ಕೋಟ: ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗಸoಸ್ಥೆ ತನ್ನ ವಾರ್ಷಿಕ ಮಹಾ ಸಭೆಯ ಅಂಗವಾಗಿ ಸಮಾಜದ ಹಿರಿಯ ಚೇತನಗಳನ್ನು ಗುರುತಿಸಿ ಗೌರವಿಸುವ ಹಿನ್ನೆಲೆಯಲ್ಲಿ ಹಿರಿಯ ಸಾಧಕರು, ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲೋರ್ವರೂ, ರಾಷ್ಟçಪ್ರಶಸ್ತಿ ಪುರಸ್ಕೃತ ಶಿಕ್ಷಕ 91ರ ಹಿರಿಯ ಮುತ್ಸದ್ಧಿ ಎಚ್. ಶ್ರೀಧರ ಹಂದೆಯವರನ್ನು ಅವರ ಸ್ವಗೃಹದಲ್ಲಿ ಸಂಮಾನಿಸಿದರು.
ಸಾಲಿಗ್ರಾಮ ದೇವಳದ ಆಡಳಿತ ಮಂಡಳಿಯ ಸದಸ್ಯ ತಾರಾನಾಥ ಹೊಳ್ಳ, ಅಂಗಸoಸ್ಥೆಯ ಕಾರ್ಯದರ್ಶಿ ಮಹಾಬಲೇಶ್ವರ ಹೇರ್ಳೆ, ಜೊತೆ ಕಾರ್ಯದರ್ಶಿ ಚಿದಾನಂದ ತುಂಗ, ಪನ್ನಗ ನಾವಡ, ಸದಸ್ಯರಾದ ಪ್ರಕಾಶ್ ಹೇರ್ಳೆ, ಗ್ರಾಮ ಪ್ರತಿನಿಧಿ ಸುದರ್ಶನ ಉರಾಳ, ಛಾಯಾಗ್ರಾಹಕ ವಿ.ಜಿ.ಮಯ್ಯ, ವಸುಮತಿ ಹಂದೆ, ವಿನಿತ ಸುಜಯೀಂದ್ರ ಹಂದೆ ಉಪಸ್ಥಿತರಿದ್ದರು.
ಕೂಟ ಮಹಾ ಜಗತ್ತಿನ ಸಾಲಿಗ್ರಾಮ ಅಂಗಸoಸ್ಥೆಯ ಸಕ್ರಿಯ ಸದಸ್ಯ ಮಂಜುನಾಥ ಉಪಾಧ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶ್ರೀಪತಿ ಅಧಿಕಾರಿ ವಂದಿಸಿದರು.ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗಸoಸ್ಥೆ ತನ್ನ ವಾರ್ಷಿಕ ಮಹಾ ಸಭೆಯ ಅಂಗವಾಗಿ ಮಕ್ಕಳ ಮೇಳದ ಎಚ್ ಶ್ರೀಧರ ಹಂದೆಯಯವರನ್ನು ಅವರ ಸ್ವಗೃಹದಲ್ಲಿ ಸಂಮಾನಿಸಿದರು. ಸಾಲಿಗ್ರಾಮ ದೇವಳದ ಆಡಳಿತ ಮಂಡಳಿಯ ಸದಸ್ಯ ತಾರಾನಾಥ ಹೊಳ್ಳ, ಅಂಗಸoಸ್ಥೆಯ ಕಾರ್ಯದರ್ಶಿ ಮಹಾಬಲೇಶ್ವರ ಹೇರ್ಳೆ, ಜೊತೆ ಕಾರ್ಯದರ್ಶಿ ಚಿದಾನಂದ ತುಂಗ ಇದ್ದರು.












Leave a Reply