ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ವಿವೇಕ ವಿದ್ಯಾಸಂಸ್ಥೆಯ ಅಮೃತಮಹೋತ್ಸವದ ಅಮೃತಪರ್ವ ಸಮಾರೋಪ

ಮಾನವೀಯತೆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ಜಯಪ್ರಕಾಶ್ ಹೆಗ್ಡೆ
ಕೋಟ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾನವೀಯತೆ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ಜತೆಗೆ ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಕೋಟ ವಿವೇಕ ವಿದ್ಯಾಸಂಸ್ಥೆಯ ಅಮೃತಮಹೋತ್ಸವದ ಅಮೃತಪರ್ವದ ಮೂರನೇ ದಿನದ ಅಮೃತಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮಾನವೀಯತೆಗೆ ಮಿಗಿಲಾದ ಧರ್ಮ ಬೇರೊಂದಿಲ್ಲ ಅದರ ಜತೆಗೆ ನಾಗರೀಕತೆಯನ್ನು ಮೈಗೂಡಿಸಿಕೊಂಡು ಸಂಸ್ಕಾರ ಭರಿತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಮುನ್ನುಗ್ಗಿ ಎಂದರಲ್ಲದೆ ಇತ್ತೀಚಿಗೆ ವಿದ್ಯಾರ್ಥಿಗಳ ಜೀವನದ ಜತೆ ಸಂಕಷ್ಟ ತಂದೊಡ್ಡುವ ಮಾದಕವಸ್ತು ಮುಕ್ತರಾಗಿಸಲು ಶೈಕ್ಷಣಿಕ ಸಂಸ್ಥೆಗಳು ಹೆಚ್ಚಿನ ಗಮನ ಹರಿಸಲು ಸಲಹೆ ಇತ್ತರು.

ಮಕ್ಕಳು ತಮ್ಮ ತಂದೆ ತಾಯಿ ಗುರುಹಿರಿಯರಿಗೆ ಗೌರವ ನೀಸುವ ಮನಸ್ಥಿತಿಯನ್ನು ಸೃಷ್ಠಿಸಿಕೊಳ್ಳಬೇಕು,ಸಾಮಾಜಿಕ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು,ಯಾವುದೇ ವಿದ್ಯಾಸಂಸ್ಥೆ ಅಥವಾ ಮನೆಗಳಿರಬಹುದು ಮೊದಲು ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಆ ಮೂಲಕ ಸುಸಂಸ್ಕöÈತ ವ್ಯಕ್ತಿಗಳಾಗಿ ಸಮಾಜದ ಸ್ವಾಸ್ಥ÷್ಯ ಕಾಪಾಡಲು ಸಲಹೆ ಇತ್ತರು.
ವಿವೇಕ ವಿದ್ಯಾ ದೇಗುಲದ ಶೈಕ್ಷಣಿಕ ಸಾಧನೆ ಅಗಾಧವಾಗಿದೆ.ಇಲ್ಲಿನ ವಿದ್ಯಾರ್ಥಿ ಸಮೂಹ ಇಡೀ ವ್ಯವಸ್ಥೆಗೆ ಮಾದರಿಯಾಗಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ನಾಡೋಜ ಡಾ.ಜಿ ಶಂಕರ್ ಮಾತನಾಡಿ ಯಾವುದೆ ವಿದ್ಯಾರ್ಥಿ ಬಹು ಎತ್ತರಕ್ಕೆ ಬೆಳೆಯಲು ಶಿಸ್ತು ಅತ್ಯಗತ್ಯವಾಗಿದೆ ಇದನ್ನು ಮೈಗೂಡಿಸಿಕೊಂಡರೆ ಜೀವನದ ಯಶಸ್ಸಿನ ಮಜಲುಗಳನ್ನು ದಾಟಬಹುದಾಗಿದೆ.ವಿವೇಕ ವಿದ್ಯಾಸಂಸ್ಥೆ ಗ್ರಾಮೀಣ ಭಾಗದ ಸಂಸ್ಕಾರಭರಿತ ಶಿಕ್ಷಣದ ದೇಗುಲವಾಗಿ ಮಾರ್ಪಾಡುಗೊಂಡಿದೆ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಶೈಕ್ಷಣಿಕ ಕ್ಷೇತ್ರದ ಹೊಸ ಭಾಷ್ಯ ಬರೆದಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆಯನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಹಿಸಿದ್ದರು.
ಇದೇ ವೇಳೆ ಸಂಸ್ಥೆಯ ಶೈಕ್ಷಣಿಕ ಸಾಧನೆಗೈದ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಹೃದ್ರೋಗ ತಜ್ಞೆ ಡಾ.ಪ್ರಭಾವತಿ,ಎಕ್ಸ್ಪಟ್9 ವಿದ್ಯಾಸಮೂಹ ಸಂಸ್ಥೆಯ ಚೇರ್‌ಮೆನ್ ನರೇಂದ್ರ ಎಲ್ ನಾಯಕ್,ವಿವೇಕ ವಿದ್ಯಾಸಂಘದ ಅಧ್ಯಕ್ಷ ಸಿ ಎ ಪಿ.ಪ್ರಭಾಕರ್ ಮಯ್ಯ, ಕಾರ್ಯದರ್ಶಿ ಎಂ ರಾಮದೇವ್ ಐತಾಳ್, ಉಪಾಧ್ಯಕ್ಷ ಪಿ ಶ್ರೀಧರ ಉಪಾಧ್ಯ,ಕೋಶಾಧಿಕಾರಿ ವಲೇರಿಯನ್ ಮೆನೇಜಸ್,ಹಳೇ ವಿದ್ಯಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇಂಪಿ ರಮಾನಂದ್ ಭಟ್, ಕಾರ್ಯದರ್ಶಿ ಪಿ.ಮಂಜುನಾಥ್ ಉಪಾಧ್ಯ, ವಿವೇಕ ವಿದ್ಯಾದೇಗುಲದ ವಿವಿಧ ವಿಭಾಗದ ಮುಖ್ಯ ಶಿಕ್ಷಕರಾದ ಕೆ.ಜಗದೀಶ್ ಹೊಳ್ಳ,ವೆಂಕಟೇಶ ಉಡುಪ,ಭಾಸ್ಕರ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಾಂಶುಪಾಲ ಕೆ.ಜಗದೀಶ್ ನಾವಡ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಕೋಟ ವಿವೇಕ ವಿದ್ಯಾಸಂಸ್ಥೆಯ ಅಮೃತಮಹೋತ್ಸವದ ಅಮೃತಪರ್ವದ ಮೂರನೇ ದಿನದ ಅಮೃತಧಾರೆ ಕಾರ್ಯಕ್ರಮವನ್ನು ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಬೆಂಗಳೂರಿನ ಹೃದ್ರೋಗ ತಜ್ಞೆ ಡಾ.ಪ್ರಭಾವತಿ,ಎಕ್ಸ್ಪಟ್9 ವಿದ್ಯಾಸಮೂಹ ಸಂಸ್ಥೆಯ ಚೇರ್‌ಮೆನ್ ನರೇಂದ್ರ ಎಲ್ ನಾಯಕ್,ವಿವೇಕ ವಿದ್ಯಾಸಂಘದ ಅಧ್ಯಕ್ಷ ಸಿ ಎ ಪಿ.ಪ್ರಭಾಕರ್ ಮಯ್ಯ,ಕಾರ್ಯದರ್ಶಿ ಎಂ ರಾಮದೇವ್ ಐತಾಳ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *