ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಛಾಯಾ ಸಮ್ಮಾನ್ ಅಭಿನಂದನಾ ಸಮಾರಂಭ

ಬೇರೆಯವರ ಮುಖದಲ್ಲಿ ನಗುವಿರಲೆಂದು ಆಶಿಸಿ ಸದಾ ಸ್ಮೈಲ್ ಪ್ಲೀಸ್ ಎಂದೆನ್ನುವವರು ಛಾಯಾಗ್ರಾಹಕರು ಮಾತ್ರ. ಹಾಗಾಗಿ ಅವರು ಎಲ್ಲರಿಗೂ ಆತ್ಮೀಯರು. ತಮ್ಮದೇ ವೃತ್ತಿ ಬಾಂಧವರನ್ನು ವ್ಯಾಪಾರ ವಹಿವಾಟನ್ನು ನಡೆಸುವ ವೃತ್ತಿ ಪರ ಸಂಸ್ಥೆಗಳೊಂದಿಗೆ ಸೇರಿ ಗುರುತಿಸಿ ಗೌರವಿಸುವುದು ಅಭಿನಂದನೀಯ ಎಂದು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ತನಿಷ್ಕ್ ಗೋಲ್ಡ್ ಮತ್ತು ಡೈಮಂಡ್ ಜ್ಯುವೆಲ್ಲರಿ ಉಡುಪಿಯಲ್ಲಿ ಆಯೋಜಿಸಿದ್ದ ಛಾಯಾ ಸಮ್ಮಾನ್ ಕಾರ್ಯಕ್ರಮವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉದ್ಘಾಟಿಸಿ ಮಾತನಾಡಿದರು‌.

ಈ ಸಂದರ್ಭದಲ್ಲಿ ಹಿರಿಯ ಹಾಗೂ ಛಾಯಾ ಸಾಧಕ ಛಾಯಾಗ್ರಾಹಕರಾದ ಮಂಜುನಾಥ ದೇವಾಡಿಗ, ಕೃಷ್ಣ ಸೇರಿಗಾರ, ಜಯಕರ ದೇವಾಡಿಗ, ರಮೇಶ್ ಎಸ್. ಪೂಜಾರಿ, ಸುಜಾತ ಅಂದ್ರಾದೆಯವರಿಗೆ ಛಾಯಾ ಸಮ್ಮಾನ್ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ರೊ. ಬಾಲಕೃಷ್ಣ ಮದ್ದೋಡಿ, ಕೆ. ವಾಸುದೇವ ರಾವ್, ಸುಧೀರ್ ಎಂ. ಶೆಟ್ಟಿ, ಸಂದೀಪ್ ಕಾಮತ್, ವಾಮನ ಪಡುಕೆರೆ, ಗ್ರೆಟ್ಟಾ ಸಲ್ಡಾನ್ಹಾ, ಲಿಯಾನ್ ಸಲ್ಡಾನ್ಹಾ, ಒನೆಲ್ ಸಲ್ಡಾನ ಉಪಸ್ಥಿತರಿದ್ದರು.

ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ತನಿಷ್ಕ್ ಉಡುಪಿ ಶಾಖೆಯ ಬಿಸಿನೆಸ್ ಅಸೋಸಿಯೇಟ್ ಮ್ಯಾಕ್ಸಿಮ್ ಸ್ಟೀಫನ್ ಸಲ್ಡಾನ್ಹಾ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಶೋಬಿತ ಧನ್ಯವಾದವಿತ್ತರು.

Leave a Reply

Your email address will not be published. Required fields are marked *