ಕೋಟ: ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಗೊಂಡರೆ ಗ್ರಾಮಗಳು ಸುಭಿಕ್ಷೆಗೊಳ್ಳುತ್ತದೆ ಎಂದು ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.
ಶುಕ್ರವಾರ ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಅಂವಾಗಿ ಹಮ್ಮಿಕೊಂಡ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಸಂಸ್ಕçತಿಯ ಮೂಲ ಪ್ರತೀಕ ದೇಗುಲಗಳು ಅದನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕಾದದ್ದು ಭಕ್ತರಾದ ನಮ್ಮ ಆದ್ಯ ಕರ್ತವ್ಯ ,ದೇಗುಲ ಅಭಿವೃದ್ಧಿಗೊಳಿಸುವುದರ ಜತೆಗೆ ದಿನಂಪ್ರತಿ ದೇಗುಲವನ್ನು ಸಂದರ್ಶಿಸಬೇಕು ಇದರಿಂದ ಮನಶಾಂತಿ ಪ್ರಾಪ್ತವಾಗುತ್ತದೆ.ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ದೇಗುಲ ಅಭಿವೃದ್ಧಿ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ದೇಗಯಲದ ಶ್ರೀ ದೇವರ ಬೆಳ್ಳಿ ಮುಖವರ್ಣಿಕೆಯನ್ನು ನೀಡಿದ ಶ್ರೀಧರ ದೇವಾಡಿಗರ ಪರವಾಗಿ ಪುತ್ರಿ ಸುನಿತಾ ಅಳಿಯ ಪ್ರಮೋದ್ ದೇವಾಡಿಗ,ಹಾಗೂ ಹಿತ್ತಾಳೆಯ ಪಾಣಿಪೀಠ ನೀಡಿದ ಶೇವಧಿ ನಾಗರಾಜ್ ಗಾಣಿಗ ಇವರುಗಳನ್ನು ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ,ಉದ್ಯಮಿಗಳಾದ ರಾಜು ಪೂಜಾರಿ ಹೋಬಳಿಮನೆ, ಸುರೇಶ್ ಕೊಡವೂರು, ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಅಧ್ಯಕ್ಷ ಎಂ ಸುಬ್ರಾಯ ಆಚಾರ್, ಕುಂದಾಪುರ ಎ.ಪಿ ಎಂ ಸಿ ನಿರ್ದೇಶಕ ಸಂಜೀವ ಪೂಜಾರಿ ವಂಡ್ಸೆ, ದೇಗುಲದ ಅಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಅರ್ಚಕ ಸುಧೀರ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು. ದೀಪಿಕಾ ಹರ್ತಟ್ಟು ಸ್ವಾಗತಿಸಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು. ದೇಗುಲದ ಕಾರ್ಯದರ್ಶಿ ಹರೀಷ್ ದೇವಾಡಿಗ ವಂದಿಸಿದರು.
ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಅಂವಾಗಿ ಹಮ್ಮಿಕೊಂಡ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೇಗಯಲದ ಶ್ರೀ ದೇವರ ಬೆಳ್ಳಿ ಮುಖವರ್ಣಿಕೆಯನ್ನು ನೀಡಿದ ಶ್ರೀಧರ ದೇವಾಡಿಗರ ಪರವಾಗಿ ಪುತ್ರಿ ಸುನಿತಾ ಅಳಿಯ ಪ್ರಮೋದ್ ದೇವಾಡಿಗ ಇವರುಗಳನ್ನು ಸನ್ಮಾನಿಸಲಾಯಿತು. ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ದೇಗುಲದ ಅಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಅರ್ಚಕ ಸುಧೀರ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.











Leave a Reply