ಲಿನ ಗಣನೀಯ ಸಾಧನೆಯನ್ನು ವಿಶೇಷ ಮಾನದಂಡದ ಆಧಾರದ ಮೇಲೆ ಪರಿಗಣಿಸಿ ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್‌ಸ್ವರೂಪ್) ಅವರಿಗೆ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾದ  ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ಮಹೋನ್ನತ ಗೌರವ ಡಾಕ್ಟರೇಟ್ ಪದವಿಯನ್ನು ಇತ್ತೀಚೆಗಷ್ಟೇ ಮಾರ್ಚ್-01ರಂದು ನವದೆಹಲಿಯಲ್ಲಿ ನೀಡಿ ಗೌರವಿಸಿ ಪುರಸ್ಕರಿಸಿತು.

ಈ ಸಂದರ್ಭದಲ್ಲಿ, ನವದೆಹಲಿಯ ಕಲ್ರಾ ಹಾಸ್ಪಿಟಲ್‌ನ ಸಿಇಓ ಮತ್ತು ಗ್ರೂಪ್ ಮೆಡಿಕಲ್ ಡೈರೆಕ್ಟರ್ ಆದಂತಹ ಡಾ. ಆರ್.ಎನ್. ಕಲ್ರಾ ಮತ್ತು, ಕೇಂದ್ರ ಸರ್ಕಾರದ ಪ್ರಾವಿಡೆಂಟ್ ಫಂಡ್ ಕಮಿಷನರ್ ಹೆಚ್‌ಕ್ಯೂ ಕರಾಯತಿ ಲಾಲ್ ಗೋಯಲ್ ಮತ್ತು, ಐಲ್ಯಾಂಡ್ ಇಂಟರ್‌ನ್ಯಾಷನಲ್ ಡೆಲಿಗೇಟ್ ಡಾ. ಮುರೆಲ್ ರಾಬರ್ಟ್ಸ್, ಎಂಬಸ್ಸಿ ಆಫ್ ಸ್ಟೇಟ್ ಫೆಲೆಸ್ಟೈನ್‌ನ ಮತ್ತು ಕೌನ್ಸೆಲರ್ ಬೆಸೆಮ್ ಎಫ್. ಹೆಲ್ಲಿಸ್, ರಾಬರ್ಟ್ ಆಸ್ಟ್ರೇಲಿಯಾ ಹಾಗೂ ಮ್ಯಾಥ್ಯೂ ಇಂಡೋನೇಷ್ಯಾ, ಜಾರ್ಜ್ ಅಮೇರಿಕಾ, ಗಾನಾ ಹೈ ಕಮಿಷನ್ ಚಾರ್ಜ್ ಆಫ್ ದಿ ಅಫರ‍್ಸ್ ಆಗಿರುವ ಲೂಯಿಸ್ ಕ್ವಾಮೆ ಓಬೆಂಗ್, ಶಹೀದ್ ಭಗತ್‌ಸಿಂಗ್ ಸೇವಾದಳ ಸ್ಥಾಪಕ ನಿರ್ದೇಶಕ ಜೀತೆಂದರ್ ಸಿಂಗ್ ಶಂಟಿ, ಬಿಪಿಟಿ ಗ್ರೂಫ್ ಆಫ್ ಕಂಪೆನೀಸ್ ಮತ್ತು ಬಿಲ್ಡಿಂಗ್ ಪ್ರೊಟೆಕ್ಟಿವ್ ಟೆಕ್ನಾಲಜಿಸ್ ಸಿಇಓ ಮತ್ತು ಸ್ಥಾಪಕ ನಿರ್ದೇಶಕ ಡಾ. ಬಾಲಾಜಿ ಸಿಂಗ್ ಬಿ.ಎಮ್, ವಾಷಿಂಗ್ಟನ್ ಡಿಜಿಟಲ್ ಯೂನಿವರ್ಸಿಟಿಯ ಗೌರವ ಅಕಾಡೆಮಿಕ್ ಅಡ್ವೆಸರ್ ಡಾ. ರಾಂಧಿಮಾ ಪಾತಿರಾಘೆ, ಮಹಾರಾಷ್ಟ್ರ ಸೀನಿಯರ್ ಪೊಲೀಸ್ ಆಫೀಸರ್ ಸುಖ್‌ದೇವ್ ಪಾಟೀಲ್, ವಾರಣಾಸಿ ವಜ್ರವಿದ್ಯಾ ಇನ್ಸ್ಟಿಟ್ಯೂಟ್ ಪ್ರಿನ್ಸಿಪಾಲ್ ಸೋನಮ್ ಯೋನ್‌ದೆನ್, ಫೆಬೋಲಂಡನ್ ಚೀಫ್ ಕೋಆರ್ಡಿನೇಟರ್ ರಾಮ್‌ದಾಸ್ ಅತ್ವಾಲೆ ಎಫ್.ಓ, ಗವರ್ನ್‌ಮೆಂಟ್ ಆಫ್ ಇಂಡಿಯಾದ ಸೋಷಿಯಲ್ ಜಸ್ಟಿಸ್ ಸೆಂಟ್ರಲ್ ಮಿನಿಸ್ಟರ್ ಡಾ. ಪ್ರದೀಪ್ ಜಗ್‌ತಪ್, ವೆಸ್ಟ್ ಪ್ರೋ ವಿನ್ಸ್‌ ನ ಬೋರ್ಡ್ ಆಫ್ ಡೈರೆಕ್ಟರ್ ಹಾಗೂ ಶ್ರೀಲಂಕಾದ ಗ್ಲೋಬಲ್ ಟೂರಿಸಮ್ ಕೌನ್ಸಿಲ್‌ನ ಚೇರ್‌ಮ್ಯಾನ್ ಡಾ. ಹೆಚ್.ಇ.ಎಮ್.ಎನ್ ಸರ್ದಾರ್ ಅಲಿ ಹಾಗೂ ಮತ್ತಿತ್ತರರು ಹಾಜರಿದ್ದರು.

