ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಡಾ. ಕೃಷ್ಣ ಕಾಂಚನ್ ಆಯ್ಕೆ

ಕೋಟ; ಕೋಟ ಸಹಕಾರಿ ವ್ಯವಸಾಯಕ ಸಂಘ ನಿ. ಕೋಟ, ಇದರ 2024-2025ನೇ ಸಾಲಿನ ಆಡಳಿತ ಮಂಡಳಿಯಲ್ಲಿ ತೆರವಾದ ಅಧ್ಯಕ್ಷ ಹುದ್ದೆಯ ಆಯ್ಕೆ ಸಂಬAಧ ದಿನಾಂಕ 27.04.2024ರಂದು ಸಂಘದ ಚುನಾವಣಾ ನಿರ್ವಾಚನಾಧಿಕಾರಿ ಶ್ರೀ ಕೆ. ಆರ್. ರೋಹಿತ್ ಇವರ ಅಧ್ಯಕ್ಷತೆಯಲ್ಲಿ ಚುನಾಯಿತ ಆಡಳಿತ ಸದಸ್ಯರ ಸಭೆ ಜರಗಿತು.

ಈ ಸಭೆಯಲ್ಲಿ ಡಾ. ಕೃಷ್ಣ ಕಾಂಚನ್ ಇವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭ ಸಂಘದ ನಿರ್ಗಮಿತ ಅಧ್ಯಕ್ಷ  ಜಿ. ತಿಮ್ಮ ಪೂಜಾರಿ, ಉಪಾಧ್ಯಕ್ಷ ಜಿ. ರಾಜೀವ ದೇವಾಡಿಗ, ನಿರ್ದೇಶಕರಾದ  ಟಿ. ಮಂಜುನಾಥ,  ಕೆ. ಉದಯ ಕುಮಾರ ಶೆಟ್ಟಿ, ರವೀಂದ್ರ ಕಾಮತ್,  ರಾಜೇಶ ಉಪಾಧ್ಯ,  ಎಚ್. ನಾಗರಾಜ ಹಂದೆ,  ಮಹೇಶ ಶೆಟ್ಟಿ,  ರಂಜಿತ್ ಕುಮಾರ,  ಗೀತಾ ಶಂಭು ಪೂಜಾರಿ,  ಪ್ರೇಮಾ ಎಸ್.,  ರಶ್ಮಿತಾ, ಭಾಸ್ಕರ ಶೆಟ್ಟಿ, ಶ್ರೀಕಾಂತ ಶೆಣೈ,  ಅಚ್ಯುತ ಪೂಜಾರಿ, ಸಂಘದ ಮಾಜಿ ಅಧ್ಯಕ್ಷರಾದ ಭೋಜ ಹೆಗ್ಡೆ, ಸುಬ್ರಾಯ ಉರಾಳ,  ಸುಕೇಶ ಹೇರ್ಳೆ, ಸಂಜೀವ ದೇವಾಡಿಗ, ಶಂಕರ ಕುಂದರ್, ಸಂಘದ ಗಣ್ಯ ಗ್ರಾಹಕರು ಮತ್ತು ಹಿತೈಷಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಕೃಷ್ಣ ಕಾಂಚನ್ ಇವರಿಗೆ ಶುಭ ಹಾರೈಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.  ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಡಾ. ಕೃಷ್ಣ ಕಾಂಚನ್ ಆಯ್ಕೆ.

Leave a Reply

Your email address will not be published. Required fields are marked *