ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದಲ್ಲಿ ಅದ್ಧೂರಿಯ ಸ್ವಾಗತ

ಕೋಟ: ಸಂಸದರಾಗಿ ಅತ್ಯಧಿಕ ಮತಗಳಿಂದ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಹುಟ್ಟೂರು ಕೋಟದಲ್ಲಿ ಅದ್ಧೂರಿಯ ಸ್ವಾಗತ ಕೋರಲಾಯಿತು. ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿಯ ಪೂರ್ವಾಧ್ಯಕ್ಷ  ಆನಂದ್ ಸಿ ಕುಂದರ್ ಹಾರತೋಡಿಸಿ ಸ್ವಾಗತಿಸಿಕೊಂಡರು.

ನಂತರ ನೂರಾರು ಬಿಜೆಪಿ ಕಾರ್ಯಕರ್ತರು ಅಭಿಮಾನಗಳೊಂದಿಗೆ ಕೋಟ ಅಮೃತೇಶ್ವರಿ ದೇಗುಲದವರೆಗೆ ಕಾಲ್ನಡಿಗೆಯ ಮೂಲಕ ತೆರಳಿ ಪೂಜೆ ಸಲ್ಲಿಸಿದರು.ದೇಗುಲದ ವತಿಯಿಂದ ಶಾಲು ಹೋದಿಸಿ ಪ್ರಸಾದ ವಿತರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳು, ಗಣ್ಯರು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *