ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಡ್ಡರ್ಸೆ: ಶೈಕ್ಷಣಿಕ ಕ್ಷೇತ್ರದ ಸಾಧಕಿ ಪ್ರಣಮ್ಯಗೆ ಅಭಿನಂದನೆ

ಕೋಟ: ವಿದ್ಯೆಯು ತಪಸ್ಸಿದ್ದಂತೆ, ಅದನ್ನು ಸಿದ್ದಿಸಿಕೊಳ್ಳುವಲ್ಲಿ ನಿರಂತರ ಪ್ರಯತ್ನ ಇರಬೇಕು. ಸಾಧನೆಯ ಹಾದಿಯಲ್ಲಿ ಶಿಕ್ಷಣವು ಸಾಥ್ರ್ಯಕ್ಯ ಕಾಣುವ ಹಂಬಲ ಕಲಿಕೆಯಲ್ಲಿದ್ದಾಗ ಅಭ್ಯಾಸವು ಛಲದ ಮೂಲಕ ಸಾಗುತ್ತದೆ. ಕಲಿತ ವಿದ್ಯೆಯು ಫಲಿತವಾದಾಗ ಹುಟ್ಟಿದ ಊರಿಗೆ, ಹೆತ್ತ ತಂದೆ-ತಾಯಿಗೆ, ಕಲಿತ ಶಾಲೆಗೆ ಗೌರವ ಸಿಕ್ಕಂತಾಗುವುದು ಎಂದು ಸರಕಾರಿ ಪ್ರೌಢ ಶಾಲೆ ವಡ್ಡರ್ಸೆ ಶಾಲೆ ಮುಖ್ಯ ಶಿಕ್ಷಕಿ ಗಾಯತ್ರಿದೇವಿ ಹೇಳಿದರು..

ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ವಡ್ಡರ್ಸೆ ಶಾಲೆಯಲ್ಲಿ “ಪ್ರತಿಭಾಸಿರಿ“ ಶೀರ್ಷಕೆಯಡಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಐಐಟಿ ಖರಗ್‍ಪುರ ಪಶ್ಚಿಮ ಬಂಗಾಳ ಕಾಲೇಜಿಗೆ ಆಯ್ಕೆಯಾದ ಪ್ರಣಮ್ಯ ತೆಕ್ಕಟ್ಟೆ ಇವರನ್ನು ಅಭಿನಂದಿಸಲಾಯಿತು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣವಾಗಿ ಸಮುದಾಯಕ್ಕೆ ಉಪಯೋಗ ಆಗಬೇಕು, ಆಸಕ್ತಿಯ ಕಲಿಕೆಯು ಹಂಬಲವಾದಗ ಸಮುದಾಯದ ಬೆಂಬಲವು ದೊರಕುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡ ಬೇಕು, ಪ್ರಣಮ್ಯ ಇವಳ ಸಂಮ್ಮಾನವು ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಹಿರಿಯ ಶಿಕ್ಷಕ ಆನಂದ ಶೆಟ್ಟಿ ಹೇಳಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಸಾಧಕಿ ಪ್ರಣಮ್ಯ ತಿಳಿಸಿದರು. ಶಿಕ್ಷಕರಾದ ಗೀತಾ ಶೆಟ್ಟಿ, ಶರತ್, ಸುಧಾಕರ್, ಹೆರಿಯ ಉಪಸ್ಥಿತರಿದ್ದರು. ಶಿಕ್ಷಕಿ ಗೀತಾ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕಿ ಭಾರತಿ ವಂದಿಸಿದರು.

ಐಐಟಿ ಖರಗ್‍ಪುರ ಪಶ್ಚಿಮ ಬಂಗಾಳ ಕಾಲೇಜಿಗೆ ಆಯ್ಕೆಯಾದ ಪ್ರಣಮ್ಯ ತೆಕ್ಕಟ್ಟೆ ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ವಡ್ಡರ್ಸೆ ಶಾಲೆಯಲ್ಲಿ “ಪ್ರತಿಭಾಸಿರಿ“ ಶೀರ್ಷಕೆಯಡಿ ಅಭಿನಂದಿಸಲಾಯಿತು. ಶಿಕ್ಷಕರಾದ ಗೀತಾ ಶೆಟ್ಟಿ, ಶರತ್, ಸುಧಾಕರ್, ಹೆರಿಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *