ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಲೋಡ್ ಶೆಡ್ಡಿಂಗ್ ನಿಲ್ಲದಿದ್ದರೆ ಪ್ರತಿಭಟನೆ – ಕೊಡವೂರು

ಉಡುಪಿ ಜಿಲ್ಲೆಯನ್ನು ನಾವು ಬುದ್ದಿವಂತರ ಜಿಲ್ಲೆ ಎಂದು ತಿಳಿಯುತ್ತೇವೆ. ಎಸೆಸೆಲ್ಸಿ ಮತ್ತು ಪಿಯುಸಿಯ ಮಕ್ಕಳು ಕಣ್ಣಿಗೆ ಎಣ್ಣೆ ಬಿಟ್ಟು ಹಗಲು ರಾತ್ರಿ ಓದಿ ಅಂಕವನ್ನು ಪಡೆಯುತ್ತಾರೆ. ಆದರೆ ಈಗಿನ ರಾಜ್ಯ ಸರಕಾರದ   ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದಾಗಿ ಮಕ್ಕಳಿಗೆ ಹಾಗೂ ಎಸೆಸೆಲ್ಸಿ ವಿದ್ಯಾರ್ಥಿಗಳಿಗೂ ತುಂಬಾ ತೊಂದರೆಯಾಗಿದೆ.

ಆದರಿಂದ ಈ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದನ್ನು ನಿಲ್ಲಿಸಬೇಕು ಬುದ್ದಿವಂತರ ಜಿಲ್ಲೆಯಲ್ಲಿ ಈ ರೀತಿಯ ಲೋಡ್ ಶೆಡ್ಡಿಂಗ್ ಮಾಡುವುದರಿಂದ ಮಕ್ಕಳಿಗೆ ಓದಲು ಆಗುವುದಿಲ್ಲ, ಸೆಕೆಯಿಂದಾಗಿ ಮನೆಯ ಒಳಗೆ ಕುಳಿತುಕೊಳ್ಳಲು ಆಗುವುದಿಲ್ಲ, ಸೊಳ್ಳೆಯ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರಿಂದ ಬುದ್ದಿವಂತರ ಜಿಲ್ಲೆಯಾಗಿ ಉಳಿಸಿಕೊಳ್ಳುವ ಮೂಲಕ ಲೋಡ್ ಶೆಡ್ಡಿಂಗ್ ನಿಲ್ಲಿಸುವುದು ಆಗಬೇಕು. ಇನ್ನು ಮುಂದಿನ ದಿನಗಳಲ್ಲಿ ಅನೇಕ ಪರೀಕ್ಷೆಗಳಿವೆ ಅದರಿಂದ ಇನ್ನು ಮುಂದಿನ ದಿನಗಳಲ್ಲಿ ಲೋಡ್ ಶೆಡ್ಡಿಂಗ್ ಮುಂದುವರೆಸಿದರೆ ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡುತ್ತೇವೆ ಎಂದರು.

ಈ ಸಂದರ್ಬದಲ್ಲಿ ಕೊಡವೂರು ವಾರ್ಡಿನ ನಗರಸಭಾ ಸದಸ್ಯರಾದ ಶ್ರೀ ಕೆ ವಿಜಯ್ ಕೊಡವೂರು, ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ ಅಧ್ಯಕ್ಷರಾದ ರಾಧಾಕೃಷ್ಣ ಮೆಂಡನ್, ಅಶೋಕ್ ಆಚಾರ್ಯ ಕಾರ್ಕಳ, ಆಂಡ್ರ್ಯೂ  ಉಡುಪಿ,ಅಖಿಲೇಶ್ ಎ ಉಜಿರೆ,ಸಂದೀಪ್ ಮಲ್ಪೆ ಮತ್ತಿತರರು ಹಾಜರಿದ್ದರು

Leave a Reply

Your email address will not be published. Required fields are marked *