ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಪಾಂಡೇಶ್ವರ ವಲಯದ ಸಾಸ್ತಾನ ಕಾರ್ಯಕ್ಷೇತ್ರದ ವಿಕಾಸ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಬಳಕೆಯ ಮಾಹಿತಿ ಕಾರ್ಯಕ್ರಮ ಭಾನುವಾರ ಯಡಬೆಟ್ಟು ವಿದ್ಯೋದಯ ಶಾಲೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷೆ ಕುಸುಮಾ ಮನೋಜ್ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮನೋಶಾಸ್ತ್ರಜ್ಞರಾದ ಜಯಶ್ರೀ ಭಟ್ ಇವರು ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ನೀಡಿ ಆಹಾರ ಸೇವನೆಯಲ್ಲಿ ಯಾವ ರೀತಿ ಸೇವನೆ ಮಾಡಬೇಕು ದಿನನಿತ್ಯ ನಾವು ಸೇವಿಸುವ ಆಹಾರದಲ್ಲಿ ಪೌಷ್ಟಿಕ ಆಹಾರ ಇರಬೇಕು. ನಮ್ಮ ದಿನಚರಿಗಳು ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಮನ ಮುಟ್ಟುವ ರೀತಿಯಲ್ಲಿ ಮಾಹಿತಿ ನೀಡಿದರು.
ಸಭಾಧ್ಯಕ್ಷತೆಯನ್ನು ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ನಾವು ತಿನ್ನುವ ಆಹಾರದಲ್ಲಿ ಪೌಷ್ಟಿಕ ಆಹಾರ ಇರುವ ಪದಾರ್ಥಗಳಾದ ಸೊಪ್ಪು ಬೇಳೆ ಕಾಳು ತರಕಾರಿಗಳನ್ನು ಹೆಚ್ಚು ಹೆಚ್ಚು ಬಳಸಬೇಕು ಪೌಷ್ಟಿಕಾಹಾರ ಮೇಳಗಳ ಮೂಲಕ ನಮ್ಮ ಹಿಂದಿನ ಆಹಾರ ಪದ್ದತಿಗಳ ಅನಾವರಣ ಶ್ಲಾಘನೀಯ ಎಂದರು.
ಕಾರ್ಯಕ್ರಮ ಪೌಷ್ಟಿಕ ಆಹಾರ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಪತ್ರಕರ್ತ ರವೀಂದ್ರಕೋಟ, ಯಡಬೆಟ್ಟು ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ, ಶೌರ್ಯ ವಿಪತ್ತು ಸದಸ್ಯರಾದ ಕಾಳಿಂಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ಪುಷ್ಪಲತಾ ನಿರೂಪಿಸಿ, ಸೇವಾ ಪ್ರತಿನಿಧಿ ಶೋಭಾ ಸ್ವಾಗತಿಸಿ, ಕಲ್ಪನಾ ದಿನಕರ್ ವಂದಿಸಿದರು.












Leave a Reply