ಕೋಟ: ದೇಶವನ್ನು ಆಳುವ ಮೂಲ ಕಾನೂನು ಸಂವಿಧಾನ. ರಾಷ್ಟçವಾಸಿಗಳ ಸುಖಜೀವನಕ್ಕೆ ಸಂಕಲ್ಪಿತವಾದ ಕಾನೂನಿನ ಬೆಳಕು ಹರಿಸಿ ಏಕತೆ – ಸಮಗ್ರತೆ ಹಾಗೂ ಧರ್ಮನಿರಪೇಕ್ಷಿತ ನಿಲುವಿನ ಭವ್ಯ ಇತಿಹಾಸ ಮೆರೆದ ಸಂವಿಧಾನ ರಾಷ್ಟçದ ಸರ್ವ ಜನತೆಗೆ ಕಾನೂನಿನ ಸಮಬಾಳು ಕಲ್ಪಿಸಿದ ಏಕಮಾತ್ರ ಲಿಖಿತ, ನಮ್ಯ – ಅನಮ್ಯ, ಸರಳ, ಕಠಿಣವಾಗಿರುವ ವಿಶ್ವದ ಅತೀ ದೊಡ್ಡ ಸಂವಿಧಾನ ಭಾರತ ಸಂವಿಧಾನ. ಜನವರಿ 26-1950ರಂದು ಅಂಗೀಕಾರಗೊAಡು ಅರ್ಪಿಸಿಕೊಂಡ ದಿನವೇ ಪ್ರಜಾಪ್ರಭುತ್ವ ಎಂದು ದಾನಿಗಳಾದ ಸೀತಾರಾಮ ಆಚಾರ್ ಬನ್ನಾಡಿ ನುಡಿದರು.
ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಇಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮನಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಜುನಾಥ ಮಧುವನ ಇವರು ವಿದ್ಯಾರ್ಥಿಗಳ ಸಾಮೂಹಿಕ ಕವಾಯಿತಿಗೆ ಚಾಲನೆ ನೀಡಿ ವಂದನೆ ಸ್ವೀಕರಿಸಿ ಧ್ವಜಾರೋಹಣ ಕಾರ್ಯಕ್ರಮ ನಿರ್ವಹಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇವರ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂವಿಧಾನ ಇತಿಹಾಸ ಹಾಗೂ ಬೆಳವಣಿಗೆ ಹಾಗೂ ದೇಶದ ಮಹಾಗ್ರಂಥ ಸಂವಿಧಾನ ಪ್ರತಿಯೊಬ್ಬರ ಮನೆ-ಮನೆಯಲ್ಲಿ ಇರಬೇಕು ಎಂದು ನಿವೃತ್ತ ಉಪನ್ಯಾಸಕ ಚಂದ್ರಶೇಖರ್ ಶೆಟ್ಟಿಯಾಳಹಕ್ಲ ಮಾತಾನಾಡಿದರು.
ಕಾರ್ಯಕ್ರಮವನ್ನು ನ್ಯಾಯವಾದಿ ಕೊತ್ತಾಡಿ ಉದಯ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಸಮಾರಂಭದಲ್ಲಿ ದಾನಿಗಳಾದ ಹೈಡ್ರೋಲಿಕ್ಸ್ (ಪ್ರೆöÊ) ಬೆಂಗಳೂರು ಎಂ.ಡಿ ಸಂತೋಷ ಶೆಟ್ಟಿ ಇವರು ಕೊಡಮಾಡಿದ ಸೌಂಡ್ಸ್ ಸಿಸ್ಟಮ್ ಹಸ್ತಾಂತರಿಸಲಾಯಿತು. ದಾನಿಗಳಾದ ಸೀತರಾಮ ಆಚಾರ, ಮುತ್ತಕ ್ಕಶೆಟ್ಟಿ ಹಾಗೂ ಅಕ್ಷರ ರಥದ ಸಾರಥಿ ಶಿವಣ್ಣ ಇವರನ್ನು ಸನ್ಮಾನಿಲಾಯಿತು. ಸಮಾರಂಭದಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ಶೆಟ್ಟಿಯಾಳಹಕ್ಲು , ವಡ್ಡರ್ಸೆ ಪಂಚಾಯತ್ ಸದಸ್ಯ ತೀರ್ಥನ್ ,ಶೇಖರ್ ಶೆಟ್ಟಿ ಮಾನಂಬಳ್ಳಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಗಾಯತ್ರಿದೇವಿ ಸ್ವಾಗತಿಸಿದರು, ಶಿಕ್ಷಕ ಹೆರಿಯ ಮಾಸ್ಟರ್ ಪ್ರಾಸ್ತಾವಿಕ ಮಾತನಾಡಿದರು, ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ಬಹುಮಾನ ಪಟ್ಟಿ ವಾಚಿಸಿದರು ಶರತ್ ಶಿಕ್ಷಕಿ ಹಾಗೂ ಭಾರತಿ ಶಿಕ್ಷಕಿ ದತ್ತಿನಿಧಿ ವಾಚಿಸಿದರು. ಗೀತಾ ನಾಯಕ್ ವಂದಿಸಿದರು ಸಮಾರಂಭದಲ್ಲಿ ಪೋಷಕರು ಎಸ್.ಡಿ.ಎಂ.ಸಿ ಸದಸ್ಯರು, ಹಳೆವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಆನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಇಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಾನಿಗಳಾದ ಮುತ್ತಕ್ಕ ಶೆಟ್ಟಿ ಇವರನ್ನು ಸನ್ಮಾನಿಲಾಯಿತು. ನ್ಯಾಯವಾದಿ ಕೊತ್ತಾಡಿ ಉದಯ ಕುಮಾರ್ ಶೆಟ್ಟಿ, ನಿವೃತ್ತ ಉಪನ್ಯಾಸಕ ಚಂದ್ರಶೇಖರ್ ಶೆಟ್ಟಿಯಾಳಹಕ್ಲ, ದಾನಿಗಳಾದ ಸೀತರಾಮ ಆಚಾರ ಮತ್ತಿತರರು ಇದ್ದರು.











Leave a Reply