ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣೂರು ಕೊಯ್ಕೂರು ಬೊಬ್ಬರ್ಯೇಶ್ವರ ಮತ್ತು ಪರಿವಾರ ದೈವಸ್ಥಾನದ ಹಾಲುಹಬ್ಬ, ಗೆಂಡ, ತುಲಾಭಾರ ಸೇವೆ ಸಂಪನ್ನ

ಕೋಟ: ಕೂಯ್ಕೂರು ಶ್ರೀ ಬೊಬ್ಬರ್ಯೇಶ್ವರ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ಹಾಲುಹಬ್ಬ ಮತ್ತು ಗೆಂಡಸೇವೆ ನಾಗದೇವರಿಗೆ ಹಾಲುಹಿಟ್ಟು ಸೇವೆ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಈ ಪ್ರಯುಕ್ತ ಮಾ.1ರ ರಾತ್ರಿ 9ಕ್ಕೆ ಮಾರಿ ಪೂಜೆ, ಮಾ.3ರಂದು ಬೆಳಗ್ಗೆ 9ಕ್ಕೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ರಾತ್ರಿ ಗೆಂಡಸೇವೆ , ಅನ್ನಸಂತರ್ಪಣೆ, ಸೋಮವಾರ  ಢಕ್ಕೆಬಲಿ, ತುಲಾಭಾರ ಸೇವೆ, ಹರಕೆ ಸಮರ್ಪಣೆ, ಹಣ್ಣುಕಾಯಿ ಸಮರ್ಪಣೆ, ಅನ್ನಸಂತರ್ಪಣೆ ಇತ್ಯಾದಿ ಸೇವೆಗಳು  ಜರಗಿದವು. ಅರ್ಚಕರಾದ ಚಂದ್ರಶೇಖರ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನವನ್ನು ನಡೆಯಿತು. ದೈವಸ್ಥಾನದ ಆನುವಂಶಿಕ ಆಡಳಿತ ಮೂಕೇಸರ ಸದಾಶಿವ ಶೆಟ್ಟಿ ಕೊಯ್ಕೂರು,ರಾಜೀವ ಶೆಟ್ಟಿ,ಸುಧಾಕರ ಶೆಟ್ಟಿ,ಸೀತಾರಾಮ ಶೆಟ್ಟಿ,ಕೃಷ್ಣಯ್ಯ ಶೆಟ್ಟಿ ಇತರರು ಉಪಸ್ಥಿತರಿದ್ದರು.

ಕೂಯ್ಕೂರು ಶ್ರೀ ಬೊಬ್ಬರ್ಯೇಶ್ವರ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ಹಾಲುಹಬ್ಬ ಮತ್ತು ಗೆಂಡಸೇವೆ ನಾಗದೇವರಿಗೆ ಹಾಲುಹಿಟ್ಟು ಸೇವೆ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಅರ್ಚಕರಾದ ಚಂದ್ರಶೇಖರ ಅಡಿಗ, ದೈವಸ್ಥಾನದ ಆನುವಂಶಿಕ ಆಡಳಿತ ಮೂಕೇಸರ ಸದಾಶಿವ ಶೆಟ್ಟಿ ಕೊಯ್ಕೂರು, ರಾಜೀವ ಶೆಟ್ಟಿ, ಸುಧಾಕರ ಶೆಟ್ಟಿ, ಸೀತಾರಾಮ ಶೆಟ್ಟಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *