ಕೋಟ: ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ವತಿಯಿಂದ ಮೂಡಗಿಳಿಯಾರು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭವನ್ನು ಆ. 10ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಅಧ್ಯಕ್ಷ ದೇವಪ್ಪ ಪಟಗಾರ ವಹಿಸಿದ್ದರು. ವಿಶೇಷ ಆಹ್ವನಿತರಾಗಿ ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೆರ್ಳೇ ಅವರು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ವಲಯ 2ರ ಸಹಾಯಕ ಗವರ್ನರ್ ನರಸಿಂಹ ಪ್ರಭು, ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷರಾಜೇಂದ್ರ ಸುವರ್ಣ, ಕಾರ್ಯದರ್ಶಿ ಜಿ. ತಿಮ್ಮ ಪೂಜಾರಿ, ಮೂಡುಗಿಳಿಯಾರು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವರಾಮ ಭಟ್ ಎಂ ಮತ್ತು ಇಂಟ್ರಾಕ್ಟ್ ಕ್ಲಬ್ ಸಂಯೋಜಕರಾದ ಅಶೋಕ್ ಪಿ ಎಸ್ ಉಪಸ್ಥಿತರಿದ್ದರು. ಇಂಟ್ರಾಕ್ಟ್ ಕ್ಲಬ್‍ನ ನೂತನ ಅಧ್ಯಕ್ಷರಾದ ಕುಮಾರಿ ನಿಶ್ಮಿತಾ ಮತ್ತು ಅವರ ತಂಡಕ್ಕೆ ಪದ ಪ್ರಧಾನ ನೆರವೆರಿತು.
ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ವತಿಯಿಂದ ಮೂಡಗಿಳಿಯಾರು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ ಪದಗ್ರಹಣ ಇತ್ತೀಚಿಗೆ ಮೂಡುಗಿಳಿರು ಶಾಲೆಯಲ್ಲಿ ನೆರವೆರಿತು.











Leave a Reply