ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ಣಾಟಕ ಬ್ಯಾಂಕ್ ಗ್ರಾಹಕಸ್ನೇಹಿ ಬ್ಯಾಂಕ್ ಹೆಗ್ಗಳಿಕೆ – ಎ.ಜಿ.ಎಮ್ ರಾಜಗೋಪಾಲ.ಬಿ
ಶ್ರೀ ಬಾಳೆಕುದ್ರು ಶ್ರೀಮಠಕ್ಕೆ ಕಾಣಿಕೆ ಹುಂಡಿ ಸಮರ್ಪಣೆ

ಕೋಟ: ಗ್ರಾಹಕರಿಂದ ಅಭಿವೃದ್ಧಿ ಹೊಂದಿದ ಕರ್ಣಾಟಕ  ಬ್ಯಾಂಕ್ ತನ್ನ ನೂರನೇ ವರ್ಷದ ಸುಸಂದರ್ಭದ ಸವಿ ನೆನಪಿಗಾಗಿ ಗ್ರಾಹಕರ ಸೇವೆಗಾಗಿ ತನ್ನನ್ನು ಸಮರ್ಪಿಸಿಕೊಂಡಿದೆ  ಎಂದು ಕರ್ಣಾಟಕ ಬ್ಯಾಂಕ್‌ನ ಎ.ಜಿ.ಎಮ್ ರಾಜಗೋಪಾಲ.ಬಿ ತಿಳಿಸಿದರು.

ಶುಕ್ರವಾರ ಬಾಳೆಕುದ್ರು ಶ್ರೀ ಮಠಕ್ಕೆ ಕಾಣಿಕೆ ಹುಂಡಿ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ
ಶ್ರೀ ಮಠಕ್ಕೆ ಬ್ಯಾಂಕ್ ತನ್ನ ಸೇವಾ ಭಾಗವಾಗಿ ಕಾಣಿಕೆ ಹುಂಡಿಯನ್ನು ಅರ್ಪಿಸಿದೆ,ಕರ್ಣಾಟಕ ಬ್ಯಾಂಕ್ ಸಾರ್ವಜನಿಕ ವಲಯದಲ್ಲಿ ಜನಸಾಮಾನ್ಯರಿಗೆ ವಿಶೇಷ ಸೇವೆಯನ್ನು ನೀಡುತ್ತಾ ಬಂದಿದ್ದು ಗ್ರಾಹಕಸ್ನೇಹಿ ಬ್ಯಾಂಕ್ ಆಗಿ ಹೊರಹೊಮ್ಮಿದೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಮಠದ ನೃಸಿಂಹಾಶ್ರಮ ಸ್ವಾಮಿಜೀಗಳ ಸಮ್ಮುಖದಲ್ಲಿ ಎ.ಜಿ.ಎಮ್ ರಾಜ್ ಗೋಪಾಲ್ ಇವರನ್ನು ಶಾಲು ಹೋದಿಸಿ ಗೌರವಿಸಿದರು. ಈ ವೇಳೆ ಶುದ್ಧ ಕುಡಿಯುವ ನೀರಿನ ಘಟವನ್ನೂ ಒದಗಿಸುವ ಭರವಸೆಯನ್ನು ನೀಡಿದರು.

ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಉಪಾಧ್ಯ.ಸಾಸ್ತಾನ-ಐರೋಡಿ ಶಾಖಾ ಪ್ರಭಂಧಕ ಮಂಜುನಾಥ ಶೇಟ್.ಸಿಬ್ಬಂದಿ ಪ್ರಭಾಕರ ಪೂಜಾರಿ.ಶ್ರೀ ಮಠದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜಶೇಖರ ಕಲ್ಕೂರ ,ಶ್ರೀ ಮಠದ ವ್ಯವಸ್ಥಾಪನ ಸಮಿತಿ ಸದಸ್ಯ ಪತ್ರಕರ್ತ ಪಾಮರ ಚಡಗ.ಶ್ರೀ ಮಠದ ವ್ಯವಸ್ಥಾಪಕ ಮಂಜುನಾಥ ಭಟ್ ಉಪಸ್ಥಿತರಿದ್ದರು.

ಬಾಳೆಕುದ್ರು ಶ್ರೀ ಮಠಕ್ಕೆ ಕಾಣಿಕೆ ಹುಂಡಿಯನ್ನು  ಕರ್ಣಾಟಕ ಬ್ಯಾಂಕ್‌ನ ಎ.ಜಿ.ಎಮ್ ರಾಜಗೋಪಾಲ.ಬಿ ಸಮರ್ಪಿಸಿದರು.  ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಉಪಾಧ್ಯ.ಸಾಸ್ತಾನ-ಐರೋಡಿ ಶಾಖಾ ಪ್ರಭಂಧಕ ಮಂಜುನಾಥ ಶೇಟ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *