“ಜ್ಞಾನ ಮತ್ತು ಕಲೆಯ ಪ್ರತೀಕವೇ ಸರಸ್ವತಿ ದೇವಿ “
ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು ನಲ್ಲಿ 2024-25ರ ಶೈಕ್ಷಣಿಕ ವರ್ಷವನ್ನು ಸರಸ್ವತಿ ಪೂಜೆ ಮಾಡುವ ಮೂಲಕ ಪ್ರಾರಂಭಿ ಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಶಾಲೆಯ ಸಂಚಾಲಕರಾದ ಶ್ರೀ ರಾಜರಾಮ್ ಶೆಟ್ಟಿ ರವರು ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿ ಕೊಂಡು ಕಾರ್ಯಕ್ರಮ ವನ್ನು ದೀಪ ಬೆಳಗಿಸಿ, “ಜ್ಞಾನ ಮತ್ತು ಕಲೆಯ ಪ್ರತೀಕ ಸರಸ್ವತಿ ದೇವಿ”, ಈ ಸರಸ್ವತಿ ದೇವಿಯು ಎಲ್ಲರಿಗೂ ವಿದ್ಯಾ ಬುದ್ಧಿ ನೀಡಲಿ ಎಂದು ಶುಭ ಹಾರೈಸಿದರು , ನೇಶನಲ್ ಕೈಗಾರಿಕಾ ತರಭೇತಿ ಸಂಸ್ಥೆ ಹೇರಾಡಿ -ಬಾರಕೂರು ಇದರ ಸಂಚಾಲಕರಾದ ಶ್ರೀ ರಾಮಚಂದ್ರ ಕಾಮತ್, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲಿಖಿತಾ ಕೊಠಾರಿ ಮತ್ತು ಶಾಲೆಯ ಶಿಕ್ಷಕ -ಶಿಕ್ಷಕೇತರರು ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿ ಗಳು ವಿದ್ಯಾ ದೇವತೆ ಸರಸ್ವತಿ ಯನ್ನು ಭಜನೆ ಯ ಮೂಲಕ ಪ್ರಾರ್ಥಿಸಿದ್ದರು. ಶಾಲೆ ಗೆ ಹೊಸದಾಗಿ ಸೇರಿದ ವಿದ್ಯಾರ್ಥಿ ಗಳಿಗೆ ಪುಷ್ಪ ನೀಡಿ,ಪ್ರೀತಿಯಿಂದ ಸ್ವಾಗತಿಸಿ ಕೊಳ್ಳಲಾಯಿತು..
ಸರಸ್ವತಿ ಪೂಜೆಯಲ್ಲಿ ಅರ್ಚಕರಾಗಿ ಶಾಲಾ ವಿದ್ಯಾರ್ಥಿ ಅಭಿನವ ಉಡುಪ ಮತ್ತು ಸರಸ್ವತಿ ಪೂಜೆಯ ಕಾರ್ಯ ಸಂಯೋಜನೆ ಯಲ್ಲಿ ಶಾಲೆಯ ಎಲ್ಲಾ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು. ಎಲ್ಲಾ ವಿದ್ಯಾರ್ಥಿ ಗಳಿಗೆ ಪೂಜೆಯ ಪ್ರಸಾದ ವಿತರಿಸಲಾಯಿತು .











Leave a Reply