ಕೋಟ: ಧಾರ್ಮಿಕ ಆಚರಣೆಗಳಿಂದ ಧರ್ಮ ಉಳಿಯಲು ಸಾಧ್ಯವಾಗಿದೆ ಎಂದು ವಿದ್ವಾನ್ ಪಾಂಡೇಶ್ವರ ವಿಜಯ ಮಂಜರ್ ಹೇಳಿದರು. ಮಹಾಶಿವರಾತ್ರಿ ಅಂಗವಾಗಿ ಶನಿವಾರ ಶಿವಕೃಪಾ ಯುವಕ ಮಂಡಲ ಸಾಸ್ತಾನ ಹಮ್ಮಿಕೊಂಡ ಶಿವನಾದ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನಗೈದು ಮಾತನಾಡಿ ನಮ್ಮಲ್ಲಿರುವ ದೇಗುಲಗಳು ನಮ್ಮ ಧರ್ಮದ ಮೂಲ ಸಂಕೇತವಾಗಿದೆ ಅದರಲ್ಲೂ ಶಿವನಿಗೆ ತನ್ನದೆ ಆದ ಸ್ಥಾನ ನೀಡಲಾಗಿದೆ ಶಿವ ಅಂದರೆ ಶುಭದ ಸೂಚನೆಯಾಗಿದೆ.ಶಿವ ಹಿಂದೂ ಧರ್ಮದ ಸಾಂಸ್ಕöತಿಕ ರಾಯಬಾರಿಯಾಗಿ ನಟರಾಜನ ಸ್ವರೂಪವಾಗಿ ಕಂಗೊಳಿಸಿದ್ದಾನೆ.
ಅಂತಹ ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಹಿಂದು ಧರ್ಮಿಯರು ಆಚರಬೇಕಿದೆ,ಬದುಕಿನಲ್ಲಿ ಶ್ರೇಷ್ಠವಾಗಿರುವುದು ದಾನ ಮತ್ತು ಧರ್ಮ ಅದನ್ನು ಪ್ರತಿಯೊಬ್ಬರು ಪಾಲಿಸಬೇಕು ಆಗಮಾತ್ರ ಬದಕಿನಲ್ಲಿ ಸಾರ್ಥಕ್ಯ ಕಾಣಬಹುದಾಗಿದೆ ನಾನು ನನ್ನದು ಎಂದು ಅಹಂನಿAದ ಬದುಕುವುದನ್ನು ಮೊದಲು ಬಿಡಬೇಕು ಎಲ್ಲವುದ್ದು ನಮ್ಮದೆ ನಾವೆಲ್ಲ ಎನ್ನುವ ಭಾವನೆಗಳನ್ನು ಸೃಷ್ಠಿಸಿಕೊಳ್ಳಬೇಕು ಎಲ್ಲದಕ್ಕೂ ಹಣವೇ ಮೂಲವಾಗಲಾರದು ಮಾನವೀಯತೆ ಮೈಗೂಡಿಸಿಕೊಂಡು ಸಮೃದ್ಧ ಜೀವನ ನಡೆಸುವಂತ್ತಾಗಬೇಕು ಯುವಕ ಮಂಡಲಗಳು ಸಾಮಾಜಿಕ ಜವಾಬ್ದಾರಿಯ ಜತೆ ಧಾರ್ಮಿಕತೆಯನ್ನು ಮುನ್ನಲೆಗೆ ತರಬೇಕು ಎಂದು ಶಿವಕೃಪಾ ಯುವಕಮಂಡಲದ ಶಿವರಾತ್ರಿ ಉತ್ಸವನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ನಿಸ್ವಾರ್ಥ ಸೇವೆಗಾಗಿ ಸಮಾಜಸೇವಕ ಮಂಜುನಾಥ ಗುಂಡ್ಮಿ,ಸಾಧಕ ಕೃಷಿಕರಾದ ಭಾಗೀರಥಿ ಪೂಜಾರಿ,ಬಹುಮುಖ ಪ್ರತಿಭೆ ರಾಘವೇಂದ್ರರಾಜ್ ಇವರುಗಳನ್ನು ಸನ್ಮಾನಿಸಲಾಯಿತು. ಸಭಾಧ್ಯಕ್ಷತೆಯನ್ನು ಹೊಂಬಾಡಿ ಮಂಡಾಡಿ ಗ್ರಾಮಪಂಚಾಯತ್ ಪಿ.ಡಿ.ಓ ಚಂದ್ರಕಾAತ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಉದ್ಯಮಿ ನಾಗೇಶ್ ಪೈ,ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಸ್ಥಳೀಯರಾದ ಭಾಸ್ಕರ್ ತುಂಗ, ನಾಗರಾಜ್ ತುಂಗ, ಚಂದ್ರ ಶೇಖರ್ ಮಯ್ಯ, ಸುಬ್ರಹ್ಮಣ್ಯ ಅಡಿಗ, ಉಪಸ್ಥಿತರಿದ್ದರು.
ಶಿವಕೃಪಾ ಯುವಕ ಮಂಡಲ ಸಾಸ್ತಾನ ಅಧ್ಯಕ್ಷ ರಾಜೇಶ್ ಕೆ.ವಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ರಾಘವೇಂದ್ರ ರಾಜ್ ಪಾಂಡೇಶ್ಚರ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಸಿಂಚನ, ಸಂಗೀತ ರಸಮಂಜರಿ, ದುರ್ಗಾ ಕಲಾತಂಡ ಹಾರಾಡಿ ಒಂದಲ್ಲ ಒಂದ್ ಸಮಸ್ಯೆ ನಾಟಕ ಪ್ರದರ್ಶನಗೊಂಡಿತು.
ಮಹಾಶಿವರಾತ್ರಿ ಅಂಗವಾಗಿ ಶನಿವಾರ ಶಿವಕೃಪಾ ಯುವಕ ಮಂಡಲ ಸಾಸ್ತಾನ ಹಮ್ಮಿಕೊಂಡ ಶಿವನಾದ ಕಾರ್ಯಕ್ರಮದಲ್ಲಿ ನಿಸ್ವಾರ್ಥ ಸೇವೆಗಾಗಿ ಸಮಾಜಸೇವಕ ಮಂಜುನಾಥ ಗುಂಡ್ಮಿ, ಸಾಧಕ ಕೃಷಿಕರಾದ ಭಾಗೀರಥಿ ಪೂಜಾರಿ, ಬಹುಮುಖ ಪ್ರತಿಭೆ ರಾಘವೇಂದ್ರರಾಜ್ ಇವರುಗಳನ್ನು ಸನ್ಮಾನಿಸಲಾಯಿತು . ಹೊಂಬಾಡಿ ಮಂಡಾಡಿ ಗ್ರಾಮಪಂಚಾಯತ್ ಪಿ.ಡಿ.ಓ ಚಂದ್ರಕಾಂತ್, ಉದ್ಯಮಿ ನಾಗೇಶ್ ಪೈ, ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಸ್ಥಳೀಯರಾದ ಭಾಸ್ಕರ್ ತುಂಗ, ನಾಗರಾಜ್ ತುಂಗ, ಚಂದ್ರಶೇಖರ್ ಮಯ್ಯ, ಸುಬ್ರಹ್ಮಣ್ಯ ಅಡಿಗ,ಉಪಸ್ಥಿತರಿದ್ದರು.











Leave a Reply