ಕೋಟ: ಸೇವಾ ಸಂಗಮ ವಿದ್ಯಾ ಕೇಂದ್ರ, ವಿದ್ಯಾ ಗಿರಿ, ತೆಕ್ಕಟ್ಟೆಯಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾದ ಕೊಮೆ – ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘ ಇದರ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಸೇವಾ ಸಂಗಮ ವಿದ್ಯಾ ಕೇಂದ್ರದ ಅಧ್ಯಕ್ಷ ಸುರೇಶ್ ಬೆಟ್ಟಿನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ ಸಾಧನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಮುಂದಿನ ಬೆನ್ನೆಲುಬಾಗಿ ಕರ್ತವ್ಯ ನಿರ್ವಹಿಸಬೇಕೆಂದು ಮಕ್ಕಳಿಗೆ ಕಿವಿಮಾತುಗಳನ್ನಾಡಿದರು.
ಮುಖ್ಯ ಶಿಕ್ಷಕರಾದ ಟಿ.ವಿಷ್ಣುಮೂರ್ತಿ ಭಟ್, ಆಡಳಿತ ಮಂಡಳಿಯ ಕಾಯ9ದಶಿ9 ಕಮಲಾಕ್ಷ ಪೈ, ಸದಸ್ಯರಾದ ಸುರೇಶ್ ಆಚಾರ್ಯ, ಶಿಕ್ಷಕ, ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿ ಮತ್ತು ಪೋಷಕರು ಉಪಸ್ಥಿತರಿದ್ದರು. ಶ್ರೀಮತಿ ಸಂಧ್ಯಾ ಭಟ್ ನಿರೂಪಣೆ ಮಾಡಿ, ಶ್ರುತಿ ಸ್ವಾಗತಿಸಿದರು, ಶಕಿಲಾ. ಹೆಚ್ ಪ್ರಾಸ್ತಾವಿಕ ಮಾತನಾಡಿದರು , ಶಿಕ್ಷಕಿ ಜಯಲಕ್ಷಿ÷್ಮ ಧನ್ಯವಾದ ಅರ್ಪಿಸಿದರು. ಮಕ್ಕಳು ರಾಷ್ಟç ಗೀತೆ ಹಾಗು ಧ್ವಜ ಗೀತೆಯನ್ನು ಹಾಡಿದರು. ಕೊನೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಸೇವಾ ಸಂಗಮ ವಿದ್ಯಾ ಕೇಂದ್ರದಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘ ಇದರ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಮುಖ್ಯ ಶಿಕ್ಷಕರಾದ ಟಿ.ವಿಷ್ಣುಮೂರ್ತಿ ಭಟ್, ಆಡಳಿತ ಮಂಡಳಿಯ ಕಾಯ9ದಶಿ9 ಕಮಲಾಕ್ಷ ಪೈ, ಸದಸ್ಯರಾದ ಸುರೇಶ್ ಆಚಾರ್ಯ ಮತ್ತಿತರರು ಇದ್ದರು.











Leave a Reply