ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀಪಂಚಮುಖಿ ಮಹಾಗಣಪತಿ ದೇವಸ್ಥಾನದಲ್ಲಿ ಅಷ್ಟೋತ್ತರಶತ ನಾಳಿಕೇರ, ಸಮ್ಮಿಶ್ರಾಷ್ಟದ್ರವ್ಯ ಗಣಯಾಗ ಸಂಪನ್ನ

ಕೋಟ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀಪಂಚಮುಖಿ ಮಹಾಗಣಪತಿ ದೇವಸ್ಥಾನದಲ್ಲಿ ಆ.17ಗುರುವಾರದಂದು ಸಿಂಹವಾಹನನಾದ ಹೇರಂಬ ಮಹಾಗಣಪತಿಗೆ ಸಿಂಹ ಸಂಕ್ರಮಣದಂದು ತಂತ್ರಿಗಳಾದ ಗಣೇಶ್ ಐತಾಳ್ ಹಾಗೂ ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ, ಶ್ರೀಕ್ಷೇತ್ರ ಗರಿಕೇಮಠ ಇವರ ನೇತೃತ್ವದಲ್ಲಿ ಅಷ್ಟೋತ್ತರಶತ ನಾಳಿಕೇರ (108 ಕಾಯಿ) ಸಮ್ಮಿಶ್ರಾಷ್ಟದ್ರವ್ಯ ಗಣಯಾಗ ಗುರುವಾರ ಸಂಪನ್ನಗೊಂಡಿತು. ಶ್ವೇತಾ ಶ್ರೀಶಾಸ್ತ. ಸಿ. ಶೆಟ್ಟಿ, ಪಟೇಲರ ಮನೆ, ಮಣೂರು , ವತ್ಸಲಾ ಶ್ರೀಧರ ಶೆಟ್ಟಿ, ಪಟೇಲರ ಮನೆ ಮಣೂರು ಸೇವಾಕರ್ತರಾಗಿ ಭಾಗವಹಿಸಿದರು.ದೇವಸ್ಥಾನ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಸದಸ್ಯರಾದ ಬಾಬು, ದಿನೇಶ್ ಆಚಾರ್, ಅಶೋಕ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀಪಂಚಮುಖಿ ಮಹಾಗಣಪತಿ ದೇವಸ್ಥಾನದಲ್ಲಿ ಅಷ್ಟೋತ್ತರಶತ ನಾಳಿಕೇರ (108 ಕಾಯಿ) ಸಮ್ಮಿಶ್ರಾಷ್ಟದ್ರವ್ಯ ಗಣಯಾಗ ಗುರುವಾರ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *