ಕೋಟ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅತ್ಯಧಿಕ ಮತಗಳ ಅಂತರದಿAದ ಜಯಶಾಲಿಯಾಗಲೆಂದು ಕೋಟ ಅಮೃತೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆಯನ್ನು ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಹಾಗೂ ಕುಂದಾಪುರ ಮಂಡಲ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಹಮ್ಮಿಕೊಂಡಿತು. ಈ ವೇಳೆ ದೇಗುಲ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ಪ್ರಸಾದ ವಿತರಿಸಿದರು.
ದೇಗುಲದ ಪ್ರಧಾನಾರ್ಚಕ ಅರವಿಂದ ಜೋಗಿ ವಿಶೇಷವಾಗಿ ಪ್ರಾರ್ಥಿಸಿ ಶುಭಹಾರೈಸಿದರು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ ಕೊಡವೂರು, ಪ್ರಧಾನ ಕಾರ್ಯದರ್ಶಿ ರವೀಂದ್ರ ತಿಂಗಳಾಯ, ಕುಂದಾಪುರ ಮಂಡಲ ಪ್ರಮುಖರಾದ ಶಂಕರ್ ಅಂಕದಕಟ್ಟೆ, ಸುಪ್ರಸಾದ ಶೆಟ್ಟಿ, ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ, ಪ್ರದಾನಕಾರ್ಯದರ್ಶಿ ಸುಧೀರ್ ಕೆ ಎಸ್, ಉಡುಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಕುಂದಾಪುರ ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಕಾಂಚನ್, ಪ್ರಧಾನಕಾರ್ಯದರ್ಶಿ ಸುಧೀರ್ ಕದ್ರಿಕಟಟ್ಟು, ನಾಗರಾಜ್ ಆಚಾರ್,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ, ಮಹಿಳಾ ಘಟಕದ ಪ್ರಮುಖರಾದ ರೂಪ ಪೈ, ವಿದ್ಯಾ ಸಾಲಿಯಾನ್, ಸೌರಧಿ ಪೈ, ಒಬಿಸಿ ಮೋರ್ಚಾ ಪ್ರಭಾರಿ ಅರುಣ್ ಬಾಣ ಮತ್ತಿತರರು ಉಪಸ್ಥಿತರಿದ್ದರು
ಕೋಟ ಶ್ರೀನಿವಾಸ ಪೂಜಾರಿ ಅತ್ಯಧಿಕ ಮತಗಳ ಅಂತದಿAದ ಜಯಶಾಲಿಯಾಗಲು ಕುಂದಾಪುರ ಮಂಡಲ ಬಿಜೆಪಿ ಒಬಿಸಿ ಮೋರ್ಚಾದಿಂದ ಕೋಟ ಅಮೃತೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ ಕೊಡವೂರು, ಪ್ರಧಾನಕಾರ್ಯದರ್ಶಿ ರವೀಂದ್ರ ತಿಂಗಳಾಯ, ಕುAದಾಪುರ ಮಂಡಲ ಪ್ರಮುಖರಾದ ಶಂಕರ್ ಅಂಕದಕಟ್ಟೆ ಮತ್ತಿತರರು ಇದ್ದರು,











Leave a Reply