ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ
ಗೋಪಾಲಕೃಷ್ಣ ನಾಯರಿ ಸಂಸ್ಮರಣಾ ಕಾರ್ಯಕ್ರಮ

ಕೋಟ: ರಂಗಕರ್ಮಿ, ದೇಶೀ ಖ್ಯಾತಿಯ ರಂಗ ನಿರ್ದೇಶಕ ಕಾರ್ಕಡ ಗೋಪಾಲಕೃಷ್ಣ ನಾಯರಿಯವರ ಸಂಸ್ಮರಣಾ ಕಾರ್ಯಕ್ರಮವನ್ನು ನಾಳೆ ಆದಿತ್ಯವಾರ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಾಲಿಗ್ರಾಮದ ಗುಂಡ್ಮಿಯ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿಯ ಸದಾನಂದ ರಂಗಮಂಟಪದಲ್ಲಿ ಸಮಸ್ತರು ಬೆಂಗಳೂರು ಹಮ್ಮಿಕೊಂಡಿರುವ ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷರಾದ ಆನಂದ.ಸಿ. ಕುಂದರ್ ವಹಿಸಲಿದ್ದು, ರಂಗ ನಿರ್ದೇಶಕ ಉಡುಪಿಯ ಉದ್ಯಾವರ ನಾಗೇಶ ಕುಮಾರ್ ಸಂಸ್ಮರಣಾ ಮಾತುಗಳನ್ನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್ ಮತ್ತು ಶಂಕರ ನಾಯರಿಯವರು ಉಪಸ್ಥಿತರಿರುವರು. ದಿವಂಗತ ನಾಯರಿಯವರ ನೆನಪಿನಲ್ಲಿ ನೀಡುವ 2024 ರ ಗೌರವ ಪ್ರಶಸ್ತಿಯನ್ನು ಹಿರಿಯ ರಂಗಭೂಮಿ ಕಲಾವಿದರಾದ ನೀಲಾವರ ಜಯರಾಮರಿಗೆ ನೀಡಿ ಗೌರವಿಸಲಾಗುವುದು. ಸಭಾಕಾರ್ಯಕ್ರಮದ ನಂತರ ಯಕ್ಷಕಲಾ ಅಕಾಡೆಮಿ ಬೆಂಗಳೂರು ಇವರಿಂದ ಪ್ರೋ.ಎಂ.ಎ.ಹೆಗಡೆ ರಚಿತ ಲವ ಕುಶ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕಲಾಕೇಂದ್ರದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *