ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಇಂಡಿಕಾ ಕಲಾ ಬಳಗ ಮಣೂರು ಪಡುಕರೆ ಕೋಟ ನೇತೃತ್ವದಲ್ಲಿ
ಚಿರಣ್ಣರಿಗಾಗಿ ಬೇಸಿಗೆ ಶಿಬಿರ ಆಯೋಜನೆ

ಕೋಟ: ಇಂಡಿಕಾ ಕಲಾ ಬಳಗ ಮಣೂರು ಪಡುಕರೆ ಕೋಟ ,ಕೋಟ ಗ್ರಾಮಪಂಚಾಯತ್, ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಚಿತ್ತಾರ  ಚಿಣ್ಣರ ಚಿಲಿಪಿಲಿ ಮೂರು ದಿನಗಳ ಬೇಸಿಗೆ ಶಿಬಿರ ಕಾರ್ಯಕ್ರಮ ಇದೇ  ಎ.18ರಿಂದ 20ರ ತನಕ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

ಈ ಪ್ರಯುಕ್ತ ಕೋಟ ಸುತ್ತಮುತ್ತಲಿನ ಆಯ್ದ 4 ವರ್ಷದಿಂದ  7ವರ್ಷದ ವಯೋಮಿತಿಯ ಪುಟಾಣಿಗಳಿಗೆ ವಿವಿಧ ತರಹದ ಆಟ, ಮಾತುಗಾರಿಕೆ,ಚಿತ್ರ ಬಿಡಿಸುವ , ಪರಿಸರ ಕಾಳಜಿಯ ವಿನೂತ ಮಾಹಿತಿ, ಮಕ್ಕಳ ಮುಂದಿನ ಶಾಲಾ ಜೀವನಕ್ಕೆ ಬೇಕಾಗುವ ಉಪಯುಕ್ತ ಮಾಹಿತಿಗಳನ್ನು ಈ ಶಿಬಿರದಲ್ಲಿ ನೀಡಲಾಗುತ್ತದೆ ಶಿಬಿರದ ಕೊನೆಯ ದಿನ ಪ್ರಕೃತಿ ಮಾತೆಯ ಮಡಿಲ್ಲಲ್ಲಿ ನಡೆಯಲಿದೆ, ಅಲ್ಲದೆ ಡಾ.ಪ್ರಕಾಶ್ ಸಿ ತೋಳಾರ್ ಇವರಿಂದ ಸಮಾರೋಪ ಸಮಾರಂಭ ಹಾಗೂ ಮಕ್ಕಳಿಗೆ, ಪೋಷಕರಿಗೆ ಮಾಹಿತಿ ಶಿಬಿರದಲ್ಲಿ ನೀಡಲಾಗುತ್ತದೆ.

ಕಾರ್ಯಕ್ರಮವನ್ನು ಕೋಟದ ಸಮಾಜಸೇವಕ ಆನಂದ್ ಕುಂದರ್ ಉದ್ಘಾಟಿಸಿಸಲಿದ್ದು, ಅಧ್ಯಕ್ಷತೆಯನ್ನು ಕೋಟದ ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಲಿದ್ದಾರೆ. ಶಿಬಿರದ ಪ್ರಯೋಜನ ಪಡೆಯಲಿರುವವರು ಎ.15ರ ಇಳಗೆ ಈ ಫೋನ್ ನಂ 9972087156,9964136997 ಮೂಲಕ  ನೊಂದಾಯಿಸಬಹುದಾಗಿದೆ ಎಂದು ಸಂಘಟಕ ಸಂತೋಷ್ ಕುಮಾರ್ ಕೋಟ ತಿಳಿಸಿದ್ದಾರೆ.

Leave a Reply

Your email address will not be published. Required fields are marked *