ಕಲಾರಾಧಕರು; ಕಲಾ ಪೋಷಕರೂ ಆದ ಶಯದೇವಿಸುತೆ ಮರವಂತೆಯವರು ಆಧ್ಯಾತ್ಮಿಕ ಚಿಂತಕರಾಗಿ, ಸಂಗೀತ-ಸಾಹಿತ್ಯ ಕಲಾ ಲೋಕದಲ್ಲಿ, ಯಕ್ಷಗಾನ ಕ್ಷೇತ್ರದಲ್ಲಿ, ಪತ್ರಿಕೋದ್ಯಮ ಹಾಗೂ ಹಲವಾರು ಮಾಧ್ಯಮ ರಂಗ – ಹೀಗೆಯೇ, ಹಲವಾರು ವಿವಿಧ ಕ್ಷೇತ್ರದಲ್ಲಿ ಬಿಂಬಿಸಿದ ಇವರಲ್ಲಿ ಹುದುಗಿರುವ ಅಪಾರ ಕಲಾಪ್ರತಿಭೆಯ ನಿರಂತರ ಸೇವೆಗೆ, “ಸೃಜನಶೀಲ ಯುವ ಪ್ರತಿಭಾನ್ವಿತ ಲೇಖಕಿ”, “ವರ್ಷದ ಕನ್ನಡ ಬರಹಗಾರ ಪ್ರಶಸ್ತಿ”, “ರಂಗಸ್ಥಳ ರತ್ನ ಪ್ರಶಸ್ತಿ”, “ಕುಂದಶ್ರೀ ಪ್ರಶಸ್ತಿ”, “ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ್”, “ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ”,  “ಡಾ!! ಜಿ.ಡಿ. ಜೋಶೀ ಗೌರವ ಪ್ರಶಸ್ತಿ”, “ಅತ್ಯುತ್ತಮ ಲೇಖಕಿ”, “ಅತ್ಯುತ್ತಮ ಅಂಕಣಕಾರ್ತಿ”, “ಅತ್ಯುತ್ತಮ ವರದಿಗಾರ್ತಿ”, “ಅತ್ಯುತ್ತಮ ಚಿತ್ರಕಥೆಗಾರ್ತಿ”, “ಅಕ್ಕಮಹಾದೇವಿ ಪ್ರಶಸ್ತಿ”, “ಹುಟ್ಟೂರ ಸಾಧಕ ಸಂಮ್ಮಾನ ಪ್ರಶಸ್ತಿ” ಹಾಗೂ, “ಮರವಂತೆಯ ಮಹಿಳಾ ಸಾಧಕಿ ಪ್ರಶಸ್ತಿ” , “ಸ್ಟೇಟ್ ಲೆವೆಲ್ ಅವಾರ್ಡ್”, “ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2023”, “ಕರುನಾಡ ಕಲಾ ಕೇಸರಿ; ಸಾಹಿತ್ಯ ರತ್ನ ಸಿರಿ”, “ರಾಷ್ಟ್ರಕವಿ ಕುವೆಂಪು ಸಾಂಸ್ಕೃತಿಕ ಚೇತನ ಪ್ರಶಸ್ತಿ”  – ಎಂದೆಲ್ಲಾ ಹಲವೆಡೆ ಈಗಾಗಲೇ ಲಭಿಸಿರುವ ಸಾಕಷ್ಟು ಹಲವಾರು ಪ್ರಶಸ್ತಿ-ಪುರಸ್ಕಾರ; ಅಭಿನಂದನಾ-ಗೌರವ-ಸನ್ಮಾನ ಮನ್ನಣೆಗಳೆಲ್ಲಾ ಇವರ ಸ್ವಂತ ಪ್ರತಿಭೆಗೆ ಎಲ್ಲೆಡೆ ಸಿಕ್ಕಂತಹ ಪ್ರತ್ಯಕ್ಷ ಸಾಕ್ಷಿಗಳಾಗಿವೆ!

Leave a Reply

Your email address will not be published. Required fields are marked *