ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ ) ಅಂಬಲಪಾಡಿ ಇವರ ನೇತೃತ್ವದಲ್ಲಿ,ರೋಟರಿ ಕ್ಲಬ್, ಕೋಟೇಶ್ವರ, ಹೆಲ್ಪಿಂಗ್ ಹ್ಯಾಂಡ್ಸ್ ಕೋಟೇಶ್ವರ, ಜಿಲ್ಲಾಡಳಿತ, ರಕ್ತನಿಧಿ ಕೆ ಎಂ ಸಿ ಮಣಿಪಾಲ ಇವರ ಸಹಯೋಗದಲ್ಲಿ ದಿನಾಂಕ : 19-07-2026, ಭಾನುವಾರದಂದು ಕೋಟೇಶ್ವರದ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಪೋಸ್ಟರ್ ಅನಾವರಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ, ಕೋಟೇಶ್ವರ ಘಟಕದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಹರಪನಕೆರೆ, ರೋಟರಿ ಕ್ಲಬ್, ಕೋಟೇಶ್ವರ ದ ಅಧ್ಯಕ್ಷರಾದ ಅಕ್ಷತಾ ಗಿರೀಶ್, ರೋಟರಿ ಕ್ಲಬ್ ಪೂರ್ವ ಅಧ್ಯಕ್ಷರಾದ ಶ್ರೀ ಸತೀಶ್ ಎಂ ನಾಯಕ್, ಶ್ರೀ ಜಗದೀಶ್ ಮಾರ್ಕೋಡು, ಮೊಗವೀರ ಯುವ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಅಶೋಕ ತೆಕ್ಕಟ್ಟೆ, ಕೋಟೇಶ್ವರ ಘಟಕದ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಗಾಯತ್ರಿ ವಿಕ್ರಮ್, ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ, ಮಹಿಳಾ ಕಾರ್ಯದರ್ಶಿ ರಾಜೇಶ್ವರಿ ರೋಟರಿ ಕ್ಲಬ್ ಕೋಟೇಶ್ವರದ ಕಾರ್ಯದರ್ಶಿ ಅರುಣ್ ದೇವಾಡಿಗ, ಉಪಸ್ಥಿತರಿದ್ದರು.











Leave a Reply