ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿವೇಕ ಪದವಿಪೂರ್ವ ಕಾಲೇಜು ಕೋಟ ಇದರ ಪ್ರೌಢಶಾಲಾ ವಿಭಾಗದ ವತಿಯಿಂದ ಮತದಾನ ಸಾಕ್ಷರತಾ ಕಾರ್ಯಕ್ರಮ

ಕೋಟ: ವಿವೇಕ ಪದವಿಪೂರ್ವ ಕಾಲೇಜು ಕೋಟ ಇದರ ಪ್ರೌಢಶಾಲಾ ವಿಭಾಗದ ವತಿಯಿಂದ ಮತದಾನ ಸಾಕ್ಷರತಾ ಸಂಘದ ಮೂಲಕ ಮಕ್ಕಳಿಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ಇತ್ತೀಚಿಗೆ ಏರ್ಪಡಿಸಲಾಯಿತು.
ಹಿರಿಯ ಸಹಶಿಕ್ಷಕರಾದ ವೆಂಕಟೇಶ ಉಡುಪ ಇವರು ಮತದಾನದ ಜಾಗೃತಿಯ ಅವಶ್ಯಕತೆ ಕುರಿತು ಮಾಹಿತಿಯನ್ನು ನೀಡಿದರು. ಮತದಾನ ಸಾಕ್ಷರತಾ ಸಂಘದ ನೋಡಲ್ ಆಫೀಸರ್ ಆಗಿರುವ ಶಿಕ್ಷಕಿ ರತಿ  ಇವರಿಂದ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ನಂತರ  ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿಯ ಬಗ್ಗೆ ಕಿರು ನಾಟಕವನ್ನು ವಿಕ್ಷೀಸಲು ಅವಕಾಶ ಕಲ್ಪಿಸಲಾಯಿತು. ವಿದ್ಯಾರ್ಥಿಗಳ ಮೂಲಕ ಮತದಾನದ ಕುರಿತು ಪೋಸ್ಟರ್‌ಗಳನ್ನು ಬಳಸಿ ಜಾಥಾ ಏರ್ಪಡಿಸಲಾಯಿತು. 
ಮನೆಯಲ್ಲಿ ವಿದ್ಯಾರ್ಥಿಗಳು ಮತದಾನದ ಜಾಗೃತಿಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ಪೋಷಕರಿಂದ ಪ್ರತಿಜ್ಞಾ ವಿಧಿ ಸ್ವೀಕರಿಸುವಂತೆ ಸಲಹೆ ನೀಡಿದ್ದಲ್ಲದೆವಿದ್ಯಾರ್ಥಿಗಳ ಮನೆಗೆ ಮತದಾನ ಜಾಗೃತಿ ವೀಡಿಯೋವನ್ನು ಕಳುಹಿಸಿ ಪ್ರತೀ ಪೋಷಕರಲ್ಲಿ ಮತದಾನ ಜಾಗೃತಿಯನ್ನು ಉಂಟು ಮಾಡುವಂತೆ ಮಾಡಲಾಯಿತು. ವಿವೇಕ ಪದವಿಪೂರ್ವ ಕಾಲೇಜು ಕೋಟ ಇದರ ಪ್ರೌಢಶಾಲಾ ವಿಭಾಗದ ವತಿಯಿಂದ ಮತದಾನ ಸಾಕ್ಷರತಾ ಕಾರ್ಯಕ್ರಮ ಇತ್ತೀಚಿಗೆ ಜರಗಿತು.

Leave a Reply

Your email address will not be published. Required fields are marked *