ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯೋಗ ಮತ್ತು ರೆಡ್ ಕ್ರಾಸ್ ಮಾಹಿತಿ ಕಾರ್ಯಕ್ರಮ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ಯೋಗ ಮತ್ತು ರೆಡ್ ಕ್ರಾಸ್ ಗೆ ಸಂಬಂಧಿಸಿದ ಕಾರ್ಯಕ್ರಮ ವೊಂದನ್ನು ಆಯೋಜಿಸಲಾಗಿತ್ತು. ಅಭ್ಯಾಗತರಾದ ಹಿರೇ ಬೆಟ್ಟು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಯೋಗ ಶಿಕ್ಷಕಿ ಶೀಮತಿ ಶೋಭಾ ಶೆಟ್ಟಿಯವರು ವಿದ್ಯಾರ್ಥಿ- ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ‘ ಯೋಗ ಕೇವಲ ವಾರ್ಷಿಕ ದಿನಾಚರಣೆ ಆಗದೆ ನಿತ್ಯ ಜೀವನ ಪದ್ಧತಿ ಯಾಗಬೇಕು. ಶಾಲೆಗಳಲ್ಲಿ ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಒಟ್ಟು ವಾತಾವರಣ ಧನಾತ್ಮಕ ವಾಗುತ್ತದೆ ‘ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲೆ ಶ್ರೀ ಮತಿ ಧನಲಕ್ಷ್ಮಿಯವರು ರೆಡ್ ಕ್ರಾಸ್ “ನೊಂದ ಜಗದ ಜನರ ಜೀವನವನ್ನು ಹಸನುಗೊಳಿಸಿದೆ. ವಿದ್ಯಾರ್ಥಿ-ಶಿಕ್ಷಕರು ಯೋಗ ಮತ್ತು ರೆಡ್ ಕ್ರಾಸ್ ಚಡುಚಟಿಕೆಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು ಎಂದು ನುಡಿದರು.

ಅರುಂಧತಿ, ಚೈತ್ರಾ. ಎಂ,ಭಾಗ್ಯಲಕ್ಷ್ಮೀ,ಚೈತ್ರಾ ಕೆಸಿ ಹಾಗೂ ತಂಡದವರು ರೆಡ್ ಕ್ರಾಸ್ ಮತ್ತು ಯೋಗಾಭ್ಯಾಸ ಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಿಕೊಟ್ಟರು. ರೀಮಾ ರಚನಾ ಸಲ್ದಾನ ಸ್ವಾಗತ ಕೋರಿದರು ದೀಪಕ್ ಧನುಷಾ ಪೂಜಾರಿ ಧನ್ಯವಾದ ಸಮರ್ಪಿಸಿದರು. ಸೌಜನ್ಯ ಮತ್ತು ಫಾತಿಮಾತ್ ಜಹೀರ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Leave a Reply

Your email address will not be published. Required fields are marked